ಕಾಣಿಪಾಕಂ ವರಸಿದ್ಧಿ ವಿನಾಯಕ ದೇವಾಲಯದ ಪ್ರಧಾನ ಅರ್ಚಕರಾದ ಗಣೇಶ್ ಗುರುಕುಲ್ ಅವರ ಸೇವೆಯನ್ನು ಗುರುತಿಸಿ ಆಂಧ್ರಪ್ರದೇಶ ಸರ್ಕಾರ ಯುಗಾದಿ ಪ್ರಶಸ್ತಿ ನೀಡಿ ಗೌರವಿಸಿದೆ.
ಮೂಲತಃ ಶ್ರೀನಿವಾಸಪುರ ತಾಲೂಕಿನ ಕಸಬಾ ಹೋಬಳಿ ಸಾತಾಂಡ್ಲಹಳ್ಳಿ ಗ್ರಾಮದವರಾದ ಅರ್ಚಕ ಗಣೇಶ್ ಅಪ್ಪಟ ಕನ್ನಡಿಗರು ಅವರು ಸಾತಾಂಡ್ಲಹಳ್ಲಿ ಗ್ರಾಮದಲ್ಲಿ ಹುಟ್ಟಿ ಬೆಳೆದು ಎಸ್.ಎಸ್.ಎಲ್.ಸಿ ವರಿಗೂ ನಂಬಿಹಳ್ಳಿ ಪ್ರೌಡಶಾಲೆಯಲ್ಲಿ ಓದಿದ ಅವರು ಶ್ರೀನಿವಾಸಪುರದಲ್ಲಿ ಪಿಯುಸಿ ಹಾಗು ಪದವಿ ಪೊರೈಸಿದ್ದು ನಂತರ ಅವರು ಆಂಧ್ರದಲ್ಲಿ ವೇದಾಭ್ಯಾಸ ಮಾಡಿ ಕಾಣಿಪಾಕಂ ವಿನಾಯಕ ದೇವಾಲಯದಲ್ಲಿ ಮೂರು ದಶಕಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಈಗ ಪ್ರಭಾರೆ ಪ್ರಧಾನ ಅರ್ಚಕರ ಹುದ್ಧೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ನ್ಯೂಜ್ ಡೆಸ್ಕ್:ಆಂಧ್ರಪ್ರದೇಶದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಆಂಧ್ರ ಸರ್ಕಾರ ಗುರುತಿಸಿ ಯುಗಾದಿಯ ಭಾನುವಾರದಂದು ನಡೆದಂತ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಿದೆ.
ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿದ್ದ ಆಂಧ್ರ ಸರ್ಕಾರದ ಯುಗಾದಿ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮವನ್ನು ಚಂದ್ರಬಾಬುನಾಯ್ಡು ನೇತೃತ್ವದ ಎನ್.ಡಿ.ಎ ಸರ್ಕಾರ ಮತ್ತೆ ಆರಂಭಿಸಿದ್ದು ಸಾಹಿತ್ಯ, ಸಂಗೀತ,ನೃತ್ಯ, ಕಲೆ,ಪತ್ರಿಕೋದ್ಯಮ, ಹಾಸ್ಯ, ಮಕ್ಕಳ ಸಾಹಿತ್ಯ, ಕಾವ್ಯ, ಸಾಂಸ್ಕೃತಿಕ, ಮಿಮಿಕ್ರಿ, ಬುರ್ರಕಥೆ, ಹರಿಕಥೆ, ನಾಟಕ, ಸಮಾಜ ಸೇವೆ ಮತ್ತು ಸಿನಿಮಾ ಮುಂತಾದ ಹಲವು ಕ್ಷೇತ್ರಗಳಲ್ಲಿನ ಸಾಧನೆ ಮಾಡಿದಂತ ವ್ಯಕ್ತಿಗಳಿಗೆ ಪ್ರಶಸ್ತಿ ನೀಡಿ ಗೌರವಿಸಿದೆ.
ಕಲಾ ರತ್ನ ಮತ್ತು ಯುಗಾದಿ ಪ್ರಶಸ್ತಿಗಳ ಪಟ್ಟಿಯಲ್ಲಿ ಒಟ್ಟು 202 ಜನರನ್ನು ಆಯ್ಕೆ ಮಾಡಿದ್ದು ಈ ಪೈಕಿ 86 ಜನರಿಗೆ ಕಲಾ ರತ್ನ ಮತ್ತು 116 ಜನರಿಗೆ ಯುಗಾದಿ ಪ್ರಶಸ್ತಿಗಳನ್ನು ನೀಡಲಾಗಿದೆ. ಶ್ರೀ ವಿಶ್ವಾವಸು ನಾಮ ಸಂವತ್ಸರ ಆರಂಭವಾದ ಭಾನುವಾರ ಯುಗಾದಿಯಂದು ವಿಜಯವಾಡದ ತುಮ್ಮಲಪಲ್ಲೆ ಕ್ಷೇತ್ರಯ್ಯ ಕಲಾಕ್ಷೇತ್ರದ ಸಭಾಂಗಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಆಂಧ್ರ ಸರ್ಕಾರದ ಮುಖ್ಯಮಂತ್ರಿ ಚಂದ್ರಬಾಬುನಾಯ್ಡು ವಿಜೇತರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು.

ಕಾಣಿಪಾಕಂ ಅರ್ಚಕರ ಪೂಜಾ ಸೇವೆಗೆ ಪ್ರಶಸ್ತಿ
ಆಂಧ್ರದ ಚಿತ್ತೂರು ಜಿಲ್ಲೆಯ ಪ್ರಖ್ಯಾತ ಪುಣ್ಯಕ್ಷೇತ್ರವಾದ ಕಾಣಿಪಾಕಂ ವರಸಿದ್ದಿ ವಿನಾಯಕ ದೇವಾಲಯದ ಪ್ರಧಾನ ಅರ್ಚಕರಾದ ಗಣೇಶ್ ಗುರುಕುಲ್ ಅವರಿಗೆ ಸೇವಾ ಮನೋಭಾವನೆಯಿಂದಪೂಜಾ ಕಾರ್ಯಕ್ರಮಗಳನ್ನು ಮಾಡುತ್ತಿರುವ ಹಿನ್ನಲೆಯಲ್ಲಿ ಯುಗಾದಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಹತ್ತು ಸಾವಿರ ನಗದು ಹಾಗು ಪ್ರಶಸ್ತಿ ಪತ್ರವನ್ನು ನೀಡಲಾಗಿದೆ.
ಗಣೇಶ್ ಗುರುಕುಲ್ ಅವರೊಂದಿಗೆ ತೆಲಗು ಸಿನಿಮಾ ರಂಗದ ಖ್ಯಾತ ಚಲನಚಿತ್ರ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಅವರ ಪತ್ನಿ ಸಾಯಿ ಸೌಜನ್ಯ ಅವರು ನೃತ್ಯ ವಿಭಾಗದಲ್ಲಿ ಪ್ರಶಸ್ತಿ ಪಡೆದರೆ ಚಲನಚಿತ್ರ ವಿಭಾಗದಲ್ಲಿ ನಟ ಪೃಥ್ವಿರಾಜ್, ಹಿರಿಯಪತ್ರಕರ್ತ ಮತ್ತು ‘ಆಂಧ್ರಜ್ಯೋತಿ’ ಸುದ್ದಿ ಸಂಪಾದಕ ಕೆ.ನಾಗಸುಧಾಕರ್ ಅವರು ಸೇರಿದಂತೆ ಹಲವರು ಪ್ರಶಸ್ತಿ ಪಡೆದವರಾಗಿದ್ದಾರೆ.