ಶ್ರೀನಿವಾಸಪುರ:-ಸಾರಿಗೆ ಮುಷ್ಕರದಲ್ಲಿ ಭಾಗಿಯಾಗದೇ ಕರ್ತವ್ಯಕ್ಕೆ ಹಾಜರಾಗಿದ್ದ ಕೆ.ಎಸ್.ಆರ್.ಟಿ.ಸಿ. ಚಾಲಕನೊಬ್ಬನ ಮೇಲೆ ಮುಷ್ಕರ ಬೆಂಬಲಿತ ಚಾಲಕ ಆಕ್ರೋಷಗೊಂಡು ಕಾರ್ಯನಿರತ ಚಾಲಕನ ಮೇಲೆ ಪೆಟ್ರೋಲ್ ಎರಚಿ ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿರುತ್ತದೆ.
ಶ್ರೀನಿವಾಸಪುರ ಘಟಕದ ಚಾಲಕ ಸತ್ಯಪ್ಪ ಮುಷ್ಕ್ರರ ತೊರೆದು ಬುಧವಾರ ಸಂಜೆ ಕರ್ತವ್ಯಕ್ಕೆ ಹಾಜರಾಗಿರುತ್ತಾನೆ ನಿರ್ವಾಹಕ ಮುದುವಾಡಿಮಂಜು ಜೋತೆಗೂಡಿ ಬಸ್ಸು ಚಲಾಯಿಸಿಕೊಂಡು ಕೋಲಾರಕ್ಕೆ ಹೋಗುವಾಗ ವಳಗೇರನಹಳ್ಳಿ ಗೇಟ್ ಬಳಿ ಶ್ರೀನಿವಾಸಪುರ ಘಟಕದ ಚಾಲಕ ಮತ್ತೋಬ್ಬ ಚಾಲಕ ಶ್ರೀನಿವಾಸಪ್ಪ ಬಸ್ಸನ್ನು ನಿಲ್ಲಿಸಿ,ಮುಷ್ಕರದ ಸಂದರ್ಭದಲ್ಲಿ ಡ್ಯೂಟಿ ಮಾಡುತ್ತಿರುವೇಯ ಎಂದು ಪ್ರಶ್ನಿಸಿ ಕರ್ತವ್ಯ ನಿರತ ಚಾಲಕನ ಮೇಲೆ ಹಲ್ಲೆಗೆ ಮುಂದಾಗಿರುತ್ತಾನೆ ನಂತರ ತಂದಿದ್ದ ಪೆಟ್ರೊಲ್ ಅನ್ನು ಕರ್ತವ್ಯ ನಿರತ ಚಾಲಕನ ಮೇಲೆ ಎರಚಿ ಬೆದರಿಕೆ ಹಾಕಿದ್ದಾರೆ ಈ ಸಂದರ್ಭದಲ್ಲಿ ಸ್ಥಳೀಯ ಜನತೆ ಇಬ್ಬರನ್ನು ತಡೆದು ಬುದ್ದಿ ಹೇಳಿ ಕಳಿಸಿದ್ದು ನಂತರ ಸತ್ಯಪ್ಪ ಬಸ್ಸನ್ನು ಕೋಲಾರಕ್ಕೆ ತಗೆದುಕೊಂಡು ವಾಪಸ್ಸು ಬರುವಾಗ ಪೋಲಿಸ್ ಬಂದೋ ಬಸ್ತಿನಲ್ಲಿ ಘಟಕಕ್ಕೆ ತಂದಿರುತ್ತಾರೆ.
ಇಷ್ಟೆಲ್ಲಾ ರಾದ್ದಾಂತ ನಡೆದಿದೆಯಾದರೂ ಶ್ರೀನಿವಾಸಪುರ ಘಟಕದ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ಪ್ರಶಾಂತ್ ಏನೂ ನಡದೆ ಇಲ್ಲದಂತೆ ಇದ್ದಾರೆ.
ಅಂದು ಭೇಟಿಯಾಗಿದ್ದ ಪತ್ರಕರ್ತರ ಬಳಿ ಮಾತನಾಡಿರುವ ಅವರು ಸ್ಥಳೀಯ ನೌಕರಾರು ಕರ್ತವ್ಯಕ್ಕೆ ಹಾಜರಾಗಲಿಲ್ಲ ಎಂದು ಹೇಳಿಕೆ ಬೇರೆ ನೀಡಿರುತ್ತಾರೆ.ಇದರ ನಡುವೆ ಕರ್ತವ್ಯಕ್ಕೆ ಹಾಜರಾದ ಚಾಲಕ ಸತ್ಯಪ್ಪ ವಿರುದ್ದ ಕೆಲ ನೌಕರರು ಸಾಮಾಜಿಕ ಜಾಲತಾಣದಲ್ಲಿ ಚಾಲಕ ಸತ್ಯಪ್ಪ ಮೃತಪಟ್ಟಿರುವುದಾಗಿ ಅವರಿಗೆ ಶ್ರದ್ದಾಂಜಲಿ ಅರ್ಪಿಸೋಣ ಎಂದು ಸುದ್ದಿಯೊಂದನ್ನು ಹರಿದು ಬಿಟ್ಟಿದ್ದಾರೆ ಮೃತ ಸುದ್ದಿ ವೈರಲ್ ಆಗಿದ್ದು ಹಲ್ಲೆಗೊಳಗಾದ ಚಾಲಕ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದೆಲ್ಲ ಸುದ್ದಿ ಹರಡಿದೆ ಇದಾದ ನಂತರ ಸಾರಿಗೆ ಸಂಸ್ಥೆ ಅಧಿಕಾರಿಗಳು ಎಚ್ಚೆತ್ತುಕೊಂಡು ಗುರುವಾರ ತಡ ಸಂಜೆ ಸಾರಿಗೆ ಸಂಸ್ಥೆ ಕೋಲಾರ ವಿಭಾಗದ ಸಂಯೋಜಕರ ಸೂಚನೆಯಂತೆ ಹಲ್ಲೆ ಮಾಡಿದ ಚಾಲಕ ಶ್ರೀನಿವಾಸ್ ವಿರುದ್ದ ಶ್ರೀನಿವಾಸಪುರದ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ನಂತರ ಚಾಲಕ ಸತ್ಯಪ್ಪ ಮೃತಪಟ್ಟಿರುವುದಾಗಿ ಸುದ್ದಿ ಹರಡಿಸಿರುವುದ ವಿರುದ್ಧ ದೂರು ದಾಖಲಾಸಿದ ಸಾರಿಗೆ ಸಂಸ್ಥೆ ಅಧಿಕಾರಿಗಳು ಶ್ರೀನಿವಾಸ್ ವಿರುದ್ಧ ಕ್ರಮ ಕೈಗೊಂಡು ಕೆ.ಎಸ್.ಆರ್.ಟಿ.ಸಿ. ನಿಗಮದಿಂದ ಅಮಾನತು ಮಾಡಿ ಆದೇಶ ಹೊರಡಿಸಿರುವುದಾಗಿ ಹೇಳಲಾಗಿದೆ.
ಹಲ್ಲೆ ಮಾಡಿರುವ ಚಾಲಕನ ವಿರುದ್ದ ದೂರು ದಾಖಲಾಗಿದೆ ಎಂದು ಶ್ರೀನಿವಾಸಪುರ ಠಾಣಾಧಿಕಾರಿ ರವಿಕುಮಾರ್ ಸ್ಪಷ್ಟಪಡಿಸಿರುತ್ತಾರೆ.