ನ್ಯೂಜ್ ಡೆಸ್ಕ್:- ದಕ್ಷಿಣ ಭಾರತ ಖ್ಯಾತ ಚಲನ ಚಿತ್ರ ನಟಿ ಮಾಧವಿ 17 ವರ್ಷಗಳಕಾಲ ದಕ್ಷಿಣ ಚಲನ ಚಿತ್ರರಂಗವನ್ನು ಆಳಿದ ನಟಿ ಕನ್ನಡ,ತೆಲುಗು,ತಮಿಳು,ಬೆಂಗಾಲಿ,ಮಲಯಾಳಂ,ಒರಿಯಾ ಮತ್ತು ಹಿಂದಿ ಸೇರಿದಂತೆ ಏಳು ಭಾಷೆಗಳಲ್ಲಿ ನಾಯಕಿಯಾಗಿ ನಟಿಸಿದ್ದ ಅವರು ಸುಮಾರು 300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಡಾ.ರಾಜಕುಮಾರ್,ಶಿವಾಜಿ ಗಣೇಶನ್, ಎನ್ಟಿಆರ್,ಈನ್ ಆರ್ ಅಮಿತಾಭ್ ಬಚ್ಚನ್ ಮೇರು ಕಲಾವಿದರ ಜೊತೆ ಮಾಧವಿ ಅಭಿನಯಿಸಿದ್ದಾರೆ.1976ರಿಂದ 1996ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ.
ಇವರು ಹುಟ್ಟಿದ್ದು ಆಗಿನ ಆಂಧ್ರಪ್ರದೇಶ ಈಗಿನ ತೆಲಂಗಾಣದ ಹೈದರಾಬಾದ್ ನಗರದಲ್ಲಿ.ಬಾಲ್ಯದಲ್ಲೇ ಭರತನಾಟ್ಯ ಸೇರಿದಂತೆ ಭಾರತೀಯ ಖ್ಯಾತ ನೃತ್ಯಗಳನ್ನು ಕಲಿತು ಸಾವಿರಕ್ಕೂ ಹೆಚ್ಚು ಪ್ರದರ್ಶನ ನೀಡಿದ್ದಾರೆ. ಪ್ರೌಡಾವಸ್ಥೆಯಲ್ಲಿ ತೆಲಗಿನ ವಿಭಿನ್ನ ನಿರ್ದೇಶಕ ದಾಸರಿ ನಾರಾಯಣರಾವ್ ಅವರ ‘ತೂರ್ಪು ಪಡಮರ’ ಎಂಬ ತೆಲುಗು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಪಡೆದ ಅವರು ಆ ಸಿನಿಮಾ ಯಶಸ್ವಿ ಆಯಿತು ಆ ಹಿನ್ನಲೆಯಲ್ಲಿ ಅಂದಿನ ಖ್ಯಾತ ನಿರ್ದೇಶಕ ಕೆ. ಬಾಲಚಂದರ್ 1979 ರಲ್ಲಿ ಮರೋಚರಿತ್ರ ಚಿತ್ರದಲ್ಲಿ ಕಮಲಹಾಸನ್ ಜತೆಗೆ ಪ್ರಮುಖಪಾತ್ರವೊಂದನ್ನು ನೀಡಿದ್ದು ಆ ಸಿನಿಮಾ ಅದ್ಭುತ ಯಶಸ್ಸು ಕಂಡ ಈ ಚಿತ್ರ ಹಿಂದಿಯಲ್ಲಿ ‘ಏಕ್ ದೂಜೆ ಕೇ ಲಿಯೆ’ ಹೆಸರಿನಲ್ಲಿ ತಯಾರಾಗಿ ಅಲ್ಲಿಯೂ ಭಾರೀ ಯಶ ಪಡೆಯಿತು.ನಂತರದಲ್ಲಿ ಮಾಧವಿ ಭಾರತ ಚಿತ್ರರಂಗದ ಮಹಾನ್ ತಾರೆಯರ ಜೊತೆ ನಟಿಸಿದರು ಯಶಸ್ಸಿನ ಉತ್ತುಂಗ ತಲುಪಿದ ಅವರ ಕನ್ನಡದ ಮೇರು ನಟ ಡಾ.ರಾಜಕುಮಾರ್ ಸಾಹಸಸಿಂಹ ವಿಷ್ಣುವರ್ಧನ್,ಅಂಬರೀಶ್,ಅನಂತನಾಗ್ ಅವರೊಂದಿಗೂ ನಟಿಸಿರುತ್ತಾರೆ. ಹಿಂದಿಯಲ್ಲಿ ಮಾಧವಿಯವರು ಅಮಿತಾಭ್ ಬಚ್ಚನ್ ಜತೆ ಅಗ್ನಿಪಥ್ ಚಿತ್ರದಲ್ಲಿ ಅಭಿನಯಿಸಿದ ಅವರು ಇನ್ನು ಹಲವಾರು ಸಿನಿಮಾಗಳಲ್ಲಿ ನಟಸಿರುತ್ತಾರೆ. ಕಮಲಹಾಸನ್ ಜತೆಗೆ ರಾಜಪಾರ್ವೈ ಮತ್ತು ಟಿಕ್ ಟಿಕ್ ಟಿಕ್ ಮುಖ್ಯ ಛಿತ್ರಗಳು ಮೇಗಾಸ್ಟಾರ್ ಚಿರಂಜೀವಿ ಜತೆ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು ಮಲೆಯಾಳಂ ನಲ್ಲಿ ಮಮ್ಮೂಟಿ ಮತ್ತು ಮೋಹನಲಾಲ್ ಜತೆ ಅವರ ಅನೇಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ
ದೊಡ್ಡ ದೊಡ್ಡ ನಟ-ನಿರ್ದೇಶಕರ ಜೊತೆ ಕೆಲಸ ಮಾಡಿದ ಕೀರ್ತಿ ಮಾಧವಿಗೆ ಸಲ್ಲುತ್ತದೆ. ತುಂಬ ವಿಭಿನ್ನ ಪಾತ್ರಗಳ ಮೂಲಕ ಮಾಧವಿ ಹೆಸರಾಗಿದ್ದರು. ಆ ಸಮಯ ಅವರ ಸುವರ್ಣ ಯುಗವಾಗಿತ್ತು. ‘ಖೈದಿ,ಇಂಟ್ಲೊ ರಾಮಯ್ಯ ವೀದಿಲೊ ಕೃಷ್ಣಯ್ಯ,ರಾಜ ಪರ್ವೈ,ತಂಬಿಕ್ಕಿ ಇಂದ ಊರು, ಹಾಲು ಜೇನು, ಅಗ್ನಿಪಥ್’ ಗಳಂತ ಸೂಪರ್ ಹಿಟ್ ಸಿನಿಮಾಗಳು ಮಾಧವಿಯ ಫೇವರಿಟ್ ಸಿನಿಮಾಗಳಂತೆ.
ಕನ್ನದದಲ್ಲಿ 24 ಸಿನಿಮಾಗಳು
ಕನ್ನಡದಲ್ಲಿ ಡಾ.ರಾಜಕುಮಾರ್ ಜೊತೆ ನಟಿಸಿದ ಯಶಸ್ವಿಯಾದ ಮತ್ತು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಅನೇಕ ಚಲನಚಿತ್ರಗಳಲ್ಲಿ ಹಾಲು ಜೆನು, ಭಾಗ್ಯದ ಲಕ್ಷ್ಮಿ ಬಾರಮ್ಮ, ಅನುರಾಗ ಅರಳಿತು, ಶ್ರುತಿ ಸೆರಿದಾಗ, ಜೀವನ ಚೈತ್ರ, ಆಕಸ್ಮಿಕ, ಒಡಹುಟ್ಟಿದವರು ಪ್ರಮುಖ ಸಿನಿಮಾಗಳು
ಸಾಹಸಸಿಂಹ ಡಾ.ವಿಷ್ಣುವರ್ಧನ್ ಜೊತೆ ನಟಿಸಿರುವ ಒಂದೇಗುರಿ,ಗಂಡುಗಲಿರಾಮ,ಚಿನ್ನದಂತ ಮಗ, ರುದ್ರನಾಗ,ಖೈದಿ,ಚಾಣಿಕ್ಯ,ಚಿತ್ರಗಳು ಮತ್ತು ರಾಷ್ಟ್ರೀಯ ಪ್ರಶಸ್ತಿ ಪಡೆದ ಮಲಯಮಾರುತದಲ್ಲಿ ಅದ್ಭುತವಾಗಿ ನಟಿಸಿರುತ್ತಾರೆ. ಇವೆಲ್ಲವೂ ವಿಷ್ಣು ಜೊತೆಗಿನ ಕನ್ನಡ ಸಿನಿಮಾಗಳಾದರೆ 1987 ರಲ್ಲಿ ವೆರುಕಲ್ ಥೆಡಿ ಎಂಬ ಮಲಯಾಳಂ ಸಿನಿಮಾದಲ್ಲಿ ವಿಷ್ಣು ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರೆ ಹಾಗೆ 1986 ರಲ್ಲಿ ತಮಿಳಿನ ವಿಡುದಲೈ ಸಿನಿಮಾದಲ್ಲಿ ವಿಷ್ಣು ನಟಸಿದ್ದು ಅದರಲ್ಲಿ ಮಾಧವಿ ಸಹ ನಟಿಸಿದ್ದಾರೆ.
ಜರ್ಮನಿ ಯುವಕನ ಜೊತೆ ಮಾಧವಿ ಅರೇಂಜ್ ಮ್ಯಾರೇಜ್
ಟಿಫನಿ, ಪ್ರಿಸಿಲ್ಲ, ಎವಿಲಿನ್ ಎಂಬ ಮೂವರು ಹೆಣ್ಣುಮಕ್ಕಳ ತಾಯಿಯಾಗಿರುವ ಮಾಧವಿ ಮದುವೆಯಾಗಿ 23 ವರ್ಷಗಳ ಯಶಸ್ವಿ ಸಾಂಸಾರಿಕ ಜೀವನ ಕಳೆದಿದ್ದಾರಂತೆ ಮೂರು ಹೆಣ್ಣುಮಕ್ಕಳು, ಪತಿಯ ಜೊತೆಗೆ ವಿದೇಶದಲ್ಲಿ ಯಶಸ್ವಿ ಉದ್ಯಮಿಯಾಗಿ ತುಂಬು ಜೀವನ ಸಾಗಿಸುತ್ತಿದ್ದಾರೆ.
ಈಗ ಅಮೆರಿಕದಲ್ಲಿ ಮಾಧವಿ ವೃತ್ತಿಯೇನು?
ಅಂದು ಅನುರಾಗ ಅರಳಿತು ಸಿನಿಮಾದಲ್ಲಿ ಅಹಂಕಾರಿ ಉದ್ಯಮಿಯಾಗಿ ಡಾ.ರಾಜಕುಮಾರ್ ಅವರೊಂದಿಗೆ ನಟಿಸಿದ್ದ ಮಾಧವಿ ಇಂದು ಪತಿ ಜೊತೆ ಸೇರಿ ಸ್ವಂತ ಔಷಧ ಉದ್ಯಮವನ್ನು ನಡೆಸುತ್ತಿರುವುದಾಗಿ ಹೇಳಲಾಗಿದೆ. ಸಿನಿಮಾ ನಟಿಯಾಗಿ, ನಂತರದಲ್ಲಿ ಪೂರ್ಣ ಪ್ರಮಾಣದ ತಾಯಿಯಾಗಿ, ಮಹಿಳಾ ಉದ್ಯಮಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ
ಮದುವೆಯಾಗುವ ಮುಂಚೆ ಮಾಧವಿಗೆ ಇದ್ದ ಆಸೆಯಂತೆ ಇರುವಷ್ಟು ದಿನ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು, ಸಂಪಾದಿಸಿದ ಹಣವನ್ನು ಸಾಮಾಜಿಕ ಸೇವಾ ಕಾರ್ಯಗಳಿಗೆ ಬಳಸಬೇಕು ಎಂದಾಗಿತ್ತು ಅದರಂತೆ ‘ದಿ ಮಾಧವಿ ಚಾರಿಟೇಬಲ್ ಫೌಂಡೇಶನ್’ ಸ್ಥಾಪಿಸಿರುವ ಅವರು ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತ ಸೋಶಿಯಲ್ ಮೀಡಿಯಾ ಬಳಸಿಕೊಂಡು ಜಾಗತಿಕ ಮಟ್ಟದಲ್ಲಿ ಹಣದ ಅವಶ್ಯಕತೆಯಿರುವವರಿಗೆ ಧನಸಹಾಯ ಮಾಡುತ್ತಿರುವುದಾಗಿ ಹೇಳಲಾಗಿದೆ.