ಕಾಟಮುರಾಯುಡ ಕದರಿ ನರಸಿಂಹುಡಾ ಬ್ಯಾಟ್ರಾಯಸ್ವಾಮಿ ದೇವುಡಾ ಎಂದು ಕದಿರಿ ಶ್ರೀ ಲಕ್ಷ್ಮೀ ನರಸಿಂಹನನ್ನು ಭಕ್ತರು ಪ್ರೀತಿಯಿಂದ ಅರಾಧಿಸುತ್ತಾರೆ. ಮೊದಲಿಗೆ ವೇಟರಾಯ ಸ್ವಾಮಿ ದೇವುಡ ಎಂದಿತ್ತು ಮುಂದೆ ಅದನ್ನು ಕನ್ನಡಿಗರು ಬ್ಯಾಟ್ರಾಯ ಸ್ವಾಮಿ ಎಂದ ಕಾರಣ ಇವತ್ತಿಗೂ ಅದೆ ಚಾಲ್ತಿಯಲ್ಲಿದೆ ಎನ್ನಲಾಗಿದೆ.
ಭಕ್ತರು ನಂಬುವಂತೆ ಇಲ್ಲಿಯೇ ಭಗವಾನ್ ನರಸಿಂಹ ಖಾದ್ರಿ ಎಂಬ ಮರದಿಂದ ಮಾಡಿದ ಕಂಬದಲ್ಲಿ ಉದ್ಭವಿಸಿ ಹಿರಣ್ಯಕಶಿಪುವನ್ನು ಸಂಹರಿಸಿದ ಘಟನೆ ಕದಿರಿ ಬಳಿಯ ಗೊಡ್ಡುವೇಲಗಲ ಗ್ರಾಮದಲ್ಲಿ ನಡೆದಿದೆ ಎಂದು ಸ್ಥಳ ಪುರಾಣಾದಲ್ಲಿ ಹೇಳಲಾಗುತ್ತದೆ. ಖಾದ್ರಿ ಮರ ಮುಂದೆ ಆಡುಭಾಷೆಯಲ್ಲಿ ಕದಿರಿ ಎಂದು ಕರೆಯಲಾಗಿದೆ ಎಂಬುದು ಸ್ಥಳೀಯರ ಮಾತು. ಇಷ್ಟೆ ಅಲ್ಲ ಭಗವಂತ ನರಸಿಂಹನನ್ನು ವಸಂತ ವಲ್ಲಭ ಎಂದೂ ಪ್ರಹ್ಲಾದ ವರದಾ ನಾರಸಿಂಹ ದೇವರು ಎಂದು ಪೂಜಿಸುತ್ತಾರೆ.
ನ್ಯೂಜ್ ಡೆಸ್ಕ್:ಆಂಧ್ರದಲ್ಲಿರುವ ಪ್ರಖ್ಯಾತ ಪುಣ್ಯ ಕ್ಷೇತ್ರ ಕದಿರಿ ಶ್ರೀಲಕ್ಷ್ಮಿ ನರಸಿಂಹ ಸ್ವಾಮಿ ಭ್ರಹ್ಮರಥೋತ್ಸವ ತೀರಾ ಇತ್ತಿಚಿಗೆ ಲಕ್ಷಾಂತರ ಜನ ಸಮೂಹದ ನಡಿವೆ ನಮೋ ನಾರಸಿಂಹ..ಹಾಗು ಗೋವಿಂದ ಗೋವಿಂದ ನಾಮಗಳೊಂದಿಗೆ ಎಂದು ವಿಜ್ರಂಭಣೆಯಿಂದ ನಡೆಯಿತು.
ಆಂಧ್ರದ ಅನಂತಪುರಂ ಜಿಲ್ಲೆಯ ಕದಿರಿ ಲಕ್ಷ್ಮಿ ನರಸಿಂಹ ಸ್ವಾಮಿ ಆಂಧ್ರಪ್ರದೇಶದ ನವನಾರಸಿಂಹ ಕ್ಷೇತ್ರಗಳಲ್ಲಿ ಒಂದಾಗಿದ್ದು ಇಲ್ಲಿ ಭಗವಾನ್ ನಾರಸಿಂಹಸ್ವಾಮಿ ಸ್ವಯಂಭೂ ರೂಪದಲ್ಲಿ ನೆಲೆಸಿದ್ದಾನೆ ಎಂಬುದು ನಂಬಿಕೆ.
ವೈಖಾನಸ ಆಗಮಶಾಸ್ತ್ರದಂತೆ ನಡೆಯುವ ಬ್ರಹ್ಮರಥೋತ್ಸವ ಭಕ್ತರು ಆಡು ಭಾಷೆಯಲ್ಲಿ ಹೇಳುವಂತೆ ತೆರು ಎಳೆಯುವ ದೃಶ್ಯವಾಗಿದ್ದು ವರ್ಣನಾತೀತ ಎನ್ನುತ್ತಾರೆ.ರಥದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ದೇವರ ಜೊತೆಗೆ ಪ್ರಹ್ಲಾದ ವಿಗ್ರಹವನ್ನು ಪ್ರತಿಷ್ಟಾಪಿಸಿ ರಥ ಎಳೆಯುತ್ತಾರೆ.
ಮೇಷ ರಾಶಿ ಅನುರಾಧಾ ನಕ್ಷತ್ರದಲ್ಲಿ ವೇದ ವಿದ್ವಾಂಸರ ವೇದ ಮಂತ್ರಗಳ ಪಠಣದೊಂದಿಗೆ ನಡೆಯುತ್ತದೆ ಬ್ರಹ್ಮಾಂಡವಾದ ರಥೋತ್ಸವವನ್ನು ವೈಖಾನಸ ಆಗಮ ಶಾಸ್ತ್ರದ ಸಂಪ್ರದಾಯದಂತೆ ಸ್ಥಳೀಯ ಕುಟಗುಲ್ಲ, ಮೂರ್ತಿಪಲ್ಲಿ ಮತ್ತು ಗಜ್ಜಲರೆಡ್ಡಿ ಪಲ್ಲಿ ಗ್ರಾಮಸ್ಥರು ಭಗವಂತನ ರಥವನ್ನು ಎಳೆಯುತ್ತಾರೆ ಭಾರಿಗಾತ್ರದ ಬೃಹತ್ ಹಗ್ಗಗಳನ್ನು ಕಟ್ಟಿ ರಥ ಎಳೆದರೆ ರಥವನ್ನು ನಿಯಂತ್ರಿಸಲು ತಡೆಗೋಲುಗಳನ್ನು ಹಾಕುತ್ತ
ದೇವಾಲಯದ ಬೀದಿಗಳಲ್ಲಿ ಸ್ವಾಮಿಯ ರಥೋತ್ಸವ ನಡೆಯುತ್ತದೆ.
ರಥ ಎಳೆಯುವಂತ ಮಧುರಾನುಬೂತಿಯ ದೃಶ್ಯವನ್ನು ವೀಕ್ಷಿಸಲು ಎರಡು ತೆಲುಗು ರಾಜ್ಯಗಳೆ ಅಲ್ಲದೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಂದಲೂ ಲಕ್ಷಾಂತರ ಭಕ್ತರು ಆಗಮಿಸುವುದು ಇಲ್ಲಿನ ವಿಶೇಷ.
ಪ್ರಾಚೀನ ರಥ ಕದಿರಿಯ ಬೃಹತ್ ರಥ ನೂರಪ್ಪತ್ತು ವರ್ಷಗಳ ದೇಶದ ಮೂರನೇ ಅತಿದೊಡ್ಡ ರಥವಾಗಿದ್ದು ತಮಿಳುನಾಡಿನ ಶ್ರೀವಲ್ಲಿಪುತ್ತೂರಿನಲ್ಲಿರುವ ಆಂಡಾಳ್ ದೇವಿಯ ರಥ ಮೊದಲನೆ ಬೃಹತ್ ರಥವಾದರೆ ತಂಜಾವೂರಿನ ತಿರುವಳ್ಳೂರಿನ ರಥ ಎರಡನೆಯ ಅತಿ ದೊಡ್ಡ ಸ್ಥಾನದಲ್ಲಿದ್ದರೆ ಅತಿ ದೊಡ್ಡದಾದ ಕದಿರಿ ನರಸಿಂಹಸ್ವಾಮಿ ರಥ ಮೂರನೇ ಸ್ಥಾನದಲ್ಲಿದೆ. ಆರು ಬೃಹತ್ ಚಕ್ರಗಳುಳ್ಳ ರಥ 540 ಟನ್ ತೂಕದ್ದಾಗಿದ್ದು ಸುಮಾರು 37.5 ಅಡಿ ಎತ್ತರವಿದೆ. ಈ ರಥವನ್ನು 120 ವರ್ಷಗಳ ಹಿಂದೆ ತಯಾರಿಸಲಾಗಿದ್ದು ಎನ್ನುತ್ತಾರೆ.
ಭ್ರಹ್ಮೊತ್ಸವ ಇತಿಹಾಸ
ಕದಿರಿ ನರಸಿಂಹನ ಬ್ರಹ್ಮೋತ್ಸವಗಳನ್ನು ಪ್ರತಿ ವರ್ಷ ಹದಿನೈದು ದಿನಗಳ ಕಾಲ ಜಾತಿ, ಧರ್ಮಗಳ ಭೇದಭಾವ ಇಲ್ಲದೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಆಚರಿಸಲಾಗುತ್ತದೆ.