ಸುಮಾರು 2 ಕಿ.ಮೀ.ದೂರ ಶವ ಹೊತ್ತು ನಡೆದ ಮಹಿಳಾ ಪೋಲಿಸ್ ಅಧಿಕಾರಿ
ನ್ಯೂಜ್ ಡೆಸ್ಕ್:-ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಅನಾಥ ಶವವನ್ನು ಸ್ಟ್ರೆಚರ್ ಮೇಲಿಟ್ಟುಕೊಂಡು ಸುಮಾರು 2 ಕಿ.ಮೀ. ದೂರ ನಡೆದುಕೊಂಡು ಹೋಗಿ ಅಂತ್ಯ ಸಂಸ್ಕಾರ ಮಾಡಿರುವ ಘಟನೆ ಆಂಧ್ರಪ್ರದೇಶದ,ಉತ್ತರಾಂಧ್ರ ಪ್ರದೇಶವಾದ ಕರಾವಳಿ ಪ್ರಾಂತ್ಯದ ಶ್ರೀಕಾಕುಳುಂ ಜಿಲ್ಲೆಯ ಪಲಾಸ-ಕಾಶಿಬುಗ್ಗ ಪುರಸಭೆ ವ್ಯಾಪ್ತಿಯ ಅಡವಿ ಕೊತೂರ್ ಬಳಿ ನಡೆದಿರುತ್ತದೆ. ಈ ಪ್ರದೇಶದ ಕೃಷಿ ಭೂಮಿಯಲ್ಲಿ ಅನಾಥ ಶವೊಂದು ಇದೆ ಎಂಬ ಮಾಹಿತಿಯೊಂದಿಗೆ ಸ್ಥಳಕ್ಕೆ ಹೋದ ಕಾಶಿಬುಗ್ಗ ಠಾಣಾಧಿಕಾರಿ ಎಸ್.ಐ ಕೊತ್ತಶಿರಿಷ,ಎರಡು ದಿನಗಳಿಂದ ಹೊಲದಲ್ಲೇ ಬಿದ್ದಿದ್ದ ವ್ಯಕ್ತಿಯ ಮೃತದೇಹವನ್ನು ಸ್ಥಳಿಯವಾಗಿ ಯಾರೊಬ್ಬರೂ ಶವ ಕೂಡ ಸಾಗಿಸುವ ಕೆಲಸ ಮಾಡಿರಲಿಲ್ಲ. ಶವದ ವಿಚಾರದಲ್ಲಿ ಸ್ಥಳಿಯರು ಪೋಲಿಸ್ ಅಧಿಕಾರಿಗೂ ಸಹಕಾರ ನೀಡದ ಹಿನ್ನಲೆಯಲ್ಲಿ ಎಸ್.ಐ ಕೊತ್ತಶಿರಿಷ ವ್ಯಕ್ತಿಯೊಬ್ಬರ ಸಹಾಯ ಪಡೆದು ಅನಾಥ ಶವವನ್ನು ಸ್ಟೆಚ್ಚರ್ ಮೇಲೆ ಇಟ್ಟು ಅದನ್ನು ಸ್ವತಃ ತಮ್ಮ ಬುಜದ ಮೇಲೆ ಇಟ್ಟುಕೊಂಡು ತಾವೇ ಹೊತ್ತೊಯ್ದಿದ್ದಾರೆ. ಬಳಿಕ ಅಂತ್ಯಸಂಸ್ಕಾರ ಮಾಡುವ ಜಾಗಕ್ಕೆ ಹೊಯ್ದು ಅಲ್ಲಿ ಸ್ಥಳಿಯ ಸಾಯಿ ಕೃಷ್ಣ ಚಾರಟಬಲ್ ಟ್ರಸ್ಟ್ ಸಹಕಾರದಿಂದ ತಾವೇ ಮುಂದೆ ನಿಂತು ಅಂತ್ಯಕ್ರಿಯೆ ಮಾಡಿರುತ್ತಾರೆ.
ಒಬ್ಬ ಮಹಿಳಾ ಎಸ್ಐ ಮಾಡಿರುವ ಈ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ. ಜೊತೆಗೆ ಆಂಧ್ರಪ್ರದೇಶದ ಡಿಜಿಪಿ ಗೌತಮ್ ಸಾವಂಗ್ ಅವರು ಮಹಿಳಾ ಎಸ್ಐ ಮಾಡಿರುವ ಈ ಮಾನವೀಯತೆಯ ಕೆಲಸವನ್ನು ಬಹಳ ಮೆಚ್ಚಿಕೊಂಡಿದ್ದಾರೆ.
ಈ ಕುರಿತು ಆಂಧ್ರ ಪ್ರದೇಶ ಪೊಲೀಸ್ ಇಲಾಖೆ ಟ್ವೀಟ್ ಮಾಡಿ ಇದೊಂದು ಮಾನವೀಯತೆಯ ಕಾರ್ಯ ಎಂದು ಶ್ಲಾಘಿಸಿದ್ದಾರೆ.
ವರದಿ:ಚ.ಶ್ರೀನಿವಾಸಮೂರ್ತಿ