ಭಾರತದ ಅನೇಕ ರಾಜ್ಯಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು ಹೊಸ ರೂಪಾಂತರಿಯಿಂದಾಗಿ ಅಲ್ಲ,ಬದಲಾಗಿ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚೆಚ್ಚು ಜನರನ್ನು ಸೇರಿಸಿ ನಡೆಸುತ್ತಿರುವ ಮದುವೆ,ಪಾರ್ಟಿ ಹಾಗು ಸಮಾರಂಭಗಳಿಂದ ಹರಡುತ್ತಿದೆ ಎಂದು ಕೇಂದ್ರ ಸರ್ಕಾರ ಅಂದಾಜಿಸಿದೆ.
ನ್ಯೂಜ್ ಡೆಸ್ಕ್: ಕೋವಿಡ್ ಸಂಬಂದ ಕೇಂದ್ರ ತಂಡ ರಾಜ್ಯಗಳಾದ್ಯಂತ ಸುತ್ತಾಡಿ ಅದ್ಯಯನ ನಡೆಸಿದ್ದು ಸಂಗ್ರಹಿಸಿರುವ ವಿಷಯದ ಅಧಾರದಲ್ಲಿ ಪ್ರತಿಕ್ರಿಯೆ ಮತ್ತು ವರದಿ ನೀಡಿದ ನಂತರ ಈ ಬಗ್ಗೆ ಸ್ಪಷ್ಟ ಚಿತ್ರಣ ಕಂಡುಬರಲಿದಿಯಂತೆ, ಮದುವೆ, ಪಾರ್ಟಿಗಳಿಂದಾಗಿ ಕೋವಿಡ್ ಪ್ರಕರಣಗಳು ಹೆಚ್ಚಾಗಿದೆ ಎಂದು ಅನಿಸುತ್ತಿದೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ ವಿ ಕೆ ಪೌಲ್ ಹೇಳುತ್ತಾರೆ.ಇತ್ತೀಚಿನ ದಿನಗಳಲ್ಲಿ ಕೋವಿಡ್ ಪ್ರಕರಣಗಳು ವಿಪರೀತ ಏರಿಕೆಯಾಗಿದ್ದು ಕೊರೋನಾ ರೂಪಾಂತರದ ಪಾತ್ರ ಇದರಲ್ಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುತ್ತಾರೆ.
ಭಾರತದಲ್ಲಿ ಒಟ್ಟು ಕೋವಿಡ್ ಪ್ರಕರಣಗಳಲ್ಲಿ ಸದ್ಯ ಸಕ್ರಿಯ ಕೇಸುಗಳು ಶೇಕಡಾ 1.51ರಷ್ಟಿದ್ದು ಗುಣಮುಖ ಹೊಂದುತ್ತಿರುವವರ ಸಂಖ್ಯೆ ಶೇಕಡಾ 97ರಷ್ಟಿದೆ. ಮಹಾರಾಷ್ಟ್ರ ಮತ್ತು ಕೇರಳ ರಾಜ್ಯಗಳಲ್ಲಿ ಅತಿ ಹೆಚ್ಚು ಶೇಕಡಾ 67.84ರಷ್ಟು ಸಕ್ರಿಯ ಕೋವಿಡ್ ಪ್ರಕರಣಗಳಿವೆ.
ಕಳೆದ ಎರಡು ವಾರಗಳಲ್ಲಿ ದಿನಂಪ್ರತಿ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ. ತಮಿಳು ನಾಡು ಮತ್ತು ಪಂಜಾಬ್ ರಾಜ್ಯಗಳಲ್ಲಿ ಕೇಂದ್ರ ತಂಡವನ್ನು ನಿಯೋಜಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ತಿಳಿಸಿರುತ್ತಾರೆ.