ನ್ಯೂಜ್ ಡೆಸ್ಕ್:-ಕರ್ನಾಟಕದಲ್ಲಿ ಮುಂಬರುವ ಉಪಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ಪಕ್ಷ ಪ್ರಕಟಿಸಿದೆ. ಆದರೆ ಕೇರಳದಲ್ಲಿ ನಡೆಯುವಂತ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸಲು ತಯಾರಿ ನಡೆಸುತ್ತಿದೆ. ಪಕ್ಷದ ಮುಖ್ಯಸ್ಥ ದೇವೇಗೌಡ ಅವರು ಕೆರಳದ ನಾಲ್ಕು ಸ್ಥಾನಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿರುವುದಾಗಿ ಘೋಷಿಸಿದ್ದಾರೆ ಅಭ್ಯರ್ಥಿಗಳ ಪಟ್ಟಿಯನ್ನು ಸಹ ಮಾಧ್ಯಮಗಳಿಗೆ ಬಿಡುಗಡೆ ಮಾಡಿರುತ್ತಾರೆ. ಕೋವಲಂ, ತರುವಾಲ್ಲಾ, ಚಿತ್ತೂರು ಮತ್ತು ಅಂಕಮಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳ ಪಟ್ಟಿಯನ್ನು ಮಂಗಳವಾರ .ಬೆಂಗಳೂ
ಜೆಡಿಎಸ್ ಕಚೇರಿಯಿಂದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಅವರ ಹೆಸರಿನಲ್ಲಿ ಬಿಡುಗಡೆಮಾಡಿದ್ದಾರೆ ಇದರಲ್ಲಿನ ಮಾಹಿತಿಯಂತೆ ಕೋವಲಂ ಕ್ಷೇತ್ರದಿಂದ ಡಾ.ನೀಲಾ ಲೋಹಿತದಸ್ಸ ನಾಡರ್,ತಿರುವಲ್ಲಾದಿಂದ ಮ್ಯಾಥ್ಯೂ ಟಿ. ಥಾಮಸ್,ಚಿತ್ತೂರಿನಿಂದ ಕೆ.ಕೃಷ್ಣ ಕುಟ್ಟಿ ಮತ್ತು ಅಂಕಮಲಿಯಲ್ಲಿ ಜೋಸ್ ಥೆಟ್ಟಿ ಅವರನ್ನು ಅಖಾಡಕ್ಕಿಳಿಸಲಿದ್ದಾರೆ.
ಕರ್ನಾಟಕದಲ್ಲಿ ಮುಂಬರುವ ಉಪ ಚುನಾವಣೆಗಳಿಂದ ದೂರವಿರುವುದಾಗಿ ದೇವೇಗೌಡರೇ ಹೇಳಿದ್ದರು.
ಕರ್ನಾಟಕದಲ್ಲಿ ನಡೆದ ಉಪಚುನಾವಣೆ ಕುರಿತಾಗಿ ದೇವೇಗೌಡ ಪ್ರತಿಕ್ರಿಯಿಸಿ,ಉಪಚುನಾವಣೆಗಳಲ್ಲಿ ಜೆಡಿಎಸ್ ಸ್ಪರ್ಧಿಸುತ್ತಿಲ್ಲ, ಚುನಾವಾಣೆಗೆ ಮತದಾನಕ್ಕೆ ಹೋಗಲು ನಮ್ಮ ಬಳಿ ಹಣವಿಲ್ಲ.ಮುಂಬರುವ ಉಪಚುನಾವಣೆಯಲ್ಲಿ ನಾವು ಪಕ್ಷವನ್ನು ಬಲಪಡಿಸಲು ಪಕ್ಷದ ಎಲ್ಲ ಮುಖಂಡರು ಮತ್ತು ಕಾರ್ಯಕರ್ತರೊಂದಿಗೆ ಕೆಲಸ ಮಾಡುತ್ತೇನೆ. 2023 ರ ವೇಳೆಗೆ ಪಕ್ಷವನ್ನು ಬಲಪಡಿಸಿ ಪ್ರಭಲ ಅಭ್ಯರ್ಥಿಗಳನ್ನು ನಿಲ್ಲಿಸಿ ನಾನು ಕೆಲಸ ಮಾಡಿ ಗೆಲ್ಲಿಸುತ್ತೆನೆ ಎಂದು ಅವರು ಹೇಳಿದ್ದರು,ಇವತ್ತು ಕೆರಳದ ಅಭ್ಯರ್ಥಿಗಳ ಬಿಡುಗಡೆ ಮಾಡಿರುವ ಕುರಿತಾಗಿ ಜೆಡಿಎಸ್ ನಡೆ ಕುರಿತಾಗಿ ನೆರೆ ರಾಜ್ಯದಲ್ಲಿ ಸ್ಪರ್ಧಿಸುವುದು ಕರ್ನಾಟಕದಲ್ಲಿ ಚುನಾವಣೆಯಿಂದ ದೂರ ಉಳಿಯುವುದು ಎಂದೆಲ್ಲ ರಾಜಕೀಯ ಪಂಡಿತರಿಂದ ವಿಭಿನ್ನ ಅಭಿಪ್ರಾಯಗಳು ಹೊರಹೊಮ್ಮುತ್ತಿವೆ.
ದೇವೇಗೌಡರ ಹೇಳಿಕೆಯನ್ನು ಕಾರ್ಯಕರ್ತರು ವಿರೋಧಿಸಿದ ನಂತರ, ಮಸ್ಕಿ, ಬಸವ ಕಲ್ಯಾಣ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಜೆಡಿಎಸ್ ನಿಂದ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದ್ದೇವೆ ಎಂದು ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿರಲು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ನಿರ್ಧರಿಸಿದ್ದರು, ಆದರೆ ಪಕ್ಷದ ಕಾರ್ಯಕರ್ತರ ಒತ್ತದಿಂದಾಗಿ ಈ ಯೋಚನೆಯನ್ನು ಪುನರ್ ಪರಿಶೀಲಿಸಿ ಸಮರ್ಥ ಅಭ್ಯರ್ಥಿಗಳನನ್ನು ಕಣಕ್ಕಿಳಿಸುವುದಾಗಿ ಹೇಳಿಕೆ ನೀಡಿದ್ದರು. ಬಿಜೆಪಿ ಹಾಗೂ ಕಾಂಗ್ರೆಸ್ ನೊಂದಿಗೆ ಚುನಾವಣೆಯನ್ನು ಸಮಾನ ಹೋರಾಟ ನಡೆಸಲಿದ್ದೇವೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.