- ರಣ ಭೀಕರ ಮಳೆಯ ರುದ್ರ ನರ್ತನಕ್ಕೆ
- ವಯನಾಡಿನ ಭಾಗದಲ್ಲಿ ಭೂಕುಸಿತ
- ಮಣ್ಣಿನಡಿಯಲ್ಲಿ ನೂರಾರು ಶವಗಳು
ನ್ಯೂಜ್ ಡೆಸ್ಕ್:ಸೋಮವಾರ ಎಲ್ಲವೂ ಚನ್ನಾಗಿತ್ತು ರಾತ್ರಿ ಊಟ ಮಾಡಿ ಮಲಗಿದವರು ಮದ್ಯರಾತ್ರಿಯಲ್ಲಿ ಎನಾಗುತ್ತಿದೆ ಅನ್ನುವಷ್ಟರಲ್ಲಿ ಕೇಳಿಸಿದ್ದು ಜನರ ಆಕ್ರಂದನ. ರಾತ್ರಿ ಬೆಳಗಾಗುವುದರೊಳಗೆ ಇಡೀ ಭೂಪ್ರದೇಶವೇ ಮಣ್ಣಿನಡಿಯಲ್ಲಿದೆ ಯಾರನ್ನು ಯಾರು ಕಾಪಾಡಿಕೊಳ್ಳಲು ಆಗದೆ ಕಾರ್ಗತ್ತಲ ಕರಾಳರಾತ್ರಿಯಲ್ಲಿ ಪ್ರಳಯವೆ ನಡೆದು ಹೋಗಿದೆ. ದೊಡ್ಡದೊಂದು ಬೆಟ್ಟವೆ ಊರಿನ ಮೇಲೆ ಬಂದು ಬಿದ್ದಿದೆ ಏಳೆಂಟು ಅಡಿ ಎತ್ತರದಲ್ಲಿ ನೀರುಹರಿದ ಪರಿಣಾಮ ಅದೇಷ್ಟೊ ಮನೆಗಳು ಕುಸಿದು ನೀರಿನಲ್ಲಿ ಕೊಚ್ಚಿಹೋಗಿದೆ ಆ ಮನೆಗಳಲ್ಲಿದ್ದವರು ಬದುಕಿದ್ದಾರೋ ಮೃತಪಟ್ಟಿದ್ದಾರೋ ಆನ್ನುವ ಸುಳಿವೆ ಇಲ್ಲ, ಸಿಕ್ಕ ಹೆಣಗಳು ಯಾರದು ಎಂದು ಹೇಳಲಾರದಷ್ಟು ವಿಕಾರವಾಗಿದೆ, ಬಾರಿ ಗಾತ್ರದ ಬೆಟ್ಟದ ಗುಂಡುಕಲ್ಲುಗಳು ಉರಳಿಕೊಂಡು ಜನವಸತಿ ಪ್ರದೇಶಗಳಲ್ಲಿ ಬಂದು ಬಿದ್ದಿವೆ. ಬಾರಿ ಗಾತ್ರದ ಮರದದಿಮ್ಮೆಗಳು ಮುರಿದು ಬಂದಿವೆ, ಕಾರು ದ್ವಿಚಕ್ರವಾಹನಗಳು ಅಡ್ಡಾ ದಿಡ್ಡಿಯಾಗಿ ಎಲ್ಲಂದರಲ್ಲಿ ಎಸೆದು ಬಿಸಾಕಿದಂತೆ ಬಿದ್ದಿವೆ ಕರಾಳವಾದ ವರುಣನ ರುದ್ರ ನರ್ತನದ ಪರಿಣಾಮ ಕಾಣಸಿದ್ದು ಮಣ್ಣಿನ ಕೆಸರು,ಕೊಚ್ಚಿ ಹೋಗುತ್ತಿದ್ದ ಮೃತದೇಹಗಳು ಮತ್ತು ಬರೀ ಬುರದೆ ನೀರು ಮಾತ್ರ!.
ರಣಭಿಕರ ಮಳೆಯಿಂದಾಗಿ ಕೇರಳದ ವಯನಾಡ್ ಜಿಲ್ಲೆಯ ಮೆಪ್ಪಾಡಿ, ಮುಂಡಕೈ ಮತ್ತು ಚೋರಲ್ ಭಾಗಗಳಲ್ಲಿ ಸೋಮವಾರ ಕರಾಳರಾತ್ರಿ ಸಂಭವಿಸಿರುವ ಭೂಕುಸಿತಕ್ಕೆ ದೊಡ್ಡ ಮಟ್ಟದ ಪ್ರಾಣಹಾನಿ ನಡೆದಿದೆ.
ವಯನಾಡು ಭಾಗದ ಕೆಲವೊಂದು ಗ್ರಾಮಗಳಾದ ಮುಂಡಕ್ಕೈ, ಚೂರಲ್ಮಲಾ, ಅಟ್ಟಮಾಲ ಮತ್ತು ನೂಲ್ಪುಳ ಗ್ರಾಮಗಳಲ್ಲಿ ಮಾರಣಾಂತಿಕ ಭೂಕುಸಿತ ಸಂಭವಿಸಿದ್ದು ಊರುಗಳು ಸಂಪೂರ್ಣ ಜಲಸಮಾಧಿಯಾಗಿವೆ ಊರು ಇತ್ತು ಎನ್ನಲು ಅಲ್ಲೊಂದು ಇಲ್ಲೊಂದು ಎಂಬಂತೆ ಕಾಣುವ ಮಹಡಿ ಮನೆಗಳು ಕುರುವುಗಳಾಗಿ ಉಳಿದಿವೆ ಸುಂದರ ವೈನಾಡಿನ ಬೆಟ್ಟ ಪ್ರದೇಶದ ಗ್ರಾಮಗಳಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ.
ಕೇರಳ ಸರ್ಕಾರದ ಮನವಿ ಮೇರೆಗೆ ಘಟನಾಸ್ಥಳಕ್ಕೆ ಕಣ್ಣೂರನಲ್ಲಿರುವ ರಕ್ಷಣಾ ಪಡೆ ಕೇಂದ್ರದಿಂದ ಭೂಸೇನೆಯ ಸೈನಿಕರು (NDRF) ತಂಡ ವಯನಾಡಿಗೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. ಅದೇ ರೀತಿಯಲ್ಲಿ ಮದ್ರಾಸ್ ನ 122 ಇನ್ ಫ್ಯಾಂಟ್ರಿ ಬೆಟಾಲಿಯನ್ ಈಗಾಗಲೇ ಚೋರಲ್ ಮಲದಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಈ ತಂಡದಲ್ಲಿ ವೈದ್ಯ ಅಧಿಕಾರಿ, ಇಬ್ಬರು ಜೆಸಿಒ ಸೇರಿದಂತೆ ಒಟ್ಟು 40 ಸೈನಿಕರ ತಂಡ ಇಲ್ಲಿ ಕಾರ್ಯಾಚರಣೆಯಲ್ಲಿ ನಿರತವಾಗಿದೆ.
2011ರಲ್ಲಿ ಪರಿಸರ ತಜ್ಞ ಮಾಧವ ಗಾಡ್ಗೀಳ್ ತಂಡ ಪಶ್ಚಿಮ ಘಟ್ಟಗಳ ಕುರಿತಂತೆ (ಡಬ್ಲ್ಯೂಜಿಇಇಪಿ) ವರದಿಯೊಂದನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಕೆ ಮಾಡಿತ್ತು. ಇದರಲ್ಲಿ ಸಮಿತಿಯು ಪರಿಸರ ಸೂಕ್ಷ್ಮ ಪ್ರದೇಶಗಳಲ್ಲಿ (ಇಎಸ್ಎ) ನಡೆಸುತ್ತಿರುವ ವಿವೇಚನಾರಹಿತ ಕಲ್ಲುಗಣಿಗಾರಿಕೆ ಮತ್ತು ನಿರ್ಮಾಣ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ನೀಡಿತ್ತು.ಕೇರಳ ರೌದ್ರ ಮಳೆ ಭೂಕುಸಿತ ಹಿನ್ನಲೆಯಲ್ಲಿ ಮತ್ತೊಮ್ಮೆ ಪರಿಸರ ತಜ್ಞರ ಹೆಚ್ಚರಿಕೆ ಮುನ್ನಲೆಗೆ ಬಂದಿದೆ
ಕೇರಳ ಘಟನೆಗೆ ಮೀಡಿದ ಮೋದಿ ಪಿಣರಾಯ್ ಗೆ ಕರೆ
ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ಸಂತಾಪ ವ್ಯಕ್ತಪಡಸಿ ಪ್ರಧಾನ ಮಂತ್ರಿ ಪರಿಹಾರ ನಿಧಿಯಿಂದ ಸಂತ್ರಸ್ತರಿಗೆ ತಲಾ 2 ಲಕ್ಷ ಪರಿಹಾರ ಮತ್ತು ಗಾಯಾಳುಗಳಿಗೆ 50 ಸಾವಿರ ಘೋಷಿಸಿದ್ದಾರೆ. ದುರಂತಕ್ಕೆ ಸಂಬಂಧಿಸಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಅವರ ಜೊತೆ ಫೋನಿನಲ್ಲಿ ಮಾತುಕತೆ ನಡೆಸಿದ್ದಾರೆ.
ರಾಹುಲ್ ಗಾಂಧಿ ಸಂತಾಪ
ಕಾಂಗ್ರೆಸ್ ಹೈಕಮಾಂಡ್ ವಯನಾಡಿನ ಮಾಜಿ ಸಂಸದ ರಾಹುಲ್ ಗಾಂಧಿ ಅವರು ಸಹ ಘಟನೆಗೆ ತೀವ್ರ ವಿಷಾದ ವ್ಯಕ್ತಪಡಿಸಿದ್ದಾರೆ. ಅವರು ಸಹ ಕೇರಳ ಸಿಎಂ, ಮತ್ತು ವಯನಾಡ್ ಜಿಲ್ಲಾಧಿಕಾರಿಗಳ ಜೊತೆ ಫೋನಿನಲ್ಲಿ ಮಾತನಾಡಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.