ಶ್ರೀನಿವಾಸಪುರ: ಧಾರ್ಮಿಕ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಇಂದಿರಾಭವನ್ ರಾಜಣ್ಣ ಹೇಳಿದರು. ಅವರು ತಾಲೂಕಿನ ಅರಕೇರಿ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಶ್ರೀ ಕೊದಂಡರಾಮ ದೇವಾಲಯದ 48 ದಿನಗಳ ಮಂಡಲ ಪೂಜೆ ಹಾಗು ಶ್ರೀ ಸೀತಾರಾಮರ ಕಲ್ಯಾಣೊತ್ಸವ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದ ಅವರು ಮಾತನಾಡಿ ದೇವಾಲಯ ಮತ್ತು ಧರ್ಮವು ನಮ್ಮ ಗ್ರಾಮೀಣ ಜನ ಜೀವನದ ಅವಿಭಾಜ್ಯ ಅಂಗವಾಗಿವೆ. ಧರ್ಮ ಮತ್ತು ಧಾರ್ಮಿಕ ಕಾರ್ಯಕ್ರಮ ಜೀವನದ ಸಾರ್ಥಕತೆಗೆ ದಾರಿದೀಪ ಎನ್ನಬಹುದಾಗಿದ್ದು ಇಂದಿನ ಒತ್ತಡದ ಬದುಕಿನಲ್ಲಿ ದೇವರು ಮತ್ತು ಅಧ್ಯಾತ್ಮ ಮಾರ್ಗದಲ್ಲಿ ಸಾಗಲು ಹೋಮ ಹವನ ಪೂಜೆ ಹಾಗೂ ಧ್ಯಾನದಿಂದ ಭಗವಂತನ ಅನುಗ್ರಹ ಪಡೆಯಬಹುದು ಎಂದರು.
ಶ್ರೀನಾಗನಾಥೇಶ್ವರ ದೇವಾಲಯದ ಧರ್ಮದರ್ಶಿ ರಮೇಶ್ ಬಾಬು ಮಾತನಾಡಿ ಗ್ರಾಮೀಣ ದೇವಾಲಯಗಳು ಧಾರ್ಮಿಕ ಹಾಗು ಸಾಂಸೃತಿಕ ಕೇಂದ್ರಗಳಾಗಿ ಜನರ ನಡುವಿನ ಸೌಹಾರ್ದತೆ ಮತ್ತು ಸಾಮರಸ್ಯ ಜೀವನಕ್ಕೂ ಸಹಕಾರಿಯಾಗಲಿದೆ ಎಂದರು.
ಈ ಸಂದರ್ಭದಲ್ಲಿ ದೇವಾಲಯದ ನಿರ್ಮಾಣಕ್ಕೆ ಸಹಕಾರ ನೀಡಿದ ಸೇವಾಕರ್ತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಆರ್ಯವೈಶ್ಯ ಮಂಡಳಿ ಮುಖ್ಯಸ್ಥ ವೈ ಆರ್ ಎಸ್ ಪ್ರಕಾಶ್, ಪುರಸಭೆ ಸದಸ್ಯ ಬಿ.ವೆಂಕಟರೆಡ್ಡಿ ನಿವೃತ್ತ ಮುಖ್ಯೋಪಾದ್ಯಾಯ ಮೀಸಗಾನಹಳ್ಳಿ ವೆಂಕಟರೆಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಹರಿಕೃಷ್ಣ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಗೊಟ್ಟಿಕುಂಟೆಕೃಷ್ಣಾರೆಡ್ಡಿ,ಪ್ರೆಮ್ ತೆಜ್,ಗಿರಿರಾಜ್,ವಿಶ್ವನಾಥ್ ಮುಂತಾದವರು ಇದ್ದರು.