ಮೂರು ಸೇನಾ ಪಡೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರು ಪ್ರಯಾಣಿಸುತ್ತಿದ್ದ ವಾಯುಪಡೆಯ ಹೆಲಿಕಾಪ್ಟರ್ ತಮಿಳುನಾಡಿನಲ್ಲಿ ಪತನಗೊಂಡಿದ್ದು, ರಾವತ್ ಸೇರಿ 13 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ ಚಿತ್ತೂರು ಜಿಲ್ಲೆ ಮದನಪಲ್ಲಿಯ 27 ವರ್ಷದ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ಎಂಬ ಯೋಧ ನಿಧನರಾಗಿದ್ದಾರೆ.
ಮದನಪಲ್ಲಿ: ಬುಧವಾರ ಬೆಳಗ್ಗೆ ನಡೆದಿರುವ ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ 27 ವರ್ಷದ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ಮೃತಪಟ್ಟಿದ್ದು. ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ದ ಸಾಯಿ ತೇಜ್ ಮೂಲತಃ ಆಂಧ್ರಪ್ರದೇಶದವ ಕರ್ನಾಟಕದ ಗಡಿಯಲ್ಲಿನ ಬಿ.ಕೊತ್ತಕೊಟ ಬಳಿಯ ಕುರಬಲಕೋಟ ಮಂಡಲದ ಯರ್ರಬಳ್ಳಿ ಪಂಚಾಯತಿಯ ಏಗುವ-ರೆಗಡ ಗ್ರಾಮದ ನಿವಾಸಿ,2012ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್ಗೆ ಸೇರಿದ್ದ ಅಪ್ರೆಂಟಿಸ್ಟ್ ಮುಗಿದ ನಂತರ ಕೆಲ ಕಾಲ ಸೈನಿಕನಾಗಿ ಸೇವೆ ಸಲ್ಲಿಸಿ ನಂತರ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ನೇಮಕಗೊಂಡಿದ್ದರು.
ಇವರ ಸಹೋದರ ಮಹೇಶ್ ಬಾಬು ಕೂಡ ಭಾರತೀಯ ಸೇನೆಯಲ್ಲಿದ್ದು, ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮೃತಪಟ್ಟಿರುವ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ಸಾಮನ್ಯ ರೈತ ಕುಟುಂಬದ ವ್ಯಕ್ತಿ ಬೊಗ್ಗುಲ ಮೋಹನ್ ಹಾಗು ಭುವನೇಶ್ವರಿ ದಂಪತಿಯ ಹಿರಿಯ ಮಗನಾಗಿ 1994 ರಲ್ಲಿ ಜನಿಸಿದ್ದು ಸಾಯಿತೇಜ ಪದವಿಯನ್ನು ಪೂರ್ಣಗೊಳಿಸಿದ ನಂತರ 2013 ರಲ್ಲಿ ಸೇನೆಗೆ ನೇಮಕಗೊಂಡಿದ್ದು
2016ರಲ್ಲಿ ಸಿದ್ದಾರೆಡ್ಡಿಗರಿಪಲ್ಲಿಯ ಶ್ಯಾಮಲಾ ಎನ್ನುವರನ್ನು ವಿವಾಹವಾಗಿದ್ದರು. ಇವರಿಗೆ ಎರಡು ವರ್ಷದ ಮಗಳು ದರ್ಶಿನಿ ಮತ್ತು ಐದು ವರ್ಷದ ಮಗ ಮೋಕ್ಷಜ್ಞ ಇಬ್ಬರು ಮಕ್ಕಳಿದ್ದಾರೆ.ಗ್ರಾಮದಲ್ಲಿಯೇ ಸಂಸಾರ ಇದ್ದ ಇವರ ಕುಟುಂಬ ಮಕ್ಕಳ ವಿಧ್ಯಾಬ್ಯಾಸದ ನಿಮಿತ್ತ ಆರು ತಿಂಗಳ ಹಿಂದೆ ಮದನಪಲ್ಲಿ ಎಸ್ಬಿಐ ಕಾಲೋನಿಯಲ್ಲಿ ಮನೆ ಮಾಡಿದ್ದರು.
ಸಂಕ್ರಾಂತಿಗೆ ಊರಿಗೆ ಬರುವುದಾಗಿ ಹೇಳಿದ್ದ
ವಿನಾಯಕ ಚೌತಿಗೆ ಊರಿಗೆ ಬಂದಿದ್ದ ಸಾಯಿತೇಜ ಮತ್ತೆ ಸಂಕ್ರಾಂತಿ ಹಬ್ಬಕ್ಕೆ ಬರುವುದಾಗಿ ಹೇಳಿ ಹೋಗಿದ್ದ, ಬುಧವಾರ ಬೆಳೆಗ್ಗೆ ಸಾಯಿತೇಜ ಹೆಂಡತಿ ಶ್ಯಾಮಲಾಗೆ ಫೋನ್ ಮಾಡಿ. ಮಕ್ಕಳು ಏನು ಮಾಡುತ್ತಿದ್ದಾರೆ ಎಂದು ಕೇಳಿ ಮಕ್ಕಳನ್ನು ವಿಡಿಯೋ ಕಾಲ್ ಮೂಲಕ ಮಾತನಾಡಿ ಡ್ಯೂಟಿಗೆ ಹೋಗ್ಬೇಕು.. ಬಾಯ್ ಎಂದು ಫೋನ್ ಕಟ್ ಮಾಡಿದ್ದು ಅವೇ ಆತನ ಕೊನೆಯ ಮಾತುಗಳಾಗಬಹುದೆಂದು ಯಾರು ಊಹಿಸಿರಲಿಲ್ಲ.!