- ಈರುಳ್ಳಿಕೃಷ್ಣಾರೆಡ್ಡಿಯವರ
- ನಿಲ್ಲಿಸಿದ್ದ ಕಾರಿನ ಗ್ಲಾಸ್
- ಒಡೆದು ಹಣ ಕಳ್ಳತನ
ಚಿಂತಾಮಣಿ: ಚಿಂತಾಮಣಿ ನಗರದ ಸೂಣ್ಣಶೆಟ್ಟಹಳ್ಳಿ ಬಡಾವಣೆಯಲ್ಲಿ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಹಣ ದೋಚಿಕೊಂಡು ಹೋಗಿದ್ದ ಖತರ್ನಾಕ್ ಕಳ್ಳನನ್ನು ಬಂದಿಸುವಲ್ಲಿ ಚಿಂತಾಮಣಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ 1 ಲಕ್ಷ 80 ಸಾವಿರಾರು ರೂ.ಹಣ ಜಪ್ತಿ ಮಾಡಲಾಗಿದೆ.
ಎರಡು ತಿಂಗಳ ಹಿಂದೆ ಅಂದರೆ ಜುಲೈ 15 ರಂದು ಚಿಂತಾಮಣಿಯ ಈರುಳ್ಳಿಕೃಷ್ಣಾರೆಡ್ಡಿ ಅವರು ಕೆನರಾಬ್ಯಾಂಕ್ ನಲ್ಲಿ ಹಣ ಡ್ರಾಮಾಡಿಕೊಂಡು ನಗರದ ಸೊಣ್ಣಶೇಟ್ಟಿಹಳ್ಳಿ ಬಡಾವಣೆಯ ಯಾಜ್ಞವಲ್ಕ ದೇವಾಲಯ ಬಳಿ ಕಾರನ್ನು ನಿಲ್ಲಿಸಿ ದೇವಾಲಯಕ್ಕೆ ಹೋಗಿ ಬರುವಷ್ಟರಲ್ಲಿ ಕಾರಿನ ಗ್ಲಾಸ್ ಒಡೆದು ಕಾರಿನಲ್ಲಿ ಇಟ್ಟಿದ್ದ 5 ಲಕ್ಷ ಹಣವನ್ನು ಕಳ್ಳತನ ಮಾಡಲಾಗಿತ್ತು ಈ ಬಗ್ಗೆ ಹಣ ಕಳೆದುಕೊಂಡ ಈರುಳ್ಳಿಕೃಷ್ಣಾರೆಡ್ಡಿ ಚಿಂತಾಮಣಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು ಈ ಮೇರೆಗೆ ಕಳ್ಳತನದ ಜಾಡು ಹಿಡಿದು ಹೋರಟ ಪೋಲಿಸರು ಚಿಕ್ಕಬಳ್ಳಾಪುರ ಜಿಲ್ಲಾ ಎಸ್.ಪಿ, ಕುಶಲ್ ಚೌಕ್ಸಿ,ಎ.ಎಸ್.ಪಿ ರಾಜಾ ಇಮಾಮ್ ಖಾಸಿಂ, ಚಿಂತಾಮಣಿ ಉಪವಿಭಾಗದ ಡಿವೈ.ಎಸ್.ಪಿ.ಮುರಳೀಧರ ಮಾರ್ಗದರ್ಶನದಲ್ಲಿ ಚಿಂತಾಮಣಿ ನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ವೀಜಿಕುಮಾರ್ ಸಿಬ್ಬಂದಿ ತಂಡ ರಚಿಸಿಕೊಂಡು ಕಾರ್ಯಚರಣೆ ನಡೆಸಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ
ಹಣ ದೋಚಿಕೊಂಡು ಪರಾರಿಯಾಗಿದ್ದ ಆರೋಪಿ 19 ವರ್ಷದ ಸಂದೀಪ್ ಬಾಬು ಬೋವಿ ಅಲಿಯಾಸ್ ವೆಂಕಟೇಶ್ ಎಂದು ಗುರುತಿಸಲಾಗಿದ್ದು ಇವನು ಶಿವಮೊಗ್ಗ ಜಿಲ್ಲೆ,ಭದ್ರಾವತಿ ನಗರದ,ಹೊಸಮನೆ ವೃತ್ತದ,2ನೇ ಕ್ರಾಸನಲ್ಲಿ ಪೋಸ್ಟಾಫಿಸ್ ಬಳಿಯ ನಿವಾಸಿಯಾಗಿದ್ದು ಆರೋಪಿಯನ್ನು ಮಹಾರಾಷ್ಟ್ರದ,ಔರಂಗಬಾದ್ ಜಿಲ್ಲೆಯ ವೈಜಪುರ್ ದಲ್ಲಿ ಬಂದಿಸಲಾಗಿದೆ ಎಂದು ಪೋಲಿಸ್ ಮೂಲಗಳಿಂದ ತಿಳಿದುಬಂದಿದೆ.