ನ್ಯೂಜ್ ಡೆಸ್ಕ್:ಮಂಡೂಸ್ ಚಂಡಮಾರುತ ಆಂಧ್ರದ ಕರಾವಳಿಯನ್ನು ದಾಟಿದೆ.ಪುದುಚೇರಿ-ಶ್ರೀಹರಿಕೋಟಾ ನಡುವೆ ಮಹಾಬಲಿಪುರಂ ಬಳಿ ಮಧ್ಯಾರಾತ್ರಿ 1:30 ರಲ್ಲಿ ಕರಾವಳಿಯನ್ನು ದಾಟಿದ್ದು ಸಂಜೆ ವೇಳೆಗೆ ದುರ್ಬಲವಾಗುವ ಸಾಧ್ಯತೆ ಇದೆ ಎಂದು ತಙ್ಞರ ಅಭಿಪ್ರಾಯ.ಇದರ ಎಫೆಕ್ಟ್ ನಿಂದಾಗಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ,ರಾಮನಗರ, ಕೊಡಗು, ಹಾಸನ, ಶಿವಮೊಗ್ಗ, ಮೈಸೂರು, ತುಮಕೂರು, ದಾವಣಗೆರೆ ಮತ್ತು ಚಿತ್ರದುರ್ಗ ಮತ್ತು ಆಂಧ್ರದ ಚಿತ್ತೂರು,ಅನ್ನಮಯ್ಯ ಮತ್ತು ವೈಎಸ್ಆರ್ ಜಿಲ್ಲೆಗಳಲ್ಲಿ ಡಿಸೆಂಬರ್ 14 ರವರೆಗೆ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದೆ. ಎಂದು ಐಎಂಡಿ ತಿಳಿಸಿದೆ.
ಉಳಿದಂತೆ ಉತ್ತರ ಕರ್ನಾಟಕ ಭಾಗದಲ್ಲೂ ಹಲವೆಡೆ ಸಾಧಾರಣ ಮಳೆಯಾಗಬಹುದು ಎಂದು ಐಎಂಡಿ ತಿಳಿಸಿದೆ.ಚಂಡಮಾರುತವು ಆಂಧ್ರ ಕರಾವಳಿಯನ್ನು ದಾಟಿದ್ದರೂ,ನಾಳೆಯವರೆಗೂ ಜನರು ಎಚ್ಚರಿಕೆಯಿಂದ ಇರುವಂತೆ ಐಎಂಡಿ ಅಧಿಕಾರಿಗಳು ಸೂಚಿಸಿದ್ದಾರೆ.
ಮಂಡೂಸ್ ಚಂಡಮಾರುತ ಪರಿಣಾಮ ಶುಕ್ರವಾರ ರಾತ್ರಿ ಬೆಂಗಳೂರು ಸೇರಿದಂತೆ ಕೆಲವಡೆ 4.3 ಮಿಮೀ ಮಳೆಯಾಗಿದ್ದು, ಶನಿವಾರ ಬೆಳಗ್ಗೆ ಕನಿಷ್ಠ ತಾಪಮಾನ 16.8 ಡಿಗ್ರಿ ಸೆಲ್ಸಿಯಸ್ಗೆ ಇಳಿದಿದೆ.