- ಶನಿವಾರ ತಡರಾತ್ರಿ ಜೆಎನ್ಆರ್ ಬಸ್ ಟ್ರ್ಯಾಕ್ಟರ್ಗೆ ಡಿಕ್ಕಿ
- ಬಸ್ ನಲ್ಲಿದ್ದ 20ಕ್ಕೂ ಹೆಚ್ಚು ಜನರಿಗೆ ಗಾಯ,
- ಇಬ್ಬರ ಸ್ಥಿತಿ ಚಿಂತಾಜನಕ ಒಬ್ಬ ಸ್ಥಳದಲ್ಲೇ ಸಾವು.
ಶ್ರೀನಿವಾಸಪುರ:ಕರ್ನಾಟಕ-ಆಂಧ್ರದ ಗಡಿಯ ಬೆಂಗಳೂರು-ಮದನಪಲ್ಲಿ ರಸ್ತೆಯಲ್ಲಿ ಆಂಧ್ರದ ಗಡಿಗೆ ಹತ್ತಿರ ಇರುವ ಕರ್ನಾಟಕದ ಹಕ್ಕಿಪಿಕ್ಕಿ ಕಾಲೋನಿ ಗೆಟ್ ಬಳಿಯ ಅರಣ್ಯ ಪ್ರದೇಶದ ರಾಯಲ್ಪಾಡು ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ಬೆಂಗಳೂರಿನಿಂದ ಬರುತ್ತಿದ್ದ JNR 4 ಸಿಂಗಲ್ ಖಾಸಗಿ ಬಸ್ ಟ್ರ್ಯಾಕ್ಟರ್ ಗೆ ಡಿಕ್ಕಿ ಹೊಡೆದಿದೆ.ಈ ಅಪಘಾತದಲ್ಲಿ ಬಸ್ ನಲ್ಲಿದ್ದ ಸುಮಾರು 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು ಇಬ್ಬರು ಪರಿಸ್ಥಿತಿ ಚಿಂತಾಜನಕವಾಗಿದೆ ಒರ್ವ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ, ಮೃತ ವ್ಯಕ್ತಿ ಬಿಹಾರ ಮೂಲದ ಕಾರ್ಮಿಕ ಜವಹರ್ ಮುನ್ನಿ (45) ಎಂದು ಗುರುತಿಸಲಾಗಿದೆ.ಅಪಘಾತವಾದ ಸ್ಥಳ ಆಂಧ್ರಗಡಿಗೆ ಹೊಂದಿಕೊಂಡಿರುವ ಅರಣ್ಯಪ್ರದೇಶದವಾಗಿದ್ದು ಮೊಬೈಲ್ ನೆಟ್ ವರ್ಕ ಸಿಗದೆ ಗಾಯಳುಗಳನ್ನು ಆಸ್ಪತ್ರೆಗೆ ಸಾಗಿಸಲು ಸ್ಥಳೀಯರು ಹರ ಸಾಹಸ ಪಟ್ಟಿರುತ್ತಾರೆ.
ಗಾಯಾಳುಗಳನ್ನು ಆಂಧ್ರದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಆಸ್ಪತ್ರೆ ಸಾಗಿಸಲಾಗಿದೆ ಮೃತ ವ್ಯಕ್ತಿಯ ಪೊಸ್ಟ್ ಮಾರ್ಟಂ ಸಹ ಅಲ್ಲೆ ನಡೆಯಲಿರುವುದಾಗಿ ಹೇಳಲಾಗಿದೆ. ಬಸ್ ನಲ್ಲಿದ್ದ ಬಹುತೇಕ ಪ್ರಯಾಣಿಕರು ಆಂಧ್ರದಿಂದ ಬೆಂಗಳೂರಿನಲ್ಲಿ ಬದಕು ಆರಿಸಿ ಹೋಗಿದ್ದವರು ವಾರಂತ್ಯಕ್ಕೆ ತಮ್ಮ ಊರುಗಳಿಗೆ ಹೋಗಲು ಬಂದವರು
ಟ್ರ್ಯಾಕ್ಟರ್ ನಿರ್ಲಕ್ಷ್ಯವೆ ಅಪಘಾತಕ್ಕೆ ಕಾರಣ!
ಟ್ರ್ಯಾಕ್ಟರ್ ನಿರ್ಲಕ್ಷ್ಯವೆ ಅಪಘಾತಕ್ಕೆ ಕಾರಣ ಎಂದು ಬಸ್ ನಲ್ಲಿದ್ದ ಬಹುತೇಕರು ಹೇಳುತ್ತಾರೆ, ಬಿಳುತ್ತಿದ್ದ ಮಳೆ ಕಾರ್ಗತ್ತಲಿನ ಅರಣ್ಯಪ್ರದೇಶದಲ್ಲಿ ಬರ್ತಿ ಕಟ್ಟಿಗೆ ತುಂಬಿದ್ದ ಟ್ರ್ಯಾಕ್ಟರ್ ರಸ್ತೆಯಲ್ಲಿ ಅಡ್ಡಾದಿಡ್ದಿ ಹೋಗುತ್ತಿದ್ದು, ಬೆಂಗಳೂರಿನಿಂದ ಬರುತ್ತಿದ್ದ ಬಸ್ ವೇಗದಲ್ಲಿದ್ದು ಟ್ರ್ಯಾಕ್ಟರ್ ಕಾಣಿಸದೆ ಹೋದ ಪರಿಣಾಮ ಅಪಘಾತ ನಡೆದಿದೆ ಎನ್ನುತ್ತಾರೆ.
ಟ್ರ್ಯಾಕ್ಟರ್ ನಿರ್ಲಕ್ಷ್ಯ ಚಾಲನೆಯ ಪರಿಣಾಮ ತಾಲೂಕಿನಲ್ಲಿ ಇತ್ತಿಚಿಗೆ ಅಪಘಾತಗಳು ಹೆಚ್ಚುತ್ತಿವೆ ಎಂಬ ಆರೋಪ ಇದೆ ಬಹುತೇಕ ಟ್ರ್ಯಾಕ್ಟರ್ ಗಳಿಗೆ ಯಾವುದೇ ದಾಖಲೆಗಳು ಇರುವುದಿಲ್ಲ ಕನಿಷ್ಠ ಲೈಟ್ ಗಳು ಇರುವುದಿಲ್ಲ ಟ್ರ್ಯಾಕ್ಟರ್ ಟ್ರ್ಯಾಲಿಗಳಿಗೆ ಯಾವುದೇ ಮಾರ್ಗಸೂಚಿ ಸ್ಟಿಕರ್ ಅಂಟಿಸಿರುವುದಿಲ್ಲ ಇದರಿಂದ ಹಿಂದಿನಿಂದ ಬರುವಂತ ವಾಹನಗಳಿಗೆ ಮುಂದೆ ರಸ್ತೆಯಲ್ಲಿ ಟ್ರ್ಯಾಕ್ಟರ್ ಹೋಗುತ್ತಿರುವ ಅಂದಾಜು ಇಲ್ಲದೆ ಅಪಘಾತಗಳಿಗೆ ಕಾರಣವಾಗುತ್ತಿದೆ ಎನ್ನುತ್ತಾರೆ ವಿಶೇಷವಾಗಿ ದ್ವಿಚಕ್ರವಾಹನ ಸವಾರರು.
JNR ಬಸ್ ಅಪಘಾತಕ್ಕೆ ಕಾರಣವಾಗಿರುವಂತ ಟ್ರ್ಯಾಕ್ಟರ್ ಸಹ ಸಿಗಲಬೈಲಿನಲ್ಲಿ ಇಟ್ಟಿಗೆ ಫ್ಯಾಕ್ಟರಿ ನಡೆಸುತ್ತಿರುವ ಕರ್ನಾಟಕ ಮೂಲದ ವ್ಯಕ್ತಿಗೆ ಸೇರಿದ್ದು ಇಟ್ಟಿಗೆ ಫ್ಯಾಕ್ಟರಿ ಮಾಲಿಕ ಮದನಪಲ್ಲಿ ಶಾಸಕನಿಗೂ ಆತ್ಮೀಯನೆ ರಾಯಲ್ಪಾಡು ಹೋಬಳಿಯಲ್ಲಿ ಸ್ಥಳೀಯ ರಾಜಕೀಯದಲ್ಲಿ ಪ್ರಭಾವಿತ ಎನ್ನಲಾಗುತ್ತಿದೆ.