ಕೋಲಾರ ಲೋಕಸಭಾ ಟಿಕೆಟ್ ವಿಚಾರ ಕಾಂಗ್ರೆಸ್ನಲ್ಲಿ ಬಿಗ್ ಹೈಡ್ರಾಮಾ
ರಾಜೀನಾಮೆಗೆ ಮುಂದಾದ ನಾಲ್ವರು ಶಾಸಕರು, ಇಬ್ಬರು ಪರಿಷತ್ ಸದಸ್ಯರು
ಶಾಸಕರ ರಾಜೀನಾಮೆ ತಡೆದ ಕೋಲಾರ ಉಸ್ತುವಾರಿ ಸಚಿವ ಭೈರತಿ
ಕೋಲಾರ:ಕೋಲಾರ ಕಾಂಗ್ರೆಸ್ ಟಿಕೆಟ್ ಹಂಚಿಕೆ ಕಾಂಗ್ರೆಸ್ ಹೈಕಮಾಂಡ್ ಗೆ ಬಗೆ ಹರಿಯದ ಕಗ್ಗಾಂಟಾಗಿ ಕಾಡುತ್ತಿದೆ ಇವತ್ತು ನಡೆದಂತ ಬೆಳವಣಿಗೆಯಲ್ಲಿ ಸಚಿವ ಕೆ.ಹೆಚ್.ಮುನಿಯಪ್ಪ ಕುಟುಂಬಕ್ಕೆ ಕಾಂಗ್ರೆಸ್ ಟಿಕೆಟ್ ನೀಡುವುದಕ್ಕೆ ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಶಾಸಕರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಕೋಲಾರ ಭಾಗದ ಕಾಂಗ್ರೆಸ್ ಶಾಸಕರು, ಸಚಿವರು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಲು ಮುಂದಾಗಿದ್ದು ಕೋಲಾರ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರ ಕಾಂಗ್ರೆಸ್ ಪಕ್ಷದಲ್ಲಿ ಕೋಲಾಹಲವನ್ನೆ ಸೃಷ್ಟಿಸಿದೆ, ಪಕ್ಷದೊಳಗೆ ಭುಗಿಲೆದ್ದಿರುವ ಅಸಮಾಧಾನ ಹೋಗಲಾಡಿಸಲು ಸ್ವತಃ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅಖಾಡಕ್ಕಿಳಿದ್ದಾರೆ.
ಇವತ್ತು ರಾತ್ರಿ ಹೈವೋಲ್ಟೇಜ್ ಮೀಟಿಂಗ್
ಟಿಕೆಟ್ ವಿಚಾರಕ್ಕೆ ಎರಡು ಬಣಗಳ ನಡುವಿನ ತಾರಕ್ಕೇರಿರುವ ಅಸಮಾಧಾನ ಬಗೆ ಹರೆಸಲು ಸಿಎಂ ಸಿದ್ದರಾಮಯ್ಯ-ಡಿಕೆ ಶಿವಕುಮಾರ್ ಮಾರ್ಚ್ 27 ರಂದು ರಾತ್ರಿ ಹೈ ವೋಲ್ಟೇಜ್ ಮೀಟಿಂಗ್ ಕರೆದು ಬಣಗಳ ನಡುವಿನ ಅಸಮಧಾನಕ್ಕೆ ಅಂತ್ಯ ಹಾಡಬೇಕೆಂದು ಮುಂದಾಗಿ ರಾತ್ರಿ 10 ಗಂಟೆಗೆ ಸಿಎಂ ನಿವಾಸದಲ್ಲಿ ಕೋಲಾರ ಭಾಗದ ಕಾಂಗ್ರೆಸ್ ಮುಖಂಡರ ಸಭೆ ಕರೆದಿದ್ದಾರಂತೆ ಸಿಎಂ ಮತ್ತು ಡಿಸಿಎಂ ಕೂತು ನಡೆಸುವ ಸಂಧಾನ ಸಭೆಯಾಗಿದ್ದು ಇವತ್ತಿನ ಅಂತಿಮ ಸಭೆಯಲ್ಲಿ ಟಿಕೆಟ್ ವಿವಾದ ಬಗೆ ಹರೆಯಬಹುದು ಎಂಬ ಲೆಕ್ಕಚಾರದಲ್ಲಿ ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರು ಆಶಾ ಭಾವನೆ ವ್ಯಕ್ತಪಡಿಸುತ್ತಿದ್ದಾರೆ
ಕೋಲಾರ ಟಿಕೆಟ್ ಹಂಚಿಕೆ ವಿರುದ್ಧ ರಮೇಶ್ ಕುಮಾರ್ ಬಣ ಆಕ್ರೋಶ
ಕೋಲಾರ ಟಿಕೆಟ್ ಹಂಚಿಕೆ ಸಚಿವ ಕೆಎಚ್ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ನೀಡಲು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಣ ತೀವ್ರ ವಿರೋಧ ವ್ಯಕ್ತಪಡಿಸುತ್ತಿದೆ ಇದನ್ನು ನೇರವಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ತಿಳಿಸಿದ್ದಾರೆ ಇದಾದ ಬೆನ್ನಲ್ಲೇ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್ ನೀಡಲು ಖರ್ಗೆ ಅವರನ್ನು ಒಪ್ಪಿಸಿರುವ ಸಚಿವ ಕೆಎಚ್ ಮುನಿಯಪ್ಪ ವಿರುದ್ದ ರಮೇಶ್ ಕುಮಾರ್ ಬಣ ರೊಚ್ಚಿಗೆದ್ದಿದೆ ಎನ್ನುವ ಮಾತು ಕೇಳಿಬರುತ್ತಿದೆ. ಇದಕ್ಕೆ ಪೂರಕ ಎನ್ನುವಂತೆ
ಚಿಂತಾಮಣಿ ಶಾಸಕ ಹಾಗು ಸಚಿವ ಡಾ.ಸುಧಾಕರ್, ಕೋಲಾರದ ಶಾಸಕ ಕೊತ್ತೂರು ಮಂಜುನಾಥ್,ವಿಧಾನಪರಿಷತ್ ಸದಸ್ಯರಾದ ನಸೀರ್ ಆಹ್ಮದ್,ಅನಿಲ್ ಕುಮಾರ್ ಮುಂದಾಗಿದ್ದಾರೆ ಮುಂದಾಗಿ ಪರಿಷತ್ ಸದಸ್ಯರು ಸಭಾಪತಿ ಹಾಗು ಶಾಸಕರು ಸ್ಪಿಕರ್ ಸಂಪರ್ಕದಲ್ಲಿದ್ದಾರಂತೆ.
ಮೈಸೂರಿನಿಂದಲೆ ಪೋನ್ ಮಾಡಿದ ಸಿದ್ದರಾಮಯ್ಯ
ಸಿಎಂ ನಿವಾಸದಲ್ಲಿ ಕೋಲಾರ ಭಾಗದ ಕಾಂಗ್ರೆಸ್ ಮುಖಂಡರ ಸಭೆ ನಡೆಸುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮೈಸೂರಿನಿಂದಲೆ ಸೂಚನೆ ನೀಡಿದ್ದಾರೆ ಎನ್ನಲಾಗಿದ್ದು ಸಭೆಯಲ್ಲಿ ಭಾಗವಹಿಸಲು ಮೈಸೂರಿಗೆ ಹೋಗಿದ್ದ ಸಿದ್ದರಾಮಯ್ಯ ಶಾಸಕರ ರಾಜಿನಾಮೆ ವಿಷಯ ತಿಳಿಯುತ್ತಲೆ ಸಭೆಯಲ್ಲಿ ಕೂತಿದ್ದ ಸಿಎಂ ತಕ್ಷಣ ತಮ್ಮ ಆಪ್ತ ಕೋಲಾರ ಉಸ್ತುವಾರಿ ಸಚಿವ ಭೈರತಿಸುರೇಶ್ ಅವರಿಗೆ ಫೋನ್ ಮಾಡಿ ರಾಜಿನಾಮೆ ವಿಚಾರದಲ್ಲಿ ಕೋಲಾರ ಶಾಸಕರನ್ನು ಸಂಪರ್ಕಿಸಿ ತಡೆಯುವಂತೆ ಸೂಚಿಸಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ