ನ್ಯೂಜ್ ಡೆಸ್ಕ್:ಬಿಗ್ ಬಾಸ್ ತೆಲುಗು ಸೀಸನ್ 8 ಮುಗಿದಿದ್ದು 106 ದಿನಗಳ ಕಾಲ ನಡೆದ ಈ ರಿಯಾಲಿಟಿ ಶೋನಲ್ಲಿ ತೆಲಗು ಖ್ಯಾತ ನಟ ಅಕ್ಕಿನೇನಿ ನಾಗರ್ಜುನ್ ಹೋಸ್ಟ್ ಆಗಿ ನಡೆಸಿಕೊಟ್ಟಿದ್ದು ಸೀಸನ್ 8 ರಲ್ಲಿ ವಿಜೇತರಾಗಿ ಹೊರಹೊಮ್ಮಿರುವುದು ಕನ್ನಡದ ಹುಡುಗ ನಿಖಿಲ್ ಅನ್ನುವುದು ವಿಶೇಷ ತೆಲಗು ಧಾರಾವಾಹಿಗಳ ಮೂಲಕ ಈಗಾಗಲೆ ತೆಲಗರ ಮನೆಮಾತಾಗಿರುವ ನಟ ನಿಖಿಲ್ ಅಂತಿಮ ಹಂತದಲ್ಲಿ ತೆಲುಗು ಹುಡುಗ ಗೌತಮ್ ಕೃಷ್ಣರನ್ನು ಎರಡನೇ ಸ್ಥಾನದಲ್ಲಿ ಕೂರಿಸಿ ವಿಜೇತರಾಗಿದ್ದಾರೆ. ಟಾಪ್-5ರಲ್ಲಿದ್ದ ಅವಿನಾಶ್, ಪ್ರೇರಣಾ ಮತ್ತು ನಬೀಲ್ ಸ್ಪರ್ದೆಯಿಂದ ಹೊರಬಿದ್ದಿದ್ದು ಅಂತಿಮವಾಗಿ ಗೌತಮ್ ಮತ್ತು ನಿಖಿಲ್ ಟಾಪ್-2ರಲ್ಲಿ ನಿಂತಿದ್ದು ಒಬ್ಬರನ್ನು ಆಯ್ಕೆ ಮಾಡಬೇಕಿದ್ದು ಖ್ಯಾತ ನಟ ನಾಗಾರ್ಜುನ ಅವರು ಅಂತಿಮವಾಗಿ, ನಿಖಿಲ್ ಅವರನ್ನು ವಿಜೇತ ಎಂದು ಘೋಷಿಸಿದ್ದಾರೆ.
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರಿಂದ ಟ್ರೋಫಿ ವಿತರಣೆ
ಗ್ಲೋಬಲ್ ಸ್ಟಾರ್ ರಾಮ್ ಚರಣ್ ಅವರು ತೆಲಗು ಬಿಗ್ ಬಾಸ್ ಸೀಸನ್ 8 ರ ವಿಜೇತ ನಿಖಿಲ್ ಅವರಿಗೆ ಟ್ರೋಫಿಯನ್ನು ನೀಡಿದ್ದು 55 ಲಕ್ಷ ಚೆಕ್ ನೀಡಿದ್ದು ಜೊತೆಗೆ ಮಾರುತಿ ಡಿಜೈರ್ ಕಾರನ್ನು ಹೆಚ್ಚುವರಿ ಬಹುಮಾನವಾಗಿ ನೀಡಲಾಗುತ್ತದೆ. ವಿಜೇತ ನಿಖಿಲ್ ಈ ಯಶಸ್ಸನ್ನು ತನ್ನ ತಾಯಿಗೆ ಅರ್ಪಿಸಿದ್ದಾರೆ. ತೆಲುಗು ಪ್ರೇಕ್ಷಕರು ತಮ್ಮನ್ನು ಮನೆ ಹುಡುಗ ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ ಎಂದು ವೇದಿಕೆ ಮೇಲೆ ನಿಖಿಲ್ ಭಾವುಕರಾಗಿ ನುಡಿದರು.
ಕನ್ನಡದ ಹುಡುಗ ನಿಖಿಲ್
ನಿಖಿಲ್ ಮೂಲತಃ ಕರ್ನಾಟಕದ ಮೈಸೂರಿನವರು ಅವರ ತಾಯಿ ನಟಿ ತಂದೆ ಪತ್ರಕರ್ತರು ಹಾಗಾಗಿ ಬಾಲ್ಯದಿಂದಲೂ ನೃತ್ಯ, ಸಿನಿಮಾಗಳಲ್ಲಿ ಆಸಕ್ತಿ ಇದ್ದು ನಿಖಿಲ್ ಹುಟ್ಟಿದ್ದು 28, 1997ರಂದು. ಪೂರ್ತಿ ಹೆಸರಿ ನಿಖಿಲ್ ಮಳಿಯಕ್ಕಲ್ ಮೈಸೂರಿನ ಬಾಡೆನ್ ಪೊವೆಲ್ ಪಬ್ಲಿಕ್ ಸ್ಕೂಲ್ನಲ್ಲಿ ಶಿಕ್ಷಣವನ್ನು ಪಡೆದ ನಂತರ ಬೆಂಗಳೂರಿನ ಆಚಾರ್ಯ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಪದವಿ ಪಡೆದರು. ಬಣ್ಣದ ಲೋಕಕ್ಕೆ ಕಾಲಿಡುವ ಮೊದಲು ಖಾಸಗಿ ಕಂಪನಿಗಳಲ್ಲಿ ಬ್ಯುಸಿನೆಸ್ ಡೆವಲಂಪ್ಮೆಂಟ್ ಕಾರ್ಯನಿರ್ವಾಹಕರಾಗಿ ಕೆಲಸ ಮಾಡಿದ್ದ ಅವರು ಕನ್ನಡ ಹಾಗೂ ತೆಲುಗು ಕಿರುತೆರೆಯಲ್ಲಿ ಕೆಲಸ ಮಾಡುವ ಅವಕಾಶ ಪಡೆದವರು 2016 ರಲ್ಲಿ ತೆರೆಕಂಡ ಕನ್ನಡದ ‘ಊಟಿ’ ಎನ್ನುವ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದರು ‘ಊಟಿ’ ಚಿತ್ರದಲ್ಲಿ ನಿಖಿಲ್ ಪೋಷಕ ಪಾತ್ರವನ್ನು ಮಾಡಿದ್ದು ಬಳಿಕ ಕನ್ನಡದ ‘ಮನೆಯೇ ಮಂತ್ರಾಲಯ’ ಎನ್ನುವ ಧಾರಾವಾಹಿಯಲ್ಲಿ ಸಣ್ಣ ಪಾತ್ರವೊಂದನ್ನು ಮಾಡುವ ಮೂಲಕ ಕನ್ನಡ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದರು ನಂತರ ಗೊರಿಂಟಾಕು ಮತ್ತು ಅಮ್ಮ ಅಪರಿಚಿತ ಕೊಯಿಲಮ್ಮ ಧಾರಾವಾಹಿಗಳೊಂದಿಗೆ ತೆಲಗು ಧಾರಾವಾಹಿ ಮೂಲಕ ತೆಲುಗು ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು. ನಂತರ ‘ಕಲಿಸಿವುಂಟೆ ಕಾಲದು ಸುಖಂ’ ಧಾರಾವಾಹಿಯಲ್ಲೂ ಉತ್ತಮ ಪಾತ್ರ ನಿರ್ವಹಿಸಿದ್ದಾರೆ. ‘ಸ್ರವಂತಿ’, ‘ಊರ್ವಶಿವೋ ರಾಕ್ಷಸಿವೋ’ ಧಾರಾವಾಹಿಗಳು ನಿಖಿಲ್ಗೆ ಒಳ್ಳೆಯ ಮನ್ನಣೆ ತಂದುಕೊಟ್ಟವು. ನಿಖಿಲ್ ಅನೇಕ ಟಿವಿ ಶೋಗಳು, ಗೇಮ್ ಶೋಗಳು ಮತ್ತು ಧಾರಾವಾಹಿಗಳೊಂದಿಗೆ ಹಬ್ಬದ ವಿಶೇಷ ಕಾರ್ಯಕ್ರಮಗಳಲ್ಲಿ ಸದ್ದು ಮಾಡಿದರು. ಬಿಗ್ ಬಾಸ್ ಸೀಸನ್-8ಕ್ಕೆ ಬರುವ ಮುನ್ನ ‘ಕಿರ್ರಕ್ ಬಾಯ್ಸ್ ಕಿಲಾಡಿ ಗರ್ಲ್ಸ್’ ಶೋನಲ್ಲಿ ನಿಖಿಲ್ ಕೂಡ ಭಾಗವಹಿ ಖ್ಯಾತರಾಗಿದ್ದರು. ಮತ್ತು ಬಿಗ್ ಬಾಸ್ ಶೋನಲ್ಲಿ ಭಾಗವಹಿಸಿದ್ದಕ್ಕಾಗಿ ನಿಖಿಲ್ ವಾರಕ್ಕೆ 2.25 ಲಕ್ಷ ರೂ. ಈ ಲೆಕ್ಕಾಚಾರದ ಪ್ರಕಾರ ಹದಿನೈದು ದಿನದಲ್ಲಿಯೂ 33,75,000 ರೂ. ಅಂದರೆ ಬಹುಮಾನದ ಮೊತ್ತ ಸೇರಿ ಒಟ್ಟು ರೂ. ನಿಖಿಲ್ 88 ಲಕ್ಷ ಗಳಿಸಿದ್ದಾರೆ ಎಂದು ವರದಿಯಾಗಿದೆ.