ನ್ಯೂಜ್ ಡೆಸ್ಕ್:ಮಹಾರಾಷ್ಟ್ರ ಸರ್ಕಾರ ಗೋವನ್ನು ‘ರಾಜ್ಯ ಮಾತಾ’ ಎಂದು ಘೋಷಿಸಿ ಆದೇಶ ಹೊರಡಿಸಿದೆ. ಭಾರತೀಯ ಸಂಪ್ರದಾಯದಲ್ಲಿ ಗೋವಿನ ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಗುರುತಿಸಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅದು ಹೇಳಿದೆ. ಕೃಷಿಯಲ್ಲಿ ಹಸುವಿನ ಸಗಣಿ ಬಳಸುವುದರಿಂದ ಆಹಾರದಲ್ಲಿ ಪೋಷಕಾಂಶಗಳು ಸೇರುತ್ತವೆ ಎಂದು ವ್ಯಾಖ್ಯಾನಿಸಲಾಗಿದೆ.
ಚುನಾವಣೆ ಹೊತ್ತಿನಲ್ಲಿ ನಿರ್ಧಾರ
ಮಹಾರಾಷ್ಟ್ರದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಸದ್ಯದಲ್ಲಿ ಚುನಾವಣಾ ದಿನಾಂಕವೂ ಘೋಷಣೆಯಾಗಲಿರುವ ಬೆನ್ನಲ್ಲೇ ಮಹಾರಾಷ್ಟ್ರ ಸರ್ಕಾರ ಸೋಮವಾರ ಗೋವನ್ನು ‘ರಾಜ್ಯ ಮಾತೆ’ ಎಂದು ಘೋಷಿಸಿ ಆದೇಶ ಹೊರಡಿಸಿದ್ದು ಭಾರತೀಯ ಸಂಪ್ರದಾಯದಲ್ಲಿ ಗೋವುಗಳ ಸಾಂಸ್ಕೃತಿಕ ಮಹತ್ವವನ್ನು ಉಲ್ಲೇಖಿಸಿ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಲಾಗಿದೆ.
ಇನ್ನು ರಾಜ್ಯ ಮಾತೆ ಎಂದು ಘೋಷಿಸಿದ ಅಧಿಕೃತ ಆದೇಶದಲ್ಲಿ, ಏಕನಾಥ್ ಶಿಂಧೆ ನೇತೃತ್ವದ NDAಸರ್ಕಾರ ಹಸು ಭಾರತೀಯ ಸಂಪ್ರದಾಯದ ಪ್ರಮುಖ ಭಾಗವಾಗಿದೆ ಮತ್ತು ಪ್ರಾಚೀನ ಕಾಲದಿಂದಲೂ ಗೋವಿಗೆ ಆಧ್ಯಾತ್ಮಿಕ, ವೈಜ್ಞಾನಿಕ ಮತ್ತು ಸಾಮಾಜಿಕ-ಆರ್ಥಿಕ ಮಹತ್ವವಿದೆ ಎಂದು ಹೇಳಲಾಗಿದೆ.ಭಾರತದಾದ್ಯಂತ ಕಂಡುಬರುವ ವಿವಿಧ ತಳಿಯ ಹಸುಗಳನ್ನು ಎತ್ತಿ ತೋರಿಸಿರುವ ಮಹಾರಾಷ್ಟ್ರ ಸರ್ಕಾರವು ದೇಶಿ ಹಸುಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದೆ.
Breaking News
- ಚಿಂತಾಮಣಿ ಕಲಾವಿದೆ ರಶ್ಮಿ ಅರಳಿಸಿದ ರಾಮಂದಿರಕ್ಕೆ ತೋಟಗಾರಿಕೆ ಪ್ರಶಸ್ತಿ!
- ಶ್ರೀನಿವಾಸಪುರ ಹೈವೆ ಪುಟ್ ಪಾತಲ್ಲಿ ವಾಹನ ಗ್ಯಾರೆಜ್,ಕೊಂಪೆಯಂತಾದ ರಸ್ತೆ!
- ಶ್ರೀನಿವಾಸಪುರ ಗ್ರಾಮಗಳಿಗೆ ಭೇಟಿ ನೀಡಿದ ಜಿಲ್ಲಾಪಂಚಾಯಿತಿ CEO ಡಾ.ಪ್ರವೀಣ್.
- ಅಂಬಿಗರ ಚೌಡಯ್ಯ ತತ್ವಾದರ್ಶ ಇಂದಿಗೂ ಪ್ರಸ್ತುತ ತಹಶೀಲ್ದಾರ್ ಸುಧೀಂದ್ರ
- ಕಲ್ಲೂರಿನಲ್ಲಿ ಶಾಸಕ ವೆಂಕಟಶಿವಾರೆಡ್ಡಿ BIRTHDAY ಕಾರ್ಯಕ್ರಮ
- ರಾಯಲ್ಪಾಡು ಒಂಟಿಮನೆಯಲ್ಲಿ ಕಳ್ಳತನ ಮಾಡಿದ್ದ ಮೂವರ ಬಂಧನ
- ಶ್ರೀನಿವಾಸಪುರದಲ್ಲಿ ವೈದೇಹಿ ಆಸ್ಪತ್ರೆಯಿಂದ ನಡೆದ ಆರೋಗ್ಯ ಶಿಬಿರ
- ರಮೇಶ್ ಕುಮಾರ್ ಜಮೀನು ಎರಡು ದಿನಗಳ ಜಂಟಿ ಸರ್ವೇ ಅಂತ್ಯ
- ರಮೇಶಕುಮಾರ್ ಜಮೀನು ಅಳತೆ ಸಮಯಾಭವ ಅರಣ್ಯಇಲಾಖೆ ಸರ್ವೆ ಗುರುವಾರಕ್ಕೆ!
- ಬೆಂಗಳೂರು-ಮದನಪಲ್ಲೆ ಹೆದ್ದಾರಿಯಲ್ಲಿ ಅಪಘಾತ ಆಂಧ್ರದ ಇಬ್ಬರ ಸಾವು!
Monday, January 27