ನ್ಯೂಜ್ ಡೆಸ್ಕ್:ಕೆನಡಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ತೊಡಗಿಸಿಕೊಳ್ಳುವ ಮೂಲಕ ರಾಜಕೀಯದಲ್ಲಿ ಹಿಂದೂಗಳಿಗೆ ಹೆಚ್ಚಿನ ಪ್ರಾತಿನಿಧ್ಯ ವಹಿಸಲು ಕರ್ನಾಟಕ ಮೂಲದ ಕೆನಡಾ ದೇಶದ ಸಂಸದ ಚಂದ್ರ ಆರ್ಯ ಅವರು ಕರೆ ನೀಡಿದ್ದಾರೆ. ಹಿಂದೂ ಪರಂಪರೆ ಮಾಸದ ಅಂಗವಾಗಿ ಅವರು Parliament Hillನಲ್ಲಿ ಕೇಸರಿ ಧ್ವಜಾರೋಹಣ ಮಾಡಿ ಮಾತನಾಡಿದರು. ಕೆನಡಾದಲ್ಲಿ ಮೂರನೇ ಅತಿ ದೊಡ್ಡ ಧಾರ್ಮಿಕ ಸಮೂಹವಾಗಿರುವ ಹಿಂದೂಗಳು ದೇಶದ ಬೆಳವಣಿಗೆಗೆ ವಿಶೇಷ ಪ್ರಯತ್ನ ನಡೆಸುತ್ತಿದ್ದರೆ,ಅದೇ ರೀತಿ ರಾಜಕೀಯದಲ್ಲಿ ಹೆಚ್ಚು ಸಕ್ರಿಯರಾಗುವಂತೆ ಕರೆ ನೀಡಿದರು.
ಯಾರು ಈ ಚಂದ್ರ ಆರ್ಯ
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನ ದ್ವಾರಾಳು ಗ್ರಾಮದವರಾದ ಚಂದ್ರಆರ್ಯ,ನಿವೃತ್ತ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಕೆ.ಗೋವಿಂದ ಅಯ್ಯರ್ ಎಂಬುವರ ಪುತ್ರ ಚಂದ್ರ ಆರ್ಯ, ಓದಿದ್ದೆಲ್ಲ ಭಾರತದಲ್ಲಿ. ಬೆಂಗಳೂರು ಯೂನಿವರ್ಸಿಟಿಯಲ್ಲಿ ಎಂಜಿನಿಯರಿಂಗ್ ಪದವಿ ಧಾರವಾಡದ ಕರ್ನಾಟಕ ಯೂನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದಿದ್ದು ಕೆನಡಾಕ್ಕೆ ಹೋಗುವ ಮೊದಲು ದೆಹಲಿಯಲ್ಲಿರುವ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO)ಯಲ್ಲಿ ಕೆಲಸ ಮಾಡುತ್ತಿದ್ದರು. ಕರ್ನಾಟಕ ಸ್ಟೇಟ್ ಫೈನಾನ್ಸ್ ಕಾರ್ಪೊರೇಷನ್ನಲ್ಲೂ ಕರ್ತವ್ಯ ನಿರ್ವಹಿಸಿದ್ದಾರೆ. ಬಳಿಕ 2006ರಿಂದ ಕೆನಡಾದಲ್ಲಿ ನೆಲೆಸಿದ್ದಾರೆ. ಹಂತ ಹಂತವಾಗಿ ತಮ್ಮ ಔದ್ಯೋಗಿಕ ಜೀವನದಲ್ಲಿ ಏಳಿಗೆ ಕಂಡು ಇದೀಗ ಕೆನಡಾ ನೆಪೀನ್ ಕ್ಷೇತ್ರದಿಂದ ಲಿಬರಲ್ ಪಕ್ಷದ ಸಂಸದರಾಗಿರುವ ಚಂದ್ರ ಆರ್ಯ ಅವರು, ಕೆನಡಾ ದೇಶದಲ್ಲಿ ಹೆಚ್ಚುತ್ತಿರುವ ಖಲಿಸ್ತಾನ್ ಪ್ರತ್ಯೇಕವಾದದ ಕುರಿತಾಗಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರನ್ನು ಉದ್ದೇಶಿಸಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಸುದೀರ್ಘವಾಗಿ ವಿವರಿಸಿದ್ದಾರೆ. ಹಿಂದೂ ಸಮುದಾಯಕ್ಕೆ ಬೆದರಿಕೆ ಒಡ್ಡುತ್ತಿರುವ ಖಲಿಸ್ತಾನಿ ಗುಂಪುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಚಂದ್ರ ಆರ್ಯ ಆಗ್ರಹಿಸಿದ್ದಾರೆ.ಸಂಸತ್ತಿನಲ್ಲಿ ಚಂದ್ರ ಆರ್ಯ ಅವರು ಮಾತನಾಡುವ ಮೂಲಕ ಅವರು ಗಮನ ಸೆಳೆದಿದ್ದರು. ಖಲಿಸ್ತಾನದ ವಿರುದ್ಧ ನೇರ ಹಾಗೂ ದಿಟ್ಟತನದಿಂದ ಮಾತನಾಡುವ ಅವರ ಮೇಲೆ ಖಲಿಸ್ತಾನಿಗಳ ಟಾರ್ಗೆಟ್ ಅಗಿದ್ದಾರೆ.
Breaking News
- ಕಲ್ಲೂರಿನಲ್ಲಿ ಶಾಸಕ ವೆಂಕಟಶಿವಾರೆಡ್ಡಿ BIRTHDAY ಕಾರ್ಯಕ್ರಮ
- ರಾಯಲ್ಪಾಡು ಒಂಟಿಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರ ಬಂಧನ
- ಶ್ರೀನಿವಾಸಪುರದಲ್ಲಿ ವೈದೇಹಿ ಆಸ್ಪತ್ರೆಯಿಂದ ನಡೆದ ಆರೋಗ್ಯ ಶಿಬಿರ
- ರಮೇಶ್ ಕುಮಾರ್ ಜಮೀನು ಎರಡು ದಿನಗಳ ಜಂಟಿ ಸರ್ವೇ ಅಂತ್ಯ
- ರಮೇಶಕುಮಾರ್ ಜಮೀನು ಅಳತೆ ಸಮಯಾಭವ ಅರಣ್ಯಇಲಾಖೆ ಸರ್ವೆ ಗುರುವಾರಕ್ಕೆ!
- ಬೆಂಗಳೂರು-ಮದನಪಲ್ಲೆ ಹೆದ್ದಾರಿಯಲ್ಲಿ ಅಪಘಾತ ಆಂಧ್ರದ ಇಬ್ಬರ ಸಾವು!
- ಕುತೂಹಲಕ್ಕೆ ಕಾರಣವಾದ CMR ಶ್ರೀನಾಥ್ ಶ್ರೀನಿವಾಸಪುರ ಟೆಂಪಲ್ ರೌಂಡ್ಸ್!
- ಶ್ರೀನಿವಾಸಪುರದಾದ್ಯಂತ ದೇಗುಲಗಳಲ್ಲಿ ವೈಕುಂಠ ಏಕಾದಶಿ ಸಂಭ್ರಮ
- ಮೇಗಾಸ್ಟಾರ್ ಮಗನ “ಗೇಮ್ ಚೇಂಜರ್” ಸಿನಿಮಾ ಕಥೆ IAS ಅಧಿಕಾರಿದು!
- ತಮಿಳುನಾಡು ರಾಣಿಪೇಟೆ ಬಳಿ ರಸ್ತೆ ಅಪಘಾತ ಶ್ರೀನಿವಾಸಪುರದ ನಾಲ್ವರು ಸಾವು!
Wednesday, January 22