ಕೋಲಾರ: ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಶುಕ್ರವಾರ ರಾತ್ರಿ ಆಯೋಜಿಸಿದ್ದ ಶಿವ ಲಕ್ಷ ದೀಪೋತ್ಸವ ಮತ್ತು ತೆಪ್ಪೋತ್ಸವಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೋಂಡು ಪುನೀತರಾದರು. ಶ್ರೀವಿಶಾಲಾಕ್ಷಿ ಸಮೇತ ಶ್ರೀ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ನಡೆದಂತ ಶಿವ ಲಕ್ಷ ದೀಪೋತ್ಸವವನ್ನು ಹಾಗು ಒಂದು ಸಾವಿರಕ್ಕೂ ಹೆಚ್ಚು ಕೆಜಿ ಎಣ್ಣೆಯನ್ನು ಭಕ್ತರು ಹಣತೆಗಳಿಗೆ ಸುರಿದು ದೀಪ ಬೆಳಗಿಸಿ ಬೆಟ್ಟದ ದಾರಿಯುದ್ದಕ್ಕೂ ಬೆಳಕಿನ ಹಣತೆಗಳ ಸಾಲು ಚುಮುಚುಮು ಚಳಿಯಲ್ಲಿ ಭಕ್ತರ ಮನ ಸೇಳೆದು ಮುದ ನೀಡಿತು.
ಬಸವನ ಬಾಯಿಂದ ಸದಾ ನೀರು ಹರಿಯುವ ಅಂತರಂಗೆಯ ಕಲ್ಯಾಣಿಯಲ್ಲಿ ತೆಪ್ಪೋತ್ಸವವನ್ನು ವೀಕ್ಷಿಸಿದ ಸಹಸ್ರಾರು ಭಕ್ತರು ಭಕ್ತಪರವಶರಾದರು ಇದೆ ಸಂದರ್ಭದಲ್ಲಿ ಬೆಟ್ಟದ ತಪ್ಪಲಲ್ಲಿನ ಜಲಕಂಠೇಶ್ವನಿಗೆ ಪಂಚಾಮೃತ ಅಭಿಷೇಕ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು.
ಶಿವ ಲಕ್ಷ ದೀಪೋತ್ಸವ ಹಾಗು ತೆಪ್ಪೋತ್ಸವ ಸಂದರ್ಬದಲ್ಲಿ ಏರ್ಪಡಿಸಿದ್ದ ನಾದಸ್ವರ ಮತ್ತು ಸ್ಯಾಕ್ಯೋಫೋನ್ ವಾದನದ ಗಮನ ಸೆಳೆಯಿತು. ಭಕ್ತರ ಭಜನೆ,ಹಾಡುಗಾರಿಕೆಯೂ ಜನಮನ ಸೆಳೆಯುವಲ್ಲಿ ಯಶಸ್ವಿಯಾಯಿತು.
ಅರ್ಚಕರಾದ ಮಂಜುನಾಥ ದೀಕ್ಷಿತ್, ಚಂದ್ರಶೇಖರ್ ದೀಕ್ಷಿತ್, ಕಾಶಿವಿಶ್ವೇಶ್ವರ ದೀಕ್ಷಿತ್ ಪೂಜಾ ಕಾರ್ಯಕ್ರಮ ನಿರ್ವಹಿಸಿದರು.
ಕಿಲಾರಿಪೇಟೆ ಶ್ರೀನಿವಾಸ್, ರಾಮಕೃಷ್ಣ, ಮಣಿ, ಮುನಿವೆಂಕಟ, ಕೆ.ವಿ.ಮಂಜು, ಆರ್.ರಮೇಶ್, ಡೆಕೋರೇಷನ್ ಶಂಕರ್, ಪೋಟೋ ಸ್ಟುಡಿಯೋ ಮಂಜು, ರವಿಪ್ರಿಂರ್ಸ್ ಮಂಜು,ಪಿ.ವೆಂಕಟೇಶ್, ನಾಗೇಶ್,ಗಣೇಶ್, ಚಲಪತಿ, ಬಜರಂಗದಳದ ಬಾಲಾಜಿ, ಅಪ್ಪಿ, ಬಾಬು, ಕಾಂಗ್ರೆಸ್ ಎಸ್ಸಿಘಟಕದ ಅಧ್ಯಕ್ಷ ಕೆ.ಜಯದೇವ್ ಮತ್ತಿತರರು ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೋಂಡಿದ್ದರು.