ಕೋಲಾರ: ಆದಾಯಕ್ಕಿಂತ ಅಧಿಕ ಆಸ್ತಿ ಗಳಿಕೆ ಆರೋಪ ಹಿನ್ನೆಲೆಯಲ್ಲಿ ತುಮಕೂರಿನಲ್ಲಿ ಲ್ಯಾಂಡ್ ಆರ್ಮಿ ಇಲಾಖೆಯಲ್ಲಿ AE ಆಗಿ ಕಾರ್ಯನಿರ್ವಹಿಸುತ್ತಿರುವ ಕೋದಂಡರಾಮಯ್ಯ ಅವರ ನಿವಾಸದ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ. ಕೋದಂಡರಾಮಯ್ಯ ಅವರು ವಾಸಿಸುವ ಕೋಲಾರ ನಗರದ ಕುವೆಂಪು ನಗರದಲ್ಲಿರುವ ಪೂಜ ನಿಲಯದ ಮನೆ ಮೇಲೆ ಹಾಗು ಅವರ ಸ್ವಗ್ರಾಮವಾದ ಶ್ರೀನಿವಾಸಪುರ ತಾಲೂಕು ಯಲ್ದೂರು ಹೋಬಳಿಯ ಲಕ್ಷ್ಮಿಸಾಗರದ ಮನೆ, ಅವರು ಕಾರ್ಯನಿರ್ವಹಿಸುತ್ತಿರುವ ತುಮಕೂರಿನ ಕಚೇರಿ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿರುತ್ತಾರೆ.
ಲೋಕಾಯುಕ್ತ SP ಉಮೇಶ್ ನೇತೃತ್ವದಲ್ಲಿ ನಡೆದಂತ ದಾಳಿಯಲ್ಲಿ ಲೋಕಾಯುಕ್ತದ 10ಕ್ಕೂ ಹೆಚ್ಚು ಜನ ಅಧಿಕಾರಿಗಳ ತಂಡದಿಂದ ದಾಳಿವೇಳೆ ಪರಿಶೀಲನೆ ನಡೆಸಿದ್ದಾರೆ
ತುಮಕೂರಿನ ಲ್ಯಾಂಡ್ ಆರ್ಮಿ ಯಲ್ಲಿ AE ಆಗಿರುವ ಕೋದಂಡರಾಮಯ್ಯ ಅವರು ಶ್ರೀನಿವಾಸಪುರ ತಾಲೂಕು ಯಲ್ದೂರು ಹೋಬಳಿ ಲಕ್ಷ್ಮೀಸಾಗರದವರಾಗಿದ್ದು ಲ್ಯಾಂಡ್ ಆರ್ಮಿ ಇಲಾಖೆ ಕೋಲಾರದಲ್ಲಿ ಕಾರ್ಯನಿರ್ವಹಿಸಿದ್ದಾರೆ ಈಗ ತುಮಕೂರು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
