ನ್ಯೂಜ್ ಡೆಸ್ಕ್:ಹೊಸ ವರ್ಷಾಚರಣೆ ಸಂಭ್ರದಲ್ಲಿ ಪಟಾಕಿ ಸಿಡಿದು ವ್ಯಕ್ತಿಯೊಬ್ಬ ಮೃತಪಟ್ಟಿರುತ್ತಾನೆ ಘಟನೆ ಆಂಧ್ರದ ವಿಶಾಖಪಟ್ಟಣ ಮಹಾನಗರದಲ್ಲಿ ನಡೆದಿದೆ.
ಪಟಾಕಿ ಅವಘಡದಲ್ಲಿ ಮೃತಪಟ್ತ ವ್ಯಕ್ತಿಯನ್ನು ಶಿವ(41) ಎಂದು ಗುರುತಿಸಲಾಗಿದ್ದು ಡಿ.31ರ ಮಧ್ಯರಾತ್ರಿಯ ನಂತರ ತನ್ನ ಮನೆಯ ಮಹಡಿ ಮೇಲೆ ಹೊಸ ವರ್ಷ2024ನ್ನು ಸ್ವಾಗತಿಸಲು ಸಕಲ ಸಿದ್ಧತೆ ಮಾಡಿಕೊಂಡು ಪತ್ನಿ ಧನಲಕ್ಷ್ಮಿ, ಪುತ್ರಿ ಹಾಗೂ ಪುತ್ರ ಮತ್ತು ಕುಟುಂಬ ಸಮೇತ ಪಾಲ್ಗೊಂಡಿದ್ದರು. ಮಧ್ಯರಾತ್ರಿ 12 ಗಂಟೆಯಾಗಿತ್ತು. ಎಲ್ಲರೂ ಕೂಗುತ್ತ ಖುಷಿಯಿಂದ ಕುಣಿದು ಕುಪ್ಪಳಿಸುತ್ತ ಹೊಸ ವರ್ಷವನ್ನು ಸ್ವಾಗತಿಸಿ ಪರಸ್ಪರ ಶುಭಾಶಯ ಹೇಳಿಕೊಂಡು ಖುಷಿಯಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು.ಮಕ್ಕಳು, ಹಿರಿಯರು, ಮಹಿಳೆಯರು ಎಲ್ಲರೂ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು ಕೇಕ್ ಕತ್ತರಿಸಿದ ನಂತರ ಗನ್ ಶಾಟ್ ಪಟಾಕಿ ಸಿಡಿಸಲು ಬೆಂಕಿ ಹಚ್ಚಿದ್ದಾರೆ ಆದರೆ ಪಟಾಕಿ ಎಷ್ಟೊತ್ತಿಗೂ ಸಿಡಿಯಲಿಲ್ಲ ಹಾಗಾಗಿ ಅದನ್ನು ನೋಡಲು ಮೃತ ಶಿವ ಅದರ ಹತ್ತಿರ ಹೋಗಿ ಮುಖವಿಟ್ಟು ನೋಡುತ್ತಿದ್ದಾಗ ಪಟಾಕಿ ಏಕಾಏಕಿ ಸಿಡಿದಿದೆ, ಸಿಡಿದ ಪಟಾಕಿ ಕಣ್ಣಲ್ಲಿ ದೂರಿ ತಲೆಗೆ ಬಡಿದು ಶಿವ ಸ್ಥಳದಲ್ಲೆ ಕುಸಿದು ಬಿದ್ದಿರುತ್ತಾನೆ ತಕ್ಷಣ ಸಮೀಪದ ಖಾಸಗಿ ಆಸ್ಪತ್ರೆಗೆ ಸಾಗಿದರಾದರು ದಾರಿ ಮದ್ಯದಲ್ಲಿ ಮೃತಪಟ್ಟಿರುತ್ತಾನೆ. ಹೊಸವರ್ಷದ ಖುಷಿಯಲ್ಲಿ ಸಂಭ್ರಮಿಸುತ್ತಿದ್ದ ಶಿವನ ಕುಟುಂಬ ತೀವ್ರ ದುಃಖದಲ್ಲಿ ಮುಳುಗಿದೆ ಘಟನೆ ಕುರಿತು ದುವ್ವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Breaking News
- ಜನಪರ ಹೋರಾಟಗಾರ ಬಯ್ಯಾರೆಡ್ಡಿ ಕೃತಕ ಉಸಿರಾಟ ಕೊನೆಗೂ ನಿಂತುಹೋಯಿತ?
- KSRTC ಬಸ್ಸು ದರ ಇವತ್ತು ಮಧ್ಯರಾತ್ರಿಯಿಂದಲೇ ಏರಿಕೆ!
- ALEART:ಪಾರಿವಾಳ ಸಂಪರ್ಕದಿಂದ ಶ್ವಾಸಕೋಶದ ಸೋಂಕು!ಮಿಸ್ ಮಾಡದೇ ಓದಿ!
- KSRTC ಉಚಿತ ಪ್ರಯಾಣ ಕುರಿತು ಅಧ್ಯಯನಕ್ಕೆ ಬಂದ ಆಂಧ್ರ ಮಂತ್ರಿಗಳು!
- ಹೊಸವರ್ಷ ಆಚರಣೆಯಲ್ಲಿ ಸಿಡಿದ ಪಟಾಕಿಯಿಂದ ವ್ಯಕ್ತಿ ಸಾವು!
- ವಿದ್ಯಾರ್ಥಿನಿಗೆ Love ಪಾಠ ಮಾಡಿ ಮದುವೆಯಾದ ಮೇಷ್ಟ್ರು!
- Infosys ಕ್ಯಾಂಪಸ್ ಗೆ ಬಂದ ಚಿರತೆ! ಹಿಡಿಯಲು ಸಜ್ಜಾದ ಅರಣ್ಯ ಪಡೆ
- ಕರೋನಾ ಸಾಂಕ್ರಾಮಿಕ ರೋಗದ ಮೊದಲ ಪ್ರಕರಣ ಇಂದಿಗೆ ಐದು ವರ್ಷ!
- ಜನವರಿಯಿಂದ ಆಂಡ್ರಾಯ್ಡ್ ಫೋನ್ ನಲ್ಲಿWhatsApp ಕೆಲಸ ಮಡುವುದಿಲ್ಲವಂತೆ!
- ಬೆಂಗಳೂರು-ಮದನಪಲ್ಲಿ ಹೆದ್ದಾರಿಯಲ್ಲಿ ಎರಡು ಪ್ರತ್ಯಕ ಅಪಘಾತ ಇಬ್ಬರ ಸಾವು!
Saturday, January 4