- ನಾಡುಕಟ್ಟಿ ಕೆರೆಕಟ್ಟಿ
- ಜನಚಿಂತಕರಾಗಿ ಆಡಳಿತ
- ನಡೆಸಿದ ಕೇಂಪೇಗೌಡರು
ಶ್ರೀನಿವಾಸಪುರ :ಜನರ ಬದುಕು ಹಸನಾಗಬೇಕು ಜನತೆ ಸುಭಿಕ್ಷವಾಗಿರಬೇಕು ಎಂಬ ಸಹೃದಯದಿಂದ ನಾಡಪ್ರಭು ಕೇಂಪೇಗೌಡರು ಜನರ ಹಿತಚಿಂತಕರಾಗಿ ಆಡಳಿತ ನಡೆಸಿದರು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.
ಅವರು ತಹಶೀಲ್ದಾರ್ ಕಚೇರಿಯ ಆವರಣದಲ್ಲಿ ತಾಲೂಕು ಆಡಳಿಅತ ವತಿಯಿಂದ ಆಯೋಜಿಸಲಾಗಿದ್ದ ಕೆಂಪೇಗೌಡರ 515 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿ ಮಾತನಾಡಿದರು.
ಇವತ್ತು ಇಡಿ ವಿಶ್ವ ಬೆಂಗಳೂರಿನತ್ತ ನೋಡುತ್ತಿದೆ ಕ್ಲೀನ್ ಆಂಡ್ ಗ್ರೀನ್ ಸೀಟಿಯಾಗಿ ಖ್ಯಾತಿ ಪಡೆದಿದೆ ಇದಕ್ಕೆ ಕಾರಣೀಭೂತರು ಕೇಂಪೇಗೌಡರ ಸಾದನೆ ಅವರ ಅಡಳಿತದಲ್ಲಿ ನಗರ ಕಟ್ಟುವ ಜೊತೆಗೆ ನಗರದ ಸುತ್ತಲೂ ಕೆರೆಗಳನ್ನು ನಿರ್ಮಿಸಿದ ಅವರ ಕಾರ್ಯ ಶ್ಲಾಘನೀಯ ದೂರದೃಷ್ಟಿ ವ್ಯಕ್ತಿತ್ವದ ಕೆಂಪೇಗೌಡರು ಒಂದು ಜಾತಿಗೆ ಸಿಮೀತವಲ್ಲ ಅವರ ಆಡಳಿತ ಶೈಲಿ ವಿಶ್ವವ್ಯಾಪಿ ಎಂದರು.
ಆಡಳಿತದಲ್ಲಿ ಅಭಿವೃದ್ಧಿಗೆ ಒತ್ತು
ಕ್ಷೇತ್ರದ ಜನತೆಯ ಋಣ ತೀರಿಸುವ ಜವಬ್ದಾರಿ ಹೊತ್ತಿರುವ ನಾನು ಹಗಲಿರಳು ಸೇವೆಗೆ ಸಿದ್ದನಿದ್ದೇನೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವ ಸಲುವಾಗಿ ಮೊದಲ ಪ್ರಯತ್ನವಾಗಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಸುವ ಉದ್ದೇಶವನ್ನು ಹೊಂದಿದ್ದು ಇದಕ್ಕೆ ಮುಳಬಾಗಿಲು ರಸ್ತೆಯ ಯದರೂರು ಭಾಗದಲ್ಲಿ ಹಾಗು ಮದನಪಲ್ಲಿ ರಸ್ತೆಯ ರಾಯಲ್ಪಾಡು ಹೋಬಳಿಯಲ್ಲಿ ಅಂದಾಜು ನಾಲ್ಕೆದು ಸಾವಿರ ಎಕರೆ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಮಾತುಕತೆ ನಡೆಸುತ್ತಿರುವುದಾಗಿ,ಎಚ್.ಡಿ.ಕುಮಾರಸ್ವಾಮಿ ರವರು ಕೇಂದ್ರ ಬೃಹತ್ ಕೈಗಾರಿಕ ಸಚಿವರಾಗಿರುವುದು ನನ್ನ ಪ್ರಯತ್ನಕ್ಕೆ ಪೂರಕ ವಾತವರಣ ನಿರ್ಮಾಣವಾಗಿದ್ದು ಅವರ ಸಹಕಾರವನ್ನು ಪಡೆಯುವುದಾಗಿ ಹೇಳಿದರು.
ಸಂಸದ ಮಲ್ಲೇಶ್ಬಾಬು ಸಹಕಾರದೊಂದಿಗೆ ಕೋಲಾರ, ಶ್ರೀನಿವಾಸಪುರ ತಾಡಿಗೋಳ್ ಕ್ರಾಸ್ ಮದನಪಲ್ಲಿ, ಹಾಗು ಗೌನಿಪಲ್ಲಿ ಮೂಲಕ ಬಿ.ಕೊತ್ತಕೋಟಕ್ಕೆ ಹೋಗುವ ರಸ್ತೆಯನ್ನು ಅಭಿವೃದ್ಧಿ ಪಡಿಸಿವುದಾಗಿ ತಿಳಿಸಿದರು. ರಸ್ತೆ ಅಭಿವೃದ್ಧಿಯಾದರೆ ವ್ಯಾಪರ ವಹಿವಾಟು ಹೆಚ್ಚಾಗಲು ಸಾಧ್ಯ ವಾಗುತ್ತದೆ ಇದರಿಂದ ಕ್ಷೇತ್ರ ಜನತೆ ಆರ್ಥಿಕ ಪರಿಸ್ಥಿತಿಯು ಅಭವೃದ್ಧಿಯಾಗಲು ಸಾಧ್ಯವಾಗುತ್ತದೆ ಎಂದರು.
ತಹಶೀಲ್ದಾರ್ ಜಿ.ಎನ್.ಸುದೀಂದ್ರ ಮಾತನಾಡಿ ತಾಲೂಕಿನಲ್ಲಿ ಕೆರೆಗಳು ಅಭಿವೃದ್ಧಿಯಾಗಲು ಜನರ ಸಹಕಾರ ಅಗತ್ಯವಾಗಿದ್ದು ಕೆಂಪೇಗೌಡರ ಕನಸು ಕೆರೆಗಳು ಅವುಗಳನ್ನ ಉಳಿಸಬೇಕಾಗಿದ್ದು ಪ್ರಥಮ ಹಂತವಾಗಿ ಕೆರೆಗಳ ಒತ್ತುವರಿಯನ್ನ ನಿಲ್ಲಿಸಿ ಮುಂದಿನ ಪೀಳಿಗೆಗೆ ಕೆರೆಗಳನ್ನು ಉಳಿಸಿಕೊಡುವಂತೆ ಮನವಿ ಮಾಡಿದರು.
ತಹಶೀಲ್ದಾರ್ ಆವರಣದಲ್ಲಿನ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಇಒ ಎ.ಎನ್.ರವಿ, ಬಿಇಒ ಬಿ.ಸಿ.ಮುನಿಲಕ್ಷ್ಮಯ್ಯ,ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ,ಕೃಷಿ ಇಲಾಖೆ ಸಹಾಯಕ ನಿದೇರ್ಶಕ ಕೆ.ಸಿ.ಮಂಜುನಾಥ್, ರೇಷ್ಮ ಇಲಾಖೆ ಸಹಾಯಕ ನಿದೇರ್ಶಕ ಕೃಷ್ಣಪ್ಪ, ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ ಶಶಿಕಲಾ, ಉಪನೋಂದಣಿ ಅಧಿಕಾರಿ ರಾಮಕೃಷ್ಣಪ್ಪ, ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ.ವಿಶ್ವನಾಥ,ಸಿಡಿಪಿಒ ನವೀನ್, ಪಿಡಬ್ಲೂಡಿ ಎಇಇ ಎನ್.ನಾರಾಯಣಸ್ವಾಮಿ, ಜಿ.ಪಂ.ಮಾಜಿ ಅಧ್ಯಕ್ಷ ತೂಪಲ್ಲಿನಾರಾಯಣಸ್ವಾಮಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀನಿವಾಸಪ್ಪ,ಒಕ್ಕಲಿಗರ ಸಂಘದ ತಾಲೂಕು ಅಧ್ಯಕ್ಷ ಎನ್.ವಿ.ವೇಣುಗೋಪಾಲರೆಡ್ಡಿ, ಕಾರ್ಯದರ್ಶಿ ನಿವೃತ್ತ ಶಿಕ್ಷಕ ವೆಂಕಟರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್,ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್, ಮಾವು ಬೆಳಗಾರರ ಸಂಘದ ಜಿಲ್ಲಾಧ್ಯಕ್ಷ ನೀಲಟೂರು ಚಿನ್ನಪ್ಪರೆಡ್ಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ವೆಂಕಟರೆಡ್ಡಿ,ಪೂಲುಶಿವಾರೆಡ್ದಿ, ಬಿಜೆಪಿ ತಾಲೂಕು ಅಧ್ಯಕ್ಷ ರೋಣೂರು ಚಂದ್ರು, ಮುಖಂಡರಾದ ಎ.ವೆಂಕಟರೆಡ್ಡಿ, ಲಕ್ಷ್ಮಣರೆಡ್ಡಿ, ಬೈರೆಡ್ಡಿ, ಚಿರುವುನಹಳ್ಳಿ ಲಕ್ಷ್ಮಣಗೌಡ,ಭೈರವೇಶ್ವರ ವಿದ್ಯಾಸಂಸ್ಥೆ ವೆಂಕಟರೆಡ್ಡಿ, ತೂಪಲ್ಲಿಮಧು,ಬಸ್ ಶ್ರೀನಿವಾಸರೆಡ್ಡಿ,ಬೆಲ್ಲಂಶ್ರೀನಿವಾಸರೆಡ್ಡಿ,ಡಿಷ್ ನಾರಾಯಣಸ್ವಾಮಿ,ರಘುನಾಥರೆಡ್ಡಿ ಮುಂತಾದವರು ಇದ್ದರು.