ಶ್ರೀನಿವಾಸಪುರ:- ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡು ಸಾಲಗಾರನಾಗಿದ್ದ ಯುವಕನೊರ್ವ ಹಣದ ದುರಾಸೆಗೆ ತನ್ನ ಕುಟುಂಬದ ಆಪ್ತ ವ್ಯಕ್ತಿಯನ್ನೆ ಕೊಲೆ ಮಾಡಿದ್ದ ಯುವಕನನ್ನು ಪೋಲಿಸರು ಬಂಧಿಸಿ ನ್ಯಾಯಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ಪಟ್ಟಣದ ಹೊರವಲಯದಲ್ಲಿ ಎ.ಪಿ.ಎಂ.ಸಿ ಮಾರುಕಟ್ಟೆ ಹಿಂಬಾಗದ ಮಾವಿನ ತೋಪಿನಲ್ಲಿ ಸೋಮವಾರ ತಾಲೂಕಿನ ಗುಂಡಮನತ್ತ ಗ್ರಾಮದ ಕುರಿ ವ್ಯಾಪಾರಿ ಮುನಿಶಾಮಿ(65) ಎಂಬುವರನ್ನು ಕೊಲೆ ಮಾಡಿದ ಆರೋಪದ ಮೇಲೆ ಪಟ್ಟಣದ ಅಕ್ಬರ್ ರಸ್ತೆ ನಿವಾಸಿ ಮಾಂಸದ ವ್ಯಾಪಾರಿ ಜಾವಿದ್ ಪಾಷ @ ಅಜ್ಜು ಮಗ ನಯಾಜ್ ಪಾಷ ಎಂಬ ಯುವಕನ್ನು ಪೋಲಿಸರು ಬಂಧಿಸಿ ನ್ಯಾಯಾಧಿಶರ ಮುಂದೆ ಹಾಜರು ಪಡಿಸಿದ್ದು ನ್ಯಾಯಧೀಶರು ಆರೋಪಿಯನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಿರುತ್ತಾರೆ.
ತಂದೆ ಕೊಟ್ಟಿದ್ದ ಹಣ ಪಡೆಯಲು ಕೊಲೆ?
ಕುರಿ ವ್ಯಾಪಾರಿ ಮುನಿಶಾಮಿ ಮತ್ತು ಮಾಂಸದ ವ್ಯಾಪಾರಿ ಜಾವಿದ್ ಪಾಷ ಅವರ ಕುಟುಂಬದ ನಡುವೆ ದಶಕಗಳ ವಿಶ್ವಾಸ ಈ ಹಿನ್ನಲೆಯಲ್ಲಿ ಮಾಂಸದ ಅಂಗಡಿಗೆ ಅಗತ್ಯವಾಗಿ ಬೇಕಿರುವ ಕುರಿಗಳನ್ನು ಮುನಿಶಾಮಿ ಮೂಲಕ ತರಿಸುವುದು ಸಾಮಾನ್ಯ ಅದರಂತೆ ಕೊಲೆ ಆರೋಪಿ ನಯಾಜ್ ಪಾಷಾ ಸೋಮವಾರ ಬೆಳಿಗ್ಗೆ ಮುನಿಶಾಮಿಯೊಂದಿಗೆ ಕುರಿ ವ್ಯಾಪಾರಕ್ಕೆ ಮೊಗಲಹಳ್ಳಿ ಮತ್ತು ಕಠಾರಮುದ್ದಲಹಳ್ಳಿಗೆ ಹೋಗಿ ಬಂದು ಕುರಿಗಳನ್ನು ಕೊಳ್ಳಲು ಎಂದು ಆರೋಪಿ ತನ್ನ ತಂದೆ ಜಾವಿದ್ ಪಾಷಾನಿಂದ 50 ಸಾವಿರಗಳನ್ನು ಮುನಿಶಾಮಿಗೆ ಕೊಡಿಸಿರುತ್ತಾನೆ, ನಂತರ ಮುನಿಶಾಮಿಗೆ ಇಂದಿರಾನಗರದ ಮಾವಿನ ತೋಟದ ಬಳಿ ಕುರಿಗಳಿವೆ ನೋಡಿಕೊಂಡು ಬರೋಣ ಬಾ ಎಂದು ತನ್ನ ದ್ವಿಚಕ್ರ ವಾಹನದಲ್ಲಿ ಕರೆದೊಯಿದಿದ್ದ ಆರೋಪಿ ತೊಟದಿಂದ ಹೋರಗೆ ವಾಹನ ನಿಲ್ಲಿಸಿ ಮುನಿಶಾಮಿಯನ್ನು ಮುಂದೆ ಕಳಿಸಿರುತ್ತಾನೆ ನತ ದೃಷ್ಟ ಮುನಿಶಾಮಿ ಏನಾಗುತ್ತಿದೆ ಎಂಬ ಅರಿವು ಇಲ್ಲದೆ ನಡೆದು ಹೋಗುತ್ತಿರುವಾಗ ಹಿಂದೆ ಹೆಜ್ಜೆ ಹಾಕುತ್ತಿದ್ದ ಆರೋಪಿ ಮುಂದೆ ನಡೆಯುತ್ತಿದ್ದ ಮುನಿಶಾಮಿಯನ್ನು ಹಿಡಿದು ಚಾಕುವಿನಿಂದ ಕತ್ತನ್ನು ಸೀಳಿ ಕೊಲೆ ಮಾಡಿದ್ದಾನೆ ರಕ್ತದ ಮಡುವಲ್ಲಿ ಬಿದ್ದು ಹೊರಳಾಡುತ್ತಿದ್ದ ಮುನಿಶಾಮಿ ಬಳಿಯಿದ್ದ 50 ಸಾವಿರ ಹಣ ದೋಚಿದ ಅರೋಪಿ ಅರ್ಧ ಗಂಟೆ ಅವಧಿಯಲ್ಲಿ ತನ್ನ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶ್ರೀನಿವಾಸಪುರ ಶಾಖೆಯ ಖಾತೆಗೆ ಹಣವನ್ನು ಜಮಾ ಮಾಡಿಕೊಂಡಿರುವುದಾಗಿ ಪೋಲಿಸರ ವಿಚಾರಣೆ ವೇಳೆ ತಪ್ಪೊಪ್ಪಿಂಡಿರುತ್ತಾನೆ.
ಪಾಕಿಸ್ತಾನ್ ಲಿಗ್ ಬೆಟ್ಟಿಂಗ್ ನಲ್ಲಿ ಹಣ ಕಳೆದುಕೊಂಡಿದ್ದ!
ಈಗ ನಡೆಯುತ್ತಿರುವ ಪಾಕಿಸ್ತಾನ್ ಲಿಗ್ ಕ್ರಿಕೆಟ್ ಪಂದ್ಯಾವಳಿಗಳ ಬೆಟ್ಟಿಂಗನಲ್ಲಿ ಹಣ ತೊಡಗಿಸಿದ್ದ ಆರೋಪಿ ನಯಾಜ್ ಪಾಷ ನಷ್ಟಕ್ಕೆ ಒಳಗಾಗಿದ್ದು ಸಾಲ ಪಡೆದವರಿಂದ ಕಿರಕುಳ ಅನುಭವಿಸುತ್ತಿದ್ದ ಹಿನ್ನಲೆಯಲ್ಲಿ ಅವರಿಗೆ ಸಾಲ ಹಿಂತಿರುಗಿಸಲು ಕೃತ್ಯ ಎಸಗಿದ್ದಾಗಿ ಪೋಲಿಸರ ಮುಂದೆ ವಿವರ ಬಿಚ್ಚಿಟ್ಟಿದ್ದಾನೆ.
ಪಟ್ಟಣದ ಪ್ರತಿಷ್ಟಿಯ ಶಾಲೆಯಲ್ಲಿ ಹೈಸ್ಕೂಲ್ ವಿದ್ಯಾಭ್ಯಾಸ ಮಾಡಿದ್ದ ಆರೋಪಿ ಸ್ನೇಹಿತರ ಸಹವಾಸಕ್ಕೆ ಬಿದ್ದು ಶ್ರೀನಿವಾಸಪುರದಲ್ಲಿ ಖ್ಯಾತಿಯಾಗಿರುವ ಕ್ರಿಕೆಟ್ ಬೆಟ್ಟಿಂಗನಲ್ಲಿ ತೊಡಗಿಸಿಕೊಂಡು ಅಪರಾಧ ಎಸಗಿರುವುದು ದುರಂತ ಎನ್ನಲಾಗುತ್ತಿದೆ.
ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಜಾಗೃತರಾದ ಪೊಲೀಸರು ಪಾತಕೀಯ ಜಾಡು ಹಿಡಿದು ಪಟ್ಟಣದ ಚಿಂತಾಮಣಿ ವೃತ್ತದಿಂದ ಚಿಂತಾಮಣಿ ರಸ್ತೆಯುದ್ದಕ್ಕೂ ಇರುವ ಸಿ.ಸಿ ಕ್ಯಾಮಾರಗಳನ್ನು ಪರಶೀಲನೆ ಮಾಡಿ ಆರೋಪಿಯನ್ನು ಪತ್ತೆಹಚ್ಚಿರುತ್ತಾರೆ ಡಿವೈಎಸ್ಪಿ ಗಿರಿ ಮತ್ತು ಅಡಿಷನಲ್ ಎಸ್ಪಿ ಮಾರ್ಗದರ್ಶನದಲ್ಲಿ ಆರೋಪಿಯನ್ನು ಬಂದಿಸುವಲ್ಲಿ ಪೊಲೀಸ್ ಇನ್ಸಪೆಕ್ಟರ್ ರವಿಕುಮಾರ್ ತಂಡ ಯಶಸ್ವಿಯಾಗಿದೆ.