ಶ್ರೀನಿವಾಸಪುರ:ಸಾಂಪ್ರದಾಯಿಕ ಹಿಂದೂ ಪಂಚಾಂಗದ ಪ್ರಕಾರ ಕಾರ್ತಿಕ ಪೂರ್ಣಿಮೆಯು ಅತ್ಯಂತ ಶ್ರೇಷ್ಠವಾದ ದಿನವಾಗಿ ಪರಿಗಣಿಸಿ ಮಾಹಾ ಕಾರ್ತಿಕ ಎಂದು ಕರೆಯಲಾಗುವುದು.ಧಾರ್ಮಿಕವಾಗಿ ಅತ್ಯಂತ ಪವಿತ್ರ ಹಾಗೂ ಶ್ರೇಷ್ಠತೆಯನ್ನು ಪಡೆದುಕೊಂಡಿದ್ದು ವಿಶೇಷವಾಗಿ ಶಿವನಿಗೆ ಮೀಸಲಾದ ದಿನ ಎಂದು ಹೇಳಲಾಗುತ್ತದೆ ಈ ಹಿನ್ನಲೆಯಲ್ಲಿ ಶ್ರೀನಿವಾಸಪುರ ಪಟ್ಟಣದ ಶ್ರೀ ಲಕ್ಷ್ಮೀನೃಸಿಂಹ ಸ್ವಾಮಿ ಆವರಣದಲ್ಲಿ ಭಕ್ತಸಮೂಹ ಗಿರಿಜಾ ಕಲ್ಯಾಣ ಮಹೋತ್ಸವವನ್ನು ಆಯೋಜಿಸಿದ್ದರು.
ದೇವಾಲಯದ ಆವರಣದಲ್ಲಿ ಅಲಂಕರಿಸಿ ಸ್ಥಾಪಿಸಿದ್ದ ವೇದಿಕೆಯಲ್ಲಿ ಶ್ರೀನಿಲಕಂಟೇಶ್ವರ ಹಾಗೂ ಪಾರ್ವತಿದೇವಿ ಉತ್ಸವಮೂರ್ತಿಗಳನ್ನು ವಿಧಿವಿಧಾನಗಳಂತೆ ಅರ್ಚಕರು ಪ್ರತಿಷ್ಟಾಪಿಸಿದ್ದು ದೇವಾಲಯದಲ್ಲಿ ಕಲ್ಯಾಣ ಸಡಗರ ಕಳೆಗಟ್ಟಿತ್ತು ,ಮಂಗಳ ವಾದ್ಯಗೋಷ್ಠಿ, ಸಪ್ತ ನಾದಸ್ವರದೊಂದಿಗೆ ಮೆರುಗು ಹೆಚ್ಚಿಸಿತು.ಕಲ್ಯಾಣೋತ್ಸವದ ವೈಭೋಗವನ್ನು ಕಣ್ತುಂಬಿಕೊಳ್ಳಲು ದೊಡ್ಡ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು, ದೇವಾಲಯ ವಿದ್ಯುತ್ ದೀಪಾಲಂಕೃತಗೊಂಡು ಕಂಗೊಳಿಸುತಿತ್ತು.
ಕಲ್ಯಾಣೋತ್ಸವ ನಿರ್ವಿಘ್ನವಾಗಿ ಸಾಗಲು ಪ್ರಾತಃಕಾಲ ಮಹಾಗಣಪತಿ ಪೂಜೆ ಸಲ್ಲಿಸಲಯಿತು.ಬೆಳಗ್ಗೆ ಮೂಲದೇವರ ಪ್ರಾರ್ಥನೆ ನೆರವೇರಿಸಲಾಯಿತು ನಂತರ ದೇವಾಲಯದ ಆವರಣದಲ್ಲಿ ಶ್ರೀಗಣಪತಿ,ನವಗ್ರಹ ಶ್ರೀಲಕ್ಷ್ಮೀನೃಸಿಂಹ ಹೋಮ ಹವನ ನೇರವೇರಿಸಲಾಯಿತು ನಂತರ ಶ್ರೀ ಸತ್ಯನಾರಯಣಸ್ವಾಮಿ ವ್ರತ ನಡೆದ ನಂತರ ಸಂಜೆ ಶುಭ ಮುಹೂರ್ತದಲ್ಲಿ ಜೊವಲರಿ ಮುರಳಿಕೃಷ್ಣ ಅವರ ಮನೆಯಲ್ಲಿ ಪೂಜಿಸಿದ ಶ್ರೀನಿಲಕಂಟೇಶ್ವರ ಮೂರ್ತಿಯನ್ನು ವಿಧಿ ವಿಧಾನಗಳೊಂದಿಗೆ ತಾಳ ವಾದ್ಯಗಳೊಂದಿಗೆ ಭಕ್ತಿಯಂದ ಕಲ್ಯಾಣ ಮಂಟಪಕ್ಕೆ ಭಕ್ತರು ಕರೆತಂದು ಶ್ರೀಪಾರ್ವತಿ ಅಮ್ಮನ ಮೂರ್ತಿಯೊಂದಿಗೆ ಶ್ರೀನಿಲಕಂಟೇಶ್ವರ ಮೂರ್ತಿಯನ್ನು ಮಂಪಟದಲ್ಲಿ ಕೂರಿಸಿ ಪೂಜೆ ಸಲ್ಲಿಸಿದ ಬಳಿಕ ಧಾರಾ ಮಹೋತ್ಸವದೊಂದಿಗೆ ಕನ್ಯಾದಾನ ನಡೆದು ಕಲ್ಯಾಣೋತ್ಸವ ಕಾರ್ಯಕ್ರಮ ನೇರವೇರಿತು. ಸೇವಾರ್ಥದಾರರು ದಂಪತಿ ಸಮೇತವಾಗಿ ಕಾರ್ಯಕ್ರಮಗಳಲ್ಲಿ ಪಾಲ್ಗೋಂಡಿದ್ದರು.ಭಕ್ತರಿಗೆ ಪ್ರಸಾದ ವ್ಯವಸ್ಥೆ ಸಹ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ಹಾಗು ಹಾಲಿ ಶಾಸಕ
ಶ್ರೀ ಲಕ್ಷ್ಮೀನೃಸಿಂಹ ಸ್ವಾಮಿ ಆವರಣದಲ್ಲಿ ಭಕ್ತಸಮೂಹ ಆಯೋಜಿಸಿದ್ದ ಗಿರಿಜಾ ಕಲ್ಯಾಣ ಮಹೋತ್ಸವಕ್ಕೂ ಮುನ್ನ ದೇವಾಲಯದ ಕಾರ್ಯಕ್ರಮದಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಭಾಗವಹಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.ಅವರೊಂದಿಗೆ ಪುರಸಭೆ ಅಧ್ಯಕ್ಷ ಭಾಸ್ಕರ್,ನಾಮಿನಿ ಸದಸ್ಯ ಗಂಗಾಧರ್,ಮಾಜಿ ಅಧ್ಯಕ್ಷ ಸೂರ್ಯನಾರಯಣ್ ಇದ್ದರು.
ಸಂಜೆ ನಡೆದ ಗಿರಿಜಾ ಕಲ್ಯಾಣ ಮಹೋತ್ಸವ ಕಾರ್ಯದಲ್ಲಿ ಹಾಲಿ ಶಾಸಕ ವೆಂಕಟಶಿವಾರೆಡ್ಡಿ ಜನತಾದಳ ಮುಖಂಡ CMR ಶ್ರೀನಾಥ್,ಜಿಲ್ಲಾ ಪಂಚಾಯಿತಿ ,ಮಾಜಿ ಅಧ್ಯಕ್ಷ ತೂಪಲ್ಲಿನಾರಯಣಸ್ವಾಮಿ,ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸಪ್ಪ ಮುಂತಾದವರು ಭೇಟಿ ನೀಡಿದ್ದರು.