ಶ್ರೀನಿವಾಸಪುರ:ಅತಿ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕರ್ನಾಟಕ ಹೊಂದಿದೆ ಎಂದು ವಿಷನ್ ಇಂಡಿಯಾ ಶಾಲೆಯ ಮುಖ್ಯಸ್ಥ ಡಾ.ವೇಣುಗೋಪಾಲ್ ಹೇಳಿದರು ಅವರು ಇಂದು ತಾಲೂಕಿನ ರೋಣೂರು ಕ್ರಾಸ್ ನಲ್ಲಿರುವ ವಿಷನ್ ಇಂಡಿಯಾ ಶಾಲಾ ಆವರಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಕನ್ನಡದ ನೆಲದಲ್ಲಿ ಆಡಳಿತ ನಡೆಸಿದ ಸಾಮ್ರಾಜ್ಯಗಳು ಕನ್ನಡವನ್ನು ಆಡಳಿತ ಭಾಷೆಯನ್ನಾಗಿಸಿಕೊಂಡಿದ್ದವು,ಈ ನೆಲದಲ್ಲಿ ತತ್ತ್ವಜ್ಞಾನಿಗಳು,ಕವಿಗಳು ಆರಂಭಿಸಿದ ಭಾಷಾ ಹಾಗು ಸಾಹಿತ್ಯ ಪರಂಪರೆ ಇಂದಿನವರಿಗೂ ಉಳಿದು,ಬೆಳೆದು ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಪೊಲೀಸ್ ಇನ್ಸಪೇಕ್ಟರ್ ಮಹಮದ್ ಗೊರವನಕೊಳ್ಳ ಕನ್ನಡ ರಾಜ್ಯೋತ್ಸವದ ಶುಭಾಶಯಗಳು ಕೋರಿ ಕರ್ನಾಟಕದ ನೆಲದಲ್ಲಿ ಭಾಷೆ, ಸಂಸ್ಕೃತಿ ಉಳಿದು, ಬೆಳೆದು ಬರುತ್ತಿದೆ. ಆಚಾರ ವಿಚಾರದಲ್ಲಿ ವೈವಿಧ್ಯತೆ ಇದ್ದರೂ ಭಾಷ ನೆಲಗಟ್ಟಿನಲ್ಲಿ ವಿವಿಧತೆಯಲ್ಲಿ ಏಕತೆ ಎನ್ನುವಂತೆ ಭಾಷ ಸೌಹಾರ್ದತೆಯನ್ನು ಕಾಪಾಡಿಕೊಂಡು ಬಂದಿದ್ದೇವೆ ಹೊರಗಿನಿಂದ ಬರುವರಿಗೆ ಕನ್ನಡದ ಭಾಷೆ ನಾವು ಕಲಿಸಬೇಕು ಎಂದರು.ಕ್ಷೇತ್ರ ಶಿಕ್ಷ ಣಧಿಕಾರಿ ಲಕ್ಷ್ಮಯ್ಯ.ಬಿಜೆಪಿ ತಾಲೂಕು ಅಧ್ಯಕ್ಷ ರೋಣೂರುಚಂದ್ರು,VIP ಶಾಲೆಯ ಮುಖ್ಯೋಪಾದ್ಯಯೆ ತಬಸಮ್,ಶಿಕ್ಷಕ ವೇಣುಗೋಪಾಲ್,ಶಿವಣ್ಣ ಮುಂತಾದವರು ಇದ್ದರು.
ವರದಿ:ನಂಬಿಹಳ್ಳಿಸುರೇಶ್