ಶ್ರೀನಿವಾಸಪುರ:ರಾಜ್ಯಾದ್ಯಂತ ಕನ್ನಡ ರಾಜ್ಯೋತ್ಸವದ ಸಂಭ್ರಮ ಸಡಗರದಿಂದ ನಡೆಯುತ್ತಿದೆ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕನ್ನಡಿಗರಿಗೆ ಕನ್ನಡದಲ್ಲೇ ಶುಭಕೋರಿ ರಾಜ್ಯೋತ್ಸವ ಅತ್ಯಂತ ವಿಶೇಷವಾದ ಸಂದರ್ಭವಾಗಿದ್ದು, ಇದು ಕರ್ನಾಟಕದ ಅನುಕರಣೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಗುರುತಿಸುತ್ತದೆ ಎಂದು ಹೇಳಿದ್ದಾರೆ.
ಇದು ಪ್ರಧಾನಿಯವರ ಸೌಹಾರ್ದತೆ ಇಂತಹುದರಲ್ಲಿ ಸಂಭ್ರಮದಿಂದ ಆಚರಿಸಬೇಕಾಗಿದ್ದ ಕನ್ನಡ ರಾಜ್ಯೋತ್ಸವ ಶ್ರೀನಿವಾಸಪುರದಲ್ಲಿ ಕಳಾಹೀನವಾಗಿದ್ದು ಇಲ್ಲಿನ ಕನ್ನಡಾಭಿಮಾನಿಗಳು ತಾಲೂಕು ಆಡಳಿತದ ವಿರುದ್ದ ಸಿಡಿದೆದ್ದು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಅಧ್ಯಕ್ಷ ತಾಲೂಕು ತಹಶೀಲ್ದಾರ್ ಧೋರಣೆಯನ್ನು ತೀವ್ರವಾಗಿ ವಿರೋಧಿಸಿ ವೇದಿಕೆಯಿಂದ ಹೋರನಡೆದ ಘಟನೆ ಇಂದು ಬಾಲಕೀಯ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಇಂದು ನಡೆಯಿತು.
ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಪ್ರದಾಯದಂತೆ ರಾಷ್ಟ್ರೀಯ ಧ್ವಜದ ಜೋತೆಗೆ ಕನ್ನಡ ಭಾವುಟ ಹಾರಿಸುವುದು ಇಲ್ಲಿನ ಸಂಪ್ರದಾಯ ಇದನ್ನು ಮುರಿದ ತಾಲೂಕು ಆಡಳಿತ ರಾಷ್ಟ್ರೀಯ ಧ್ವಜ ಮಾತ್ರ ಹಾರಿಸಿ ಕನ್ನಡ ಭಾವುಟ ಹಾರಿಸದೆ ನಿರ್ಲಕ್ಷಿಸಿದದ್ದಲ್ಲದೆ ವೇದಿಕೆ ಕಾರ್ಯಕ್ರಮದಲ್ಲಿ ಶ್ರೀಭುವನೇಶ್ವರಿ ಭಾವಚಿತ್ರ ಕೂಡ ಪ್ರಷ್ಠಾಪಿಸದೆ ಕಾರ್ಯಕ್ರಮ ಮಾಡಲು ಮುಂದಾದಾಗ ವೇದಿಕೆಯಲ್ಲಿದ್ದ ಕನ್ನಡ ಹೋರಾಟಗಾರರು ತಹಶೀಲ್ದಾರ್ ಸುಧೀಂದ್ರ ಅವರನ್ನು ತೀವ್ರವಾಗಿ ತರಾಟೆಗೆ ತಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿಸಿದರು.ಇದಕ್ಕೆ ಪ್ರತಿಕ್ರಿಸಿದ ತಹಶೀಲ್ದಾರ್ ನೀವು ಹೇಳಿದಂತೆ ಕಾರ್ಯಕ್ರಮ ಮಾಡಲು ಬರುವುದಿಲ್ಲ ಮೊಬಲ್ ನಲ್ಲಿದ್ದ ಸರ್ಕಾರಿ ಆದೇಶ ತೋರಿಸಿ ಸರ್ಕಾರದ ಆದೇಶದಂತೆ ಕಾರ್ಯಕ್ರಮ ಮಾಡುವುದಾಗಿ ಉತ್ತರ ನೀಡಿದ್ದು ಇದನ್ನು ವಿರೋಧಿಸಿದ ಕನ್ನಡ ಪರ ಸಂಘಟನೆ ಮುಖಂಡರು ವೇದಿಕೆಯಿಂದ ಇಳಿದು ಹೋದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಕುಬೇರಗೌಡ ಮಾತನಾಡಿ ಇವತ್ತಿನ ತಾಲೂಕು ಆಡಳಿತದ ನಡವಳಿಕೆ ಅತ್ಯಂತ ದುರದೃಷ್ಟಕರವಾಗಿದೆ ನಾಡ ಹಬ್ಬ ಆಚರಣೆಯಲ್ಲೂ ತಾಲೂಕು ಆಡಳಿತ ವೈಕರಿ ವಿಷಾದಕರವಾಗಿದೆ ಕನ್ನಡ ರಾಜ್ಯೋತ್ಸವ ಸಮಾರಂಭದ ಪೂರ್ವಭಾವಿ ಸಭೆ ನಡೆಸಿದಾಗಲೂ ಕನ್ನಡ ಹೋರಾಟಗಾರರನ್ನು ಕನ್ನಡಾಭಿಮಾನಿಗಳನ್ನು ವಿಶ್ವಾಸಕ್ಕೆ ತಗೆದುಕೊಳ್ಳದೆ ಸಭೆ ನಡೆಸಿ ತಿರ್ಮಾನ ಕೈಕೊಂಡಿದ್ದಾರೆ ಕನ್ನಡದ ಬಾವುಟ ಕೇವಲ ಬಣ್ಣದ ಬಾವುಟವಲ್ಲ ನಾಡಧ್ವಜ ಕನ್ನಡಿಗರ ಸ್ವಾಭಿಮಾನದ ಪ್ರತೀಕ ಹಾಗಾಗಿ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ನಾಡ ಧ್ವಜ ಹಾರಿಸಿ ಕನ್ನಡಾಂಬೆ ಭುವನೇಶ್ವರಿ ಫೋಟೋ ಇಟ್ಟು ಪೂಜಿಸುವುದು ಸಂಪ್ರದಾಯ ಅದನ್ನು ಮಾಡಲು ತಾಲೂಕು ಆಡಳಿತಕ್ಕೆ ಸಾಧ್ಯವಿಲ್ಲ ಎನ್ನುವುದಾದರೆ ಅದಕ್ಕಿಂತ ಅವಮಾನ ಇನ್ನೊಂದಿಲ್ಲ ಎಂದರು.
ಅಧಿಕಾರಿಗಳ ಪರ ಶಾಸಕರ ನಡೆಗೆ ಬೇಸರ
ವೇದಿಕೆಯಲ್ಲಿದ್ದ ಶಾಸಕ ವೆಂಕಟಶಿವಾರೆಡ್ಡಿ ಅವರು ತಹಶೀಲ್ದಾರ್ ಪರ ವಕಾಲತ್ತು ವಹಿಸಿಕೊಂಡು ಅವರನ್ನು ಸಮರ್ಥಿಸಿಕೊಂಡು ಮಾತನಾಡಿ ಆಗಿದ್ದಾಯಿತು ಮುಂದಿನ ದಿನಗಳಲ್ಲಿ ಸರಿಮಾಡಿಕೊಳ್ಳಲು ಹೇಳೋಣ ಎಂದು ಸಮಾಜಾಯಿಸಿ ನೀಡಿದಾಗ ಕನ್ನಡ ಸಂಘಟನೆ ಮುಖಂಡರು ಶಾಸಕರ ವಿರುದ್ದ ಬೇಸರ ವ್ಯಕ್ತಪಡಿಸಿ ತರಾಟೆಗೆ ತಗೆದುಕೊಂಡು ಕನ್ನಡಾಭಿಮಾನದ ಅರ್ಥ ಗೊತ್ತಿಲ್ಲದ ವ್ಯವಸ್ಥೆಯಲ್ಲಿ ನಮ್ಮ ಮಾತು ಅರಣ್ಯರೋಧನಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕಸ್ತೂರಿ ಕನ್ನಡ ಜನಪರ ವೇದಿಕೆ ಮುಖಂಡ ಮೊಗಿಲಹಳ್ಳಿಮಣಿ,ನವ ಕರ್ನಾಟಕ ಸ್ವಾಭಿಮಾನಿ ವೇದಿಕೆ ರಾಜ್ಯ ಕಾರ್ಯದರ್ಶಿ ಸಾಧಿಕ್ ಅಹ್ಮದ್,ಆಟೋ ಚಾಲಕರ ಸಂಘದ ಮುಖಂಡ ಜಗನ್ ಯಾದವ್,ಮಂಜು ಮುಂತಾದ ಕನ್ನಡ ಸಂಘಟನೆ ಮುಖಂಡರು ಇದ್ದರು.
ಸ್ವಾತಂತ್ರ್ಯ ಹೋರಾಟಗಾರರನ್ನು ನಿರ್ಲಕ್ಷಿಸಿದ ಅಧಿಕಾರಿ
ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಿಕರನ್ನು ನಿರ್ಲಕ್ಷಿಸಿ ಸ್ವಾತಂತ್ರ ದಿನಾಚರಣೆ ಮಾಡಿದಾಗಲೂ ಸಾರ್ವಜನಿಕರು ತಹಶೀಲ್ದಾರ್ ವಿರುದ್ದ ವೇದಿಕೆ ಕಾರ್ಯಕ್ರಮದಲ್ಲಿ ತೀವ್ರವಾಗಿ ತರಾಟೆಗೆ ತಗೆದುಕೊಂಡಿದ್ದರು.