ಶ್ರೀನಿವಾಸಪುರ :ಶ್ರೀನಿವಾಸಪುರ ಕಸಬಾ ಸೊಸೈಟಿಯ ಅಧ್ಯಕ್ಷ ಗಾದಿಗೆ ಇಬ್ಬರು ಕಾಂಗ್ರೆಸ್ ನಿರ್ದೇಶಕರ ನಡುವೆ ಚುನಾವಣೆ ನಡೆದಂತ ಸ್ವಾರಸ್ಯಕರ ಘಟನೆ ನಡೆದಿದೆ. ತಾಲ್ಲೂಕಿನ ಸಹಕಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಮುಖಂಡರ ನಡುವೆ ಒಮ್ಮತ ಇಲ್ಲವಾ ಎಂಬ ಅನುಮಾನ ಸಾರ್ವಜನಿಕರಲ್ಲಿ ಹುಟ್ಟುಹಾಕಿದೆ . ತಾಲ್ಲೂಕು ಸಹಕಾರ ಕ್ಷೇತ್ರದಲ್ಲಿ ಮೊದಲಿನಿಂದಲೂ ಇಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಅನುಯಾಯಿಗಳದೆ ಪಾರುಪತ್ಯ ಯಾವುದೇ ಸಹಕಾರ ಸಂಘ ಇರಲಿ ಒಮ್ಮೆ ಹೈಕಮಾಂಡ್ ಸಮ್ಮುಖದಲ್ಲಿ ನಿರ್ಧರವಾದರೆ ಮುಗಿಯಿತು ಒಮ್ಮತದ ಅಭ್ಯರ್ಥಿ ಕಣದಲ್ಲಿ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗುವುದು ಇಲ್ಲಿ ಬಹುವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ.
ಆದರೆ ಕಸಬಾ ಸೊಸೈಟಿ ಅಧ್ಯಕ್ಷ ಚುನಾವಣೆಯಲ್ಲಿ ಹಳೆಯ ಸಂಪ್ರದಾಯ ಮೂಲೆಗುಂಪಾಗಿದೆ! ಕಸಬಾ ಸೊಸೈಟಿ ಅಧ್ಯಕ್ಷರಾಗಿದ್ದ ಅಲಂಬಗಿರಿಅಯ್ಯಪ್ಪ ನಿಧನರಾದ ಹಿನ್ನೆಲೆಯಲ್ಲಿ ಅವರ ಸ್ಥಾನಕ್ಕೆ ನಡೆದ ಅಧ್ಯಕ್ಷಗಾದಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ನಿರ್ದೇಶಕರು ಉಮೇದುವಾರಿಕೆ ಸಲ್ಲಿಸಿ ಚುನಾವಣೆ ಎದುರಿಸಿದ್ದಾರೆ ಇದರ ಪರಿಣಾಮ ಹಿರಿಯ ಸಹಕಾರಿ ಧುರೀಣರಾದ ಶೆಟ್ಟಿಹಳ್ಳಿರಾಮಚಂದ್ರಪ್ಪ ತಮ್ಮ ಪ್ರತಿಸ್ಪರ್ಧಿ ಯಾಗಿದ್ದ ಯಲವಕುಂಟೆ ಬೈರಾರೆಡ್ಡಿ ವಿರುದ್ಧ 5 ಮತಗಳ ಅಂತರದಲ್ಲಿ ಸೋಲು ಒಪ್ಪಿಕೊಂಡಿದ್ದಾರೆ.
ಕಸಬಾ ಸೊಸೈಟಿ@ಕಸಬಾ ರೇಷ್ಮೆ ಬೆಳೆಗಾರರ ಹಾಗು ರೈತಸೇವಾ ಸಹಕಾರ ಸಂಘ ನಿಯಮಿತ ಸಹಕಾರ ಸಂಘದಲ್ಲಿ ಒಟ್ಟು 13 ಮಂದಿ ನಿದೇರ್ಶಕರಿದ್ದು ಅದರಲ್ಲಿ ಯಲವಕುಂಟೆ ಬೈರಾರೆಡ್ಡಿ ಅವರಿಗೆ ಪ್ರತಿಸ್ಪರ್ಧಿಯಾಗಿ ಶೆಟ್ಟಿಹಳ್ಳಿ ರಾಮಚಂದ್ರಪ್ಪ ನಾಮಪತ್ರ ಸಲ್ಲಿಸಿದ್ದರು. ಅದರಲ್ಲಿ ಯಲವಕುಂಟೆ ಬೈರಾರೆಡ್ಡಿ ರವರು 8 ಮತಗಳನ್ನು ಪಡೆದು , ರಾಮಚಂದ್ರಪ್ಪ 5 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.ಚುನಾವಣೆ ಅಧಿಕಾರಿಯಾಗಿದ್ದ ಎಂ.ಐ.ಅಬೀಬ್ಹುಸೇನ್ ವಿಜೇತ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ.ಈ ಸಂದರ್ಭದಲ್ಲಿ ಸೊಸೈಟಿ ಕಾರ್ಯನಿರ್ವಹಣಾಧಿಕಾರಿ ಶಿವಾರೆಡ್ಡಿ, ನಿದೇರ್ಶಕರಾದ ಬೈರಪಲ್ಲಿ ವೆಂಕಟರೆಡ್ಡಿ, ಮೊಗಿಲಹಳ್ಳಿ ಶಾಂತಮ್ಮ, ದ್ವಾರಸಂದ್ರ ನಾರಾಯಣಸ್ವಾಮಿ, ದ್ವಾರಸಂದ್ರ ಮುನಿವೆಂಕಟಪ್ಪ, ಹೆಬ್ಬಟ ಮುನಿಯಪ್ಪ, ಚೌಡಹಳ್ಳಿ ಮುನಿಶಾಮಿ, ಶಿವಪುರ ಸಿ.ಗರ್ರಪ್ಪ, ಆಲಂಬಗಿರಿ ಎ.ವಿ.ಮನೋಹರ, ಶ್ರೀನಿವಾಸಪುರ ಶಬ್ಬೀರ್ ಅಹ್ಮದ್, ಆವುಲಕುಪ್ಪ ಭಾಗ್ಯಮ್ಮ, ವೇಣು ಇದ್ದರು.
Breaking News
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
- ಕೆಟ್ಟು ನಿಂತ ಬೆಂಗಳೂರು-ಕೋಲಾರ ಮೆಮೊ ರೈಲು ,ರಾತ್ರಿವೇಳೆ ಪರದಾಡಿದ ಪ್ರಯಾಣಿಕರು!
Thursday, April 3