- ಬ್ಯಾಟಪ್ಪ ನೇತೃತ್ವದಲ್ಲಿ ರೈತರ ಸಭೆ
- ಶ್ಯಾಗತ್ತೂರು ಸುಧಾಕರ್ ಭಾಗಿ
- ಕೈಗಾರಿಕೆ ಸ್ಥಾಪನೆಯಿಂದ ಅನಾನುಕೂಲ
ಶ್ರೀನಿವಾಸಪುರ:ಖಾಸಗಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲ ಮಾಡಿಕೊಡಲು ಕರ್ನಾಟಕ ಕೈಗಾರಿಕ ಪ್ರದೇಶಾಭಿವೃದ್ಧಿ ಮಂಡಳಿ ರೈತರ ಜಮೀನು ಭೂಸ್ವಾಧೀನ ಮಾಡಿಕೊಳ್ಳಲು ನಾವು ಬಿಡುವುದಿಲ್ಲ ಎಂದು ಕೋಚಿಮುಲ್ ಮಾಜಿ ಅಧ್ಯಕ್ಷ ಎನ್.ಜಿ.ಬೇಟಪ್ಪ ಹೇಳಿದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಗತ್ತೂರು ಸುಧಾಕರ್ ಹಾಗು ಶ್ರೀನಿವಾಸಪುರ ತಾಲೂಕಿನ ಯದರೂರು ಭಾಗದ ರೈತರೊಂದಿಗೆ ಬುಧವಾರ ಸಮಾಲೋಚನೆ ಸಭೆ ನಡೆಸಿ ಮಾತನಾಡಿದ ಅವರು ಖಾಸಗಿ ಕೈಗಾರಿಕೆಗಳಿಗೆ ಕೃಷಿ ಜಮೀನು ಬಿಟ್ಟುಕೊಟ್ಟರೆ ರೈತ ಸಂಸ್ಕೃತಿ ನಾಶವಾಗುತ್ತದೆ ರೈತರು ಬೆಳೆದಿರುವಂತ ಮಾವು, ರೇಷ್ಮೆ,ಹೈನುಗಾರಿಕೆ ಕ್ಷೇತ್ರದ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಇದರಿಂದ ರೈತರು ಆರ್ಥಿಕವಾಗಿ ಹಾಗು ಸಾಮಾಜಿಕವಾಗಿ ಕುಂಠಿತರಾಗಿ ಕೃಷಿ ವ್ಯವಸ್ಥೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದರು.
ಕೈಗಾರಿಕೆ ಸ್ಥಾಪನೆಯಿಂದ ಅನಾನುಕೂಲ ಹೆಚ್ಚು
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಶ್ಯಾಗತ್ತೂರು ಸುಧಾಕರ್ ಮಾತನಾಡಿ ಕೈಗಾರಿಕೆಗಳ ಸ್ಥಾಪನೆಯಿಂದ ಅನುಕೂಲಗಳಿಗಿಂತ ಅನಾನುಕೂಲಗಲೇ ಹೆಚ್ಚಾಗಿದ್ದು ಸರ್ಕಾರ ಒಂದು ಸಲ ಈ ಭಾಗದ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಗೆ ನೋಟಿಪಿಕೇಷನ್ ಮಾಡಿದರೆ ಅದನ್ನು ಬಿಡಿಸಿಕೊಳ್ಳಲು ರೈತರಿಗೆ ಕಷ್ಟವಾಗುತ್ತದೆ. ಈ ಪ್ರದೇಶದ 1270 ಎಕರೆ ಜಮೀನು ನೋಟಿಪಿಕೇಷನ್ ಮಾಡಿರುವುದರಿಂದ ರೈತರು ತಮ್ಮ ಮಕ್ಕಳ ವಿದ್ಯಾಭ್ಯಾಸ, ಸಾಮಾಜಿಕ ಭದ್ರತೆಗೆ ತಮ್ಮ ಜಮೀನನ್ನು ಬ್ಯಾಂಕುಗಳಲ್ಲಿ ಅಡವಿಡಲು ಸಾಧ್ಯವಾಗದಂತೆ ಉಪನೋಂದಣಾಧಿಕರಗಳ ಕಛೇರಿಯಲ್ಲಿ ದಸ್ತಾವೇಜುಗಳನ್ನು ನೋಂದಾಯಿಸಬಾರದೆಂದು ಕೆ.ಐ.ಎ.ಡಿ.ಬಿ ಈಗಾಗಲೆ ಆದೇಶಿಸಿದ್ದು ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಯದರೂರು, ಬೀರಗಾನಹಳ್ಳಿ, ಕತ್ತಿಬೀಸನಹಳ್ಳಿ, ಲಕ್ಷ್ಮೀಮಸಾಗರ ಗ್ರಾಮಗಳ ರೈತರು ಭಾಗವಹಿಸಿ ಯಾವುದೇ ಕಾರಣಕ್ಕೂ ಜೀವನಕ್ಕೆ ಆಧಾರವಾಗಿರುವ ನಮ್ಮ ಜಮೀನನ್ನು ಬಿಟ್ಟುಕೊಡುವುದಿಲ್ಲ. ನಮ್ಮ ಜಮೀನುಗಳನ್ನು ಉಳಿಸಿಕೊಳ್ಳಲು ಯಾವುದೇ ರೀತಿಯ ಹೋರಾಟಕ್ಕೂ ಸಿದ್ದ ಎಂದು ತಿಳಿಸಿದರು.