ನ್ಯೂಜ್ ಡೆಸ್ಕ್: ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ನ ಟ್ಯಾಂಕ್ ಮೇಲೆ ಪ್ರೇಮಿಯನ್ನು ಕೂರಿಸಿಕೊಂಡು ಪೋಲಿ ರೈಡ್ ಮಾಡಿದ್ದ LOVER BOY ಅನ್ನು ಬೆಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬೆಂಗಳೂರು-ಹೊಸೂರು ರಸ್ತೆಯ ಸೋಮಪುರದ ಕ್ರಿಸ್ಟಾಲ್ ಅಪಾರ್ಟ್ ಮೆಂಟ್ ತಿರುವಿನಲ್ಲಿ ರಾಯಲ್ ಎನ್ಫೀಲ್ಡ್ ಬುಲೆಟ್ ಬೈಕ್ನಲ್ಲಿ ಪ್ರೇಮಿಗಳು ಹಿಂದುಮುಂದಾಗಿ ಕುಳಿತು ಅಸಭ್ಯಕರವಾಗಿ ಜನನಿಬಿಡ ರಸ್ತೆಯಲ್ಲಿ ಪೋಲಿ ರೈಡ್ ಮಾಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು,ತಮಿಳನಾಡು ನೊಂದಣಿಯ ಬುಲೆಟ್ ಬೈಕ್ ಸಂಖ್ಯೆ ಸಾರ್ವಜನಿಕವಾಗಿ ಕಾಣಿಸುತ್ತಿದ್ದು ಅಧಾರವಾಗಿ ಬೆಂಗಳೂರಿನ ಸರ್ಜಾಪುರ ಪೊಲೀಸರಿಂದ ಬೈಕ್ ಸವಾರನ ಬಂಧನವಾಗಿದೆ.
ರಸ್ತೆ ಸುರಕ್ಷತೆಗೆ ಅಪಾಯ ಒದಗಿಸಿದ್ದ ಪೋಲಿ ರೈಡ್
ಬೆಳ್ಳಂದೂರು ನಿವಾಸಿಯಾಗಿರುವ ಟೆಕ್ಕಿ ಎರಡು ವರ್ಷಗಳ ಹಿಂದೆ ಚೆನ್ನೈನಿಂದ ಬೆಂಗಳೂರಿಗೆ ಬಂದು ನೆಲೆಸಿದ್ದು ಅವನ ಪ್ರೇಯಸಿ ಸಹ ಅವನೊಂದಿಗೆ ಬೆಂಗಳೂರಿಗೆ ಬಂದಿದ್ದಾಳೆ ಎರಡು ಮೂರು ದಿನಗಳ ಹಿಂದೆ ಮುನಿಸಿಕೊಂಡಿದ್ದ ಪ್ರೇಯಸಿಯನ್ನು ಸಮಧಾನ ಪಡಿಸಲು ಬೈಕ್ ಸವಾರಿ ನೆಪದಲ್ಲಿ ಅವಳನ್ನು ತನ್ನ ತೊಡೆಯ ಮೇಲೆ ಎದರು ಬದರಾಗಿ ಕೂರಿಸಿಕೂಂಡು ಬೆಂಗಳೂರು- ಸರ್ಜಾಪುರ ಮುಖ್ಯ ರಸ್ತೆಯಲ್ಲಿ ಪ್ರೇಮಿಗಳ ಹುಚ್ಚಾಟದ ಪೋಲಿ ರೈಡ್ ಮಾಡಿದ್ದಾನೆ ಇದು ರಸ್ತೆ ಸುರಕ್ಷತೆಗೆ ಅಪಾಯ ಒದಗಿಸಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಎಂಬ ಕನಿಷ್ಟ ಅಲೋಚನೆ ಇಲ್ಲದೆ ಪ್ರೀತಿ ಮಾಡೋರಿಗೆ ಜಗವೇ ಕತ್ತಲು ಎಂಬಂತೆ ಸಿನಿಮಾ ಶೈಲಿಯಲ್ಲಿ ರೋಮಾನ್ಸ್ ಮಾಡುತ್ತ ಯುವಕ-ಯುವತಿ ಬೈಕ್ ರೈಡ್ ಮಾಡಿದ್ದಾನೆ.
ಸಾರ್ವಜನಿಕರಿಂದ ವಿಡಿಯೋ ಚಿತ್ರಿಕರಣ
ಯುವಕ-ಯುವತಿ ಪೋಲಿರೈಡ್ ಅನ್ನು ಸಾರ್ವಜನಿಕರೊಬ್ಬರು ವಿಡಿಯೋ ರೆಕಾರ್ಡ್ ಮಾಡಿ X ನಲ್ಲಿ ಅಪ್ಲೋಡ್ ಮಾಡಿದ್ದು, ಇದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಾರ್ವಜನಿಕರು ಒತ್ತಡ ಹೇರಿದ ಹಿನ್ನಲೆಯಲ್ಲಿ ಸ್ವಯಂ ಪ್ರೇರಿತವಾಗಿ ಸರ್ಜಾಪುರ ಪೊಲೀಸರು ಶುಕ್ರವಾರ ಟೆಕ್ಕಿಯನ್ನು ಬಂಧಿಸಿ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 281 (ಸಾರ್ವಜನಿಕ ರಸ್ತೆಯಲ್ಲಿ ಅತಿವೇಗದ ಚಾಲನೆ) ಮತ್ತು ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿ ನಂತರ ಅವರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.