ನ್ಯೂಜ್ ಡೆಸ್ಕ್: ಸ್ವಾತಂತ್ರ್ಯ ಹೋರಾಟಗಾರ ಸಮಾಜವಾದಿ ಆಂದೋಲನಕಾರ ಮಾಜಿ ಮುಖ್ಯಮಂತ್ರಿ ದಿವಂಗತ ಕರ್ಪೂರಿ ಠಾಕೂರ್ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ‘ಭಾರತ ರತ್ನ’ ಘೋಷಿಸಿ ಭಾರತ ಸರ್ಕಾರ ಗೌರವಿಸಿದೆ.
ಅವರ ಜನ್ಮ ಶತಮಾನೋತ್ಸವದ ಹಿನ್ನಲೆಯಲ್ಲಿ ಭಾರತ ಸರ್ಕಾರ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿರುವುದು ಸರ್ವತಾ ಹರ್ಷ ವ್ಯಕ್ತವಾಗಿದೆ.
ಹಿಂದುಳಿದ ಮತ್ತು ಅವಕಾಶ ವಂಚಿತರ ಉನ್ನತಿಗಾಗಿ ಕರ್ಪೂರಿ ಅವರು ಬದ್ಧತೆ ಮತ್ತು ದೂರದೃಷ್ಟಿಯ ಕಾರ್ಯಕ್ರಮಗಳನ್ನು ಜಾರಿಗೆ ತಂದು ಭಾರತದ ಸಾಮಾಜಿಕ ಹಾಗು ರಾಜಕೀಯದಲ್ಲಿ ಅಳಿಸಲಾಗದಂತಹ ಛಾಪು ಮೂಡಿಸಿದ್ದಾರೆ.ರಾಜಕೀಯ ವ್ಯವಸ್ಥೆಯಲ್ಲಿ ಯಾರಾದರೂ ಸಾಮಾಜಿಕ ನ್ಯಾಯ ಪ್ರತಿಪಾದಿಸಿದರೆ ಅದಕ್ಕೆ ಪ್ರೇರಣೆ ಕರ್ಪೂರಿ ಠಾಕೂರ್ ಎನ್ನಬಹುದು.
ಇಂದು ಅವರು ಇಲ್ಲ ಆದರೆ ಅವರ ಸಮಾಜವಾದಿ ಚಿಂತನೆಗಳು ಜೀವಂತವಾಗಿದೆ ಅತ್ಯಂತ ಸರಳ ಜೀವಿಯಾಗಿದ್ದ ಕರ್ಪೂರಿ ಠಾಕೂರ್ ಹೃದಯವಂತ ನಾಯಕ,ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿ ಭೂ ಸುಧಾರಣೆಗಳನ್ನು ಜಾರಿಗೆ ತಂದು ಜಮೀನ್ದಾರರಿಂದ ಭೂರಹಿತ ದಲಿತರಿಗೆ ಭೂಮಿಯನ್ನು ಮರುಹಂಚಿಕೆ ಮಾಡಲು ಕಾರಣಕರ್ತರಾಗಿ ಜನರಿಂದ ಜನನಾಯಕ ಪೀಪಲ್ಸ್ ಹೀರೋ ಎಂದು ಎಂದು ಕರೆಸಿಕೊಂಡವರು, ರಾಜಕೀಯವಾಗಿ ಎಷ್ಟೆಲ್ಲ ಬೆಳೆದರಾದರು ಅವರ ಬಳಿ ಸ್ವಂತ ಕಾರು ಇರಲಿಲ್ಲ ಸ್ವಂತ ಮನೆ ಸಹ ಕಟ್ಟಿಕೊಳ್ಳಲು ಅವರಿಗೆ ಸಾಧ್ಯವಾಗಿರಲಿಲ್ಲ. ಕರ್ಪೂರಿ ಠಾಕೂರ್ ಅವರು ವೃತ್ತಿಯಲ್ಲಿ ಶಿಕ್ಷಕರಾಗಿ, ಸ್ವಾತಂತ್ರ್ಯ ಹಾಗೂ ಸಮಾಜವಾದಿ ಹೋರಾಟಗಾರರಾಗಿದ್ದರು ಠಾಕೂರ್ ಅವರು ಹಿಂದುಳಿದ ಜಾತಿಗಳಿಗೆ ಸರ್ಕಾರಿ ಉದ್ಯೋಗಗಳಲ್ಲಿ ಮೀಸಲಾತಿಯನ್ನು ನೀಡಲು ಶಿಫಾರಸ್ಸು ಮಾಡಿದ್ದರು.
ಅತ್ಯಂತ ಸರಳ ಜೀವಿಯಾಗಿದ್ದರು.
ಬಿಹಾರದ ಸಮಷ್ಟಿಪುರ್ ಜಿಲ್ಲೆಯ ಪಿಟೊಂಜಿಯಾದಲ್ಲಿ(ಈಗ ಕರ್ಪೂರಿಗ್ರಾಮ್) ಗ್ರಾಮದ ನಾಯ್ (ಕ್ಷೌರಿಕ) ಸಮುದಾಯಕ್ಕೆ ಸೇರಿದ ಗೋಕುಲ್ ಠಾಕೂರ್ ಮತ್ತು ರಾಮ್ದುಲಾರಿ ದೇವಿ ದಂಪತಿಗೆ ಜನಿಸಿದ ಕರ್ಪೂರಿ ಠಾಕೂರ್ ತಮ್ಮ ವಿದ್ಯಾರ್ಥಿ ದಸೆಯಲ್ಲೆ ರಾಷ್ಟ್ರೀಯವಾದಿ ಚಿಂತನೆಗಳಿಂದ ಪ್ರಭಾವಿತರಾಗಿದ್ದು ನಂತರದಲ್ಲಿ ಅಖಿಲ ಭಾರತ ವಿದ್ಯಾರ್ಥಿಗಳ ಒಕ್ಕೂಟವನ್ನು ಸೇರಿದರು. ಅವರ ರಾಜಕೀಯ ಸಿದ್ಧಾಂತವು ಲೋಹಿಯಾ ಚಿಂತನೆಯಿಂದ ಮತ್ತಷ್ಟು ರೂಪುಗೊಂಡಿತು ನಿರ್ಲಕ್ಷ್ಯ ಸಮುದಾಯಗಳ ಸಬಲೀಕರಣಕ್ಕೆ ಒತ್ತು ನೀಡಿದ ಹೃದಯವಂತರು ಅವರು ಶಿಕ್ಷಣ ಮಂತ್ರಿಯಾಗಿ, ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣೀಭೂತರಾದರು ಹಲವಾರು ಶಾಲೆ ಕಾಲೇಜುಗಳನ್ನು ಸ್ಥಾಪಿಸಿದರು,ವಿಶೇಷವಾಗಿ ಹಿಂದುಳಿದ ಪ್ರದೇಶಗಳಲ್ಲಿ, ಮತ್ತು 8 ನೇ ತರಗತಿಯವರೆಗಿನ ಶಿಕ್ಷಣವನ್ನು ಉಚಿತವನ್ನಾಗಿಸಿದರು.
ಬಿಹಾರದ ಉಪ ಮುಖ್ಯಮಂತ್ರಿಯಾಗಿ ಮತ್ತು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು ಠಾಕೂರ್ ಅವರು ಮೊದಲ ಬಾರಿಗೆ 1970 ರಿಂದ 1971 ರ ವರೆಗೆ ಮತ್ತು ಎರಡನೇ ಬಾರಿಗೆ 1977ರಿಂದ 1979ರ ವರೆಗೆ ಬಿಹಾರದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರ ಸರಳತೆಯ ಬಗ್ಗೆ ಅನೇಕ ಕಥೆಗಳಿವೆ. 1952 ರಲ್ಲಿ ಅವರು ಮೊದಲ ಬಾರಿಗೆ ಶಾಸಕರಾದಾಗ ಅವರು ಆಸ್ಟ್ರಿಯಾಗೆ ಹೋಗುವ ನಿಯೋಗದಲ್ಲಿ ಇದ್ದರು. ಆದರೆ ಅವರ ಬಳಿ ಧರಿಸಲು ಒಂದು ಕೋಟ್ ಸಹ ಇರಲಿಲ್ಲ. ಅವರ ಗೆಳೆಯನ ಬಳಿ ಕೋಟು ಕೇಳಿದಾಗ ಹರಿದು ಹೋಗಿದ್ದ ಕೋಟು ನೀಡುವ ಮೂಲಕ ತಾತ್ಸಾರ ಮನೋಭಾವ ತೋರಿದ್ದರು,ಕರ್ಪೂರಿ ಅದನ್ನೆ ಧರಿಸಿ ಹೋಗಿದ್ದರು. ಆದರೆ ಅಲ್ಲಿ ನಡೆದದ್ದೆ ಬೇರೆ ಯುಗೊಸ್ಲಾವಿಯಾದ ಮುಖ್ಯಸ್ಥ ಮಾರ್ಷಲ್ ಟಿಟೊ ಅವರು ಕರ್ಪೂರಿ ಅವರ ಹರಿದ ಕೋಟ್ ಅನ್ನು ಗಮನಸಿ ಅವರಿಗೆ ಹೊಸ ಕೋಟ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಕರ್ಪೂರಿ ಠಾಕೂರ್ ಅವರ ಬಳಿ ಕಾರು ಇರಲಿಲ್ಲ ಅವರು ಸದಾ ರಿಕ್ಷಾದಲ್ಲಿಯೇ ಪ್ರಯಾಣಮಾಡುತ್ತಿದ್ದರು.ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರಾದರು 80ರ ದಶಕದಲ್ಲಿ ಕರ್ಪೂರಿ ಠಾಕೂರ್ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು, ಬಿಹಾರ ಅಸೆಂಬ್ಲಿ ಅಧಿವೇಶನ ನಡೆಯುತ್ತಿರುವಾಗ, ಕರ್ಪೂರಿ ಠಾಕೂರ್ ತುಂಬಾ ಹಸಿದು ಅಸ್ವಸ್ಥರಾಗಿದ್ದ ಹಿನ್ನಲೆಯಲ್ಲಿ ಊಟಕ್ಕೆ ಮನೆಗೆ ಹೋಗಬೇಕಾದ ಅನಿವಾರ್ಯತೆ ಉಂಟಾಯಿತು ತುರ್ತಾಗಿ ಮನೆಗೆ ಹೋಗಬೇಕೆಂದು ಬಯಸಿ ಕರ್ಪೂರಿ ಠಾಕೂರ್ ಇದಕ್ಕಾಗಿ ಅವರು ತಮ್ಮದೆ ಪಕ್ಷದ ಶಾಸಕರಾಗಿದ್ದ ಲಾಲು ಯಾದವ್ ಅವರ ಬಳಿ ಇದ್ದ ಜೀಪ್ ಅನ್ನು ಸಮಯದವರೆಗೆ ಬೇಕೆಂದು ಚೀಟಿ ಬರೆದು ಕಳಿಸಿದ್ದಾರೆ ಅದಕ್ಕೆ ಲಾಲು ಯಾದವ್ ಅದೇ ಚೀಟಿಯಲ್ಲಿ ತಮ್ಮ ಜೀಪಿನಲ್ಲಿ ಇಂಧನ ಇಲ್ಲ ಎಂದು ಬರೆದು ಕಳೆಸಿದ್ದಾರೆ ಇದನ್ನುಹಿರಿಯ ಪತ್ರಕರ್ತರೊಬ್ಬರು ತಮ್ಮ ಬರವಣಿಗೆಯಲ್ಲಿ ಪ್ರಸ್ತಾಪಿಸಿದ್ದಾರೆ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದರು,ಒಂದು ಕಾರನ್ನಾದರೂ ಖರೀದಿಸಬೇಕಿತ್ತು ಎಂದು ಕಾರು ಏಕೆ ಖರೀದಿಸಬಾರದು? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದರಂತೆ ಅದಕ್ಕೆ ಕರ್ಪೂರಿ ಠಾಕೂರ್ ಉತ್ತರಿಸಿ ಕಾರು ಖರೀದಿಸುವುದನ್ನು ಮರೆತುಬಿಡಿ, ಇಂಧನಕ್ಕೆ ಕೂಡ ನನ್ನ ಬಳಿ ಹಣವಿಲ್ಲ ಎಂದು ಹೇಳಿದ್ದಾಗಿ ವಿವರಿಸಿದ್ದಾರೆ.
1977 ರ ಒಂದು ಘಟನೆಯ ಬಗ್ಗೆ ಹಿರಿಯ ಪತ್ರಕರ್ತ ಸುರೇಂದ್ರ ಕಿಶೋರ್ ಬರೆದಿರುವಂತೆ ಜಯಪ್ರಕಾಶ್ ನಾರಾಯಣ್ ಅವರ ಜನ್ಮದಿನವನ್ನು ಪಾಟ್ನಾದ ಕದಮ್ ಕುವಾನ್ನಲ್ಲಿರುವ ಚರಖಾ ಸಮಿತಿ ಕಟ್ಟಡದಲ್ಲಿ ಆಚರಿಸಲಾಯಿತು. ಇದರಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್, ನಾನಾಜಿ ದೇಶಮುಖ್ ಸೇರಿದಂತೆ ದೇಶದ ಹಲವಾರು ಘಟಾನುಘಟಿ ಮುಖಂಡರು ಭಾಗವಹಿಸಿದ್ದರು.ಈ ಕಾರ್ಯಕ್ರಮಕ್ಕೆ ಅಂದಿನ ಬಿಹಾರದ ಮುಖ್ಯಮಂತ್ರಿ ಕರ್ಪೂರಿ ಠಾಕುರ್ ಅವರು ಹರಿದ ಕುರ್ತಾ, ಹರಿದ ಚಪ್ಪಲಿಯೊಂದಿಗೆ ಆಗಮಿಸಿದ್ದಾರೆ ಇದನ್ನು ಗಮನಿಸಿದ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಚೆನ್ನಾಗಿ ಬದುಕಲು ಎಷ್ಟು ಸಂಬಳ ಪಡೆಯಬೇಕು? ಎಂದು ಪ್ರಶ್ನಿಸಿದಾಗ ಸಭೆಯಲ್ಲಿದ್ದವರು ನಗಲು ಶುರುಮಾಡಿದರಂತೆ ಚಂದ್ರಶೇಖರ್ ತಮ್ಮ ಆಸನದಿಂದ ಎದ್ದವರೆ ತಮ್ಮ ಕುರ್ತಾವನ್ನು ಹಿಡಿದು ಕರ್ಪೂರಿ ಅವರ ಕುರ್ತಾಗೆ ದೇಣಿಗೆ ನೀಡಿ ಎಂದಾಗ ನೂರಾರು ರೂಪಾಯಿ ಹಣ ಸಂಗ್ರಹವಾಗಿದೆ ಅದನ್ನು ಕರ್ಪೂರಿ ಅವರಿಗೆ ನೀಡಿ ಇನ್ನಾದರು ಕುರ್ತಾ-ಧೋತಿಯನ್ನು ಖರೀದಿಸಿ ಎಂದರೆ ಅದಕ್ಕೆ ಕರ್ಪೂರಿ ಅವರು ಇಲ್ಲ ನಾನು ಈ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುತ್ತೇನೆ ಎಂದರಂತೆ ಅಂತಹ ಸಾಮಜಿಕ ಕಳಕಳಿಯ ಮನಸ್ಥಿತಿಯವರು ಕರ್ಪೂರಿ ಟಾಕೂರ್.
ಸ್ವಾತಂತ್ರ್ಯ ಹೋರಾಟಗಾರರಾಗಿ 26 ತಿಂಗಳು ಜೈಲುವಾಸ
ಕರ್ಪೂರಿ ಠಾಕೂರ್ ಅವರು ಚಿಕ್ಕವಯಸ್ಸಿನಲ್ಲಿ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ತೊಡಗಿಸಿಕೊಂಡ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಕರ್ಪೂರಿ ಠಾಕೂರ್ 26 ತಿಂಗಳ ಕಾಲ ಜೈಲು ವಾಸ ಸಹ ಅನುಭವಿಸಿದ್ದರು.1988ರಲ್ಲಿ ತಮ್ಮ 64 ವಯಸ್ಸಿನಲ್ಲಿ ನಿಧನರಾದರು.ಠಾಕೂರ್ ಅವರ ಪುತ್ರ ರಾಮ್ ನಾಥ್ ಠಾಕೂರ್ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷದ ರಾಜ್ಯಸಭಾ ಸದಸ್ಯರಾಗಿದ್ದಾರೆ.MP in RAJYASABHA
ಪ್ರಧಾನಿ ಮೋದಿ ಟ್ವೀಟ್X
ಸಾಮಾಜಿಕ ನ್ಯಾಯದ ದಾರಿದೀಪ, ಮಹಾನ್ ಜನನಾಯಕ ಕರ್ಪೂರಿ ಠಾಕೂರ್ ಜಿ ಮತ್ತು ಅದೂ ಅವರ ಜನ್ಮಶತಮಾನೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲು ಭಾರತ ಸರ್ಕಾರ ನಿರ್ಧರಿಸಿರುವುದು ಸಂತೋಷ ತಂದಿದೆ.ಪ್ರತಿಷ್ಠಿತ ಮನ್ನಣೆಯು ಅಂಚಿನಲ್ಲಿರುವವರ ಪರವಾಗಿ ಮತ್ತು ಸಮಾನತೆ ಮತ್ತು ಸಬಲೀಕರಣದ ಧೀಮಂತರಾಗಿ ಅವರ ನಿರಂತರ ಪ್ರಯತ್ನಗಳಿಗೆ ಸಾಕ್ಷಿಯಾಗಿದೆ.
ದೀನದಲಿತರನ್ನು ಮೇಲಕ್ಕೆತ್ತಲು ಅವರ ಅಚಲ ಬದ್ಧತೆ ಮತ್ತು ಅವರ ದೂರದೃಷ್ಟಿಯ ನಾಯಕತ್ವ ಭಾರತದ ಸಾಮಾಜಿಕ ಹಾಗು ರಾಜಕೀಯದಲ್ಲಿ ಅಳಿಸಲಾಗದ ಗುರುತು ಹಾಕಿದೆ. ಈ ಪ್ರಶಸ್ತಿಯು ಅವರ ಗಮನಾರ್ಹ ಕೊಡುಗೆಗಳನ್ನು ಗೌರವಿಸುವುದು ಮಾತ್ರವಲ್ಲದೆ ಹೆಚ್ಚು ನ್ಯಾಯಯುತ ಮತ್ತು ಸಮ ಸಮಾಜವನ್ನು ರಚಿಸುವ ಅವರ ಧ್ಯೇಯವನ್ನು ಮುಂದುವರಿಸಲು ನಮಗೆ ಸ್ಫೂರ್ತಿ ನೀಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ (ಟ್ವೀಟರ್)ನಲ್ಲಿ ಹಂಚಿಕೊಂಡಿದ್ದಾರೆ.