ಶ್ರೀನಿವಾಸಪುರ:-ನಾಯಕತ್ವದ ಕೊರತೆ ಹಾಗು ಪಂಚಾಯಿತಿ ಕಾಯ್ದೆ ಮಾಹಿತಿ ಇಲ್ಲದೆ ತಾಲೂಕಿನ ಲಕ್ಷ್ಮಿಸಾಗರ ಪಂಚಾಯತಿಯಲ್ಲಿ ಜೆ.ಡಿ.ಎಸ್ ಅಧಿಕಾರ ಕಳೆದುಕೊಂಡಿದೆ ಎನ್ನುವ ಮಾತು ಕೇಳಿ ಬರುತ್ತಿದೆ!
ರೆಬಲ್ ಕಾಂಗ್ರೆಸ್ ಮುಖಂಡರ ಸಲಹೆ ಪಡೆದ ಶ್ರೀನಿವಾಸಪುರದ ಜೆಡಿಎಸ್ ಮುಖಂಡರು ಪಂಚಾಯಿತಿ ಅಧ್ಯಕ್ಷ ಗಾಧಿಗೆ ನಿಗದಿಯಾಗಿದ್ದ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೋಳ್ಳದೆ ದೂರ ಉಳಿದು ಅನಾಯಸವಾಗಿ ಅಧ್ಯಕ್ಷ ಗಾಧಿ ಅಧಿಕಾರವನ್ನು ಕೈ ಚಲ್ಲಿಕೊಂಡಿದೆ ಎಂದು ಜೆಡಿಎಸ್ ಮುಖಂಡರು ಹೇಳುತ್ತಾರೆ.
ಕಾಂಗ್ರೆಸ್ ಬೆಂಬಲಿತ ಲಕ್ಷ್ಮಿದೇವಮ್ಮ ಅಧ್ಯೆಕ್ಷೆ!
ಶ್ರೀನಿವಾಸಪುರ ತಾಲೂಕಿನ ಯಲ್ದೂರು ಹೋಬಳಿಯ ಲಕ್ಷ್ಮಿಸಾಗರ ಪಂಚಾಯಿತಿಯಲ್ಲಿ ಜೆಡಿಎಸ್ ಬೆಂಬಲಿತ ಅಧ್ಯಕ್ಷೆ ಗೀತಮ್ಮ ಅವರ ರಾಜೀನಾಮೆಯಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲು ದಿನಾಂಕ 16/02/2022 ಬುಧವಾರ ದಿನಾಂಕ ನಿಗಧಿಯಾಗಿತ್ತು ಅಂದು ಕಾಂಗ್ರೆಸ್ ಬೆಂಬಲಿತ ಲಕ್ಷ್ಮಿದೇವಮ್ಮ ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರ ವಿರುದ್ದ ಸ್ಪರ್ದಿಸಲು ಜೆ.ಡಿ.ಎಸ್ ಬೆಂಬಲಿತರು ನಾಮ ಪತ್ರ ಸಲ್ಲಿಸದೆ ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದ ಕಾರಣ ಚುನಾವಣೆಯನ್ನು 17/02/2022 ಗುರುವಾರಕ್ಕೆ ಮುಂದೂಡಲಾಗಿತ್ತು ಇಂದು ಸಹ ಜೆ.ಡಿ.ಎಸ್ ಬೆಂಬಲಿತ ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೋಳ್ಳದೆ ಕಾರಣ ಕಾಂಗ್ರೆಸ್ ಬೆಂಬಲಿತ ಲಕ್ಷ್ಮಿದೇವಮ್ಮ ಸಲ್ಲಿಸಿದ್ದ ಏಕ ನಾಮ ನಾಮಪತ್ರ ಅಂಗಿಕರಿಸಿ ಚುನಾವಣಾಧಿಕಾರಿಯಾಗಿದ್ದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಹುಸೇನ್ ಸಾಬ್ ಅವರು ಲಕ್ಷ್ಮಿದೇವಮ್ಮನವರನ್ನು ಅವಿರೋಧ ಆಯ್ಕೆಯಾಗಿ ಘೋಷಿಸಿದರು.
ಪಂಚಾಯಿತಿಯಲ್ಲಿ ಒಟ್ಟು 17 ಸಂಖ್ಯಾ ಬಲದ ಸದಸ್ಯರು ಇದ್ದು ಜೆ.ಡಿ.ಎಸ್ ಮತ್ತು ಕಾಂಗ್ರೆಸ ತಲಾ 8 ಸದಸ್ಯರಿದ್ದು ಒರ್ವ ಪಕ್ಷೇತರ ಮಹಿಳಾ ಸದಸ್ಯೆ ಇದ್ದು ಮೊದಲನೇಯ ಅವಧಿ ಅಧ್ಯಕ್ಷ ಸ್ಥಾನದ ಆಯ್ಕೆ ಸಂದರ್ಭದಲ್ಲಿ ಪಕ್ಷೇತರ ಮಹಿಳಾ ಸದಸ್ಯೆ ಬೆಂಬಲದೊಂದಿಗೆ ಜೆ.ಡಿ.ಎಸ್ ಅಧಿಕಾರ ಪಡೆದುಕೊಂಡು ಅಧ್ಯಕ್ಷೆಯಾಗಿ ಗೀತಮ್ಮ ಆಯ್ಕೆಯಾಗಿದ್ದರು.
ಗಟ್ಟಿಯಾಯಿತ ಶ್ಯಾಗತ್ತೂರು ಸುಧಾಕರ್ ನಾಯಕತ್ವ ?
ಕಾಂಗ್ರೆಸ ಬೆಂಬಲಿತ ಲಕ್ಷ್ಮಿದೇವಮ್ಮ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಶ್ಯಾಗತ್ತೂರು ಸುಧಾಕರ್ ಮಾತನಾಡಿ ವಿಧಾನಸಭಾ ಕ್ಷೇತ್ರದಲ್ಲಿ ಶಾಸಕ ರಮೇಶ್ ಕುಮಾರ್ ಜಾತಿ, ಧರ್ಮ ಹಾಗು ಪಕ್ಷಾತೀತವಾಗಿ ಜನಮೆಚ್ಚುವ ರೀತಿಯಲ್ಲಿ ಆಡಳಿತ ನೀಡಿದ್ದು ಜನತೆ ಸಹ ಅವರ ನಾಯಕತ್ವಕ್ಕೆ ಸದಾ ಬೆಂಬಲ ನೀಡುತ್ತಿದ್ದಾರೆ ಎಂದರು.
ಲಕ್ಷ್ಮಿಸಾಗರ ಗ್ರಾಮ ಪಂಚಾಯತಿಯು ಕೆಲವು ದಶಕಗಳಿಂದ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದು ಕಳೆದ ಬಾರಿ ಪಂಚಾಯ್ತಿ ಅಧ್ಯಕ್ಷ ಗಾದಿ ಕಾರಣಾಂತರಗಳಿಂದ ಕೈ ಬಿಟ್ಟು ಹೋಗಿತ್ತು ಈಗ ಮತ್ತೇ ಕಾಂಗ್ರೆಸ್ ತೆಕ್ಕೆಗೆ ಅಧಿಕಾರ ಬಂದಿರುತ್ತದೆ ಇದಕ್ಕೆ ಶಾಸಕರು ಗ್ರಾಮೀಣ ಭಾಗದಲ್ಲಿ ಮಾಡಿರುವಂತ ಅಭಿವೃದ್ಧಿ ಕಾರ್ಯಗಳು ಕಾಪಾಡಿದೆ ಎಂದರು.
ಪಿ.ಡಿ.ಒ ಜಗದೀಶ ಕುಮಾರ್, ಎಪಿಎಂಸಿ ನಿರ್ದೇಶಕ ಯೋಗೀಂದ್ರ ಗೌಡ, ಮುಖಂಡರಾದ ಕೆ. ಕೆ. ಮಂಜು, ಅಶೋಕ್, ಶ್ರೀರಾಮಪ್ಪ, ಚನ್ನಹಳ್ಳಿ ಶ್ರೀನಿವಾಸ್, ಹೊಗಳಗೆರೆ ಆಂಜಿ, ಸದಸ್ಯ ಸುರೇಶ್ ಮುಂತಾದವರು ಇದ್ದರು.
ಚುನಾವಣೆ ಪ್ರಕ್ರಿಯೆಯಲ್ಲಿ ಜೆ.ಡಿ.ಎಸ್ ಬೆಂಬಲಿತ ಸದಸ್ಯರು ಪಾಲ್ಗೋಳ್ಳದೆ ಹಿರಿಯ ಮುಖಂಡರೊಬ್ಬರ ತೋಟದ ಮನೆಯಲ್ಲಿ ಅಧಿಕಾರ ಹಂಚಿಕೆ ಸಂಬಂದ ನ್ಯಾಯ ಪಂಚಾಯಿತಿಗೆ ಕುಳಿತುಕೊಂಡು ನ್ಯಾಯ ಬಗೆಹರಿಸಿಕೊಳ್ಳಲು ಆಗದೆ ಚಂಡಿ ಹಿಡಿದು ಕೂತ ಆಕಾಂಕ್ಷಿಗಳು ಸಮಾಧಾನ ವಾಗದೆ ಚುನಾವಣೆಗೂ ಹೋಗದೆ ನಿರ್ಲ್ಯಕ್ಷಿಸಿದ್ದು ನಮ್ಮದೇ ತಪ್ಪು ಎಂದು ಜೆ.ಡಿ.ಎಸ್ ಮುಖಂಡರು ಹೇಳಿಕೊಂಡಿದ್ದಾರೆ.