ಕೋಲಾರ:ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ನಾಮಪತ್ರ ಸಲ್ಲಿಸುವ ವೇಳೆಯೂ ಬಣ ರಾಜಕೀಯ ಮುಂದುವರೆದಿದ್ದು ಇದರಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ಎರಡು ಬಾರಿ ನಾಮ ಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಮೊದಲ ಸಲ ನಾಮ ಪತ್ರ ಸಲ್ಲಿಸಿಸುವ ಸಂದರ್ಭದಲ್ಲಿ ಸಚಿವರಾದ ಬೈರತಿ ಸುರೇಶ್,ಡಾ.ಎಂ.ಸಿ.ಸುಧಾಕರ್, ವಿಧಾನಪರಿಷತ್ ಸದಸ್ಯ ನಸೀರ್ ಅಹ್ಮದ್,ಶಾಸಕ ನಾರಯಣಸ್ವಾಮಿ ಇದ್ದರು.
ಎರಡನೆ ಬಾರಿಗೆ ನಾಮ ಪತ್ರ ಸಲ್ಲಿಸುವಾಗ ಸಚಿವ ಕೆ.ಎಚ್.ಮುನಿಯಪ್ಪ,ಶಾಸಕಿ ರೂಪಕಲಾ ಎಂ.ಶಶಿಧರ್,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಲಕ್ಷ್ಮಿನಾರಾಯಣ,ಶಿಡ್ಲಘಟ್ಟ ರಾಜೀವ್ ಗೌಡ ಇದ್ದರು.
ನಾಮ ಪತ್ರ ಸಲ್ಲಿಕೆ ನಂತರ ಒಂದಾದ ಬಣ
ಕೋಲಾರ ಮೀಸಲು ಕ್ಷೇತ್ರದಲ್ಲಿ ಹೊಸ ಮುಖ ಕಾಂಗ್ರೆಸ್ ಅಭ್ಯರ್ಥಿ ಗೌತಮ್ ಎರಡು ಬಾರಿ ಪ್ರತ್ಯಕವಾಗಿ ಬಣಗಳ ಜೊತೆ ಹೋಗಿ ನಾಮ ಪತ್ರ ಸಲ್ಲಿಸಿದ ನಂತರ ಹೊರಗೆ ಬಂದಾಗ ಸಚಿವ ಬೈರತಿ ಸುರೇಷ್ ನೇತೃತ್ವದಲ್ಲಿ ಎರಡು ಬಣಗಳ ಶಾಸಕರು ಮಂತ್ರಿಗಳು ಮುಖಂಡರು ಜೊತೆಗೂಡಿ ಸಾರ್ವಜನಿಕರಿಗೆ ಫೋಟೋ ಪೊಸ್ ಕೊಟ್ಟು ದರ್ಶನ ನೀಡಿದಲ್ಲದೆ ಎಲ್ಲರೂ ವಿಜಯದ ಸಂಕೇತ ಎಂಬಂತೆ ಎರಡು ಬೆರಳು ತೋರಿಸಿದರು.
ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ಸಿಗದಿದ್ದರಿಂದ ಅಸಮಾಧಾನಗೊಂಡಿದ್ದ ಸಚಿವ ಕೆ.ಎಚ್.ಮುನಿಯಪ್ಪ ಅಭ್ಯರ್ಥಿ ಘೋಷಣೆಯಾದ ನಂತರ ಇದೆ ಮೊದಲ ಬಾರಿಗೆ ಕೋಲಾರಕ್ಕೆ ಆಗಮಿಸಿರುವುದು.
ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸುವ ಮೊದಲು ಕೋಲಾರದ ಶಕ್ತಿ ದೇವತೆ ಕೋಲಾರಮ್ಮ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ನಂತರ ಮೆಕ್ಕೆ ಸರ್ಕಲ್ ನಲ್ಲಿ ಇರುವ ಮೆಥೋಡಿಸ್ಟ್ ಚರ್ಚ್ಗೆ ಭೇಟಿ ನೀಡಿ ಮುಖಂಡರ ಆಶೀರ್ವಾದ ಪಡೆದು ಬಳಿಕ ಕ್ಲಾಕ್ ಟವರ್ ನಲ್ಲಿನ ದರ್ಗಾದಲ್ಲಿ ಪ್ರಾರ್ಥನೆ ಮಾಡಿದರು.
ನಾಲ್ಕು ಬಾರಿ ನಾಮ ಪತ್ರ ಸಲ್ಲಿಸುವ ಅವಕಾಶ ಇದ್ದು ನಮ್ಮ ಅಭ್ಯರ್ಥಿ ಎರಡು ಬಾರಿ ನಾಮ ಪತ್ರ ಸಲ್ಲಿಸಿದ್ದಾರೆ ನಮ್ಮಲ್ಲಿ ಯಾವುದೆ ಬಣ ಅಥಾವ ಗುಂಪುಗಾರಿಗೆ ರಾಜಕೀಯ ಇಲ್ಲ ಸಚಿವ ಮುನಿಯಪ್ಪನವರು ಕೋಲಾರದ ಪ್ರಚಾರಕ್ಕೂ ಬರುತ್ತಾರೆ ಎಂದು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿಸುರೇಷ್ ಹೇಳಿದರು.