ಶ್ರೀನಿವಾಸಪುರ: ಪುರಸಭೆಯ ವಿಶೇಷ ಸಭೆಯಲ್ಲಿ ಸದಸ್ಯರು ಕೈ ಕೈ ಮಿಲಾಯಿಸಿಕೊಂಡು ಟೆಬಲ್ ಚೆರ್ ಹಿಡಿದುಕೊಂಡು ಬಡಿದಾಡಿಕೊಳ್ಳುವಷ್ಟು ಮಟ್ಟಕ್ಕೆ ಹೋದಾಗ ಪೋಲಿಸರು ಮದ್ಯಪ್ರವೇಶಸಿ ಸದಸ್ಯರನ್ನು ಸಮಾಧಾನ ಪಡಿಸಿದ ಘಟನೆ ಮಂಗಳವಾರ ನಡೆಯಿತು. ಪುರಸಭೆ ಅಧ್ಯಕ್ಷೆ ಲಲಿತಾಶ್ರೀನಿವಾಸ್ ಅಧ್ಯಕ್ಷತೆಯಲ್ಲಿ 11 ಗಂಟೆಗೆ ವಿಶೇಷ ಸಭೆ ಕರೆಯಲಾಗಿತ್ತು ಆದರೆ ಅಧ್ಯಕ್ಷೆ ಲಲಿತಾಶ್ರೀನಿವಾಸ ಅನಾರೋಗ್ಯ ನಿಯಮಿತ ಸಭೆಗೆ ಬರಲು ಸಾದ್ಯವಾಗುವುದಿಲ್ಲ ಎಂದು ಪುರಸಭೆ ಮುಖ್ಯಾಧಿಕಾರಿಗೆ ವ್ಯಾಟ್ಸಾಪ್ ಮೆಸೆಜ್ ಕಳಿಸಿದ್ದು ಈ ಬಗ್ಗೆ ಮುಖ್ಯಾಧಿಕಾರಿ ಜಯರಾಮ್ ಅಧ್ಯಕ್ಷರು ಆನಾರೋಗ್ಯದ ಹಿನ್ನಲೆಯಲ್ಲಿ ಬರಲು ಸಾದ್ಯವಾಗುವುದಿಲ್ಲ ಎನ್ನುತ್ತಿದ್ದಂತೆ ಸಭೆಯಲ್ಲಿದ್ದ ವಿರೋಧ ಪಕ್ಷದ ಜೆಡಿಎಸ್ ಸದಸ್ಯರು ಪ್ರತಿಭಟನೆಗೆ ಮುಂದಾದರು ಇದನ್ನು ಕಾಂಗ್ರೆಸ್ ವಿರೋಧಿಸಿದಾಗ ಸಭೆಯಲ್ಲಿ ಗದ್ದಲದ ವಾತವರಣ ನಿರ್ಮಾಣವಾಯಿತು ನಂತರದಲ್ಲಿ ಅಧ್ಯಕ್ಷೆ ಲಲಿತಾ ಶ್ರೀನಿವಾಸ್ ಪುರಸಭೆಗೆ ಮಧ್ಯಾನ್ಹ 1 ಗಂಟೆಗೆ ಆಗಮಿಸಿ ಸಭೆ ಮಾಡಲು ಮುಂದಾದಾಗ ಜೆಡಿಎಸ್ ಸದಸ್ಯರು ಸಭೆ ನಡೆಯಬಾರದು ಎಂದು ಪಟ್ಟು ಹಿಡಿದರು ಇದನ್ನು ಕಾಂಗ್ರೆಸ್ ಸದಸ್ಯರು ವಿರೋಧಿಸಿದಾಗ ಎರಡು ಕಡೆಯವರಿಂದ ಮಾತಿಗೆ ಮಾತು ಬೆಳೆದು ಟೆಬಲ್ ತಳ್ಳಾಡಿ ವೈಯುಕ್ತಿಕವಾಗಿ ತಳ್ಳಾಡಿಕೊಂಡು ಗದ್ದಲದ ವಾತವರಣ ನಿರ್ಮಾಣವಾಯಿತು ಜೆಡಿಎಸ್ ಸದಸ್ಯ ತೊತ್ಲಾಶಬ್ಬಿರ್ ಮತ್ತು ಕಾಂಗ್ರೆಸ್ ಸದಸ್ಯಎಟಿಎಸ್ ತಜಮಲ್ ನಡುವೆ ವೈಯುಕ್ತಿಕವಾಗಿ ಮಾತಿನ ಯುದ್ದವೆ ನಡೆಯಿತು ಇಬ್ಬರನ್ನು ಸಮಾಧಾನ ಮಾಡಲು ಹೋದ ಹಿರಿಯ ಬಿಜೆಪಿ ಸದಸ್ಯ ಷಫಿ ಅನಾಮತ್ತು ನೆಲಕ್ಕೆ ಬಿದ್ದರು. ಸಭೆ ನಡೆಯುತ್ತಿದ್ದ ಪುರಸಭೆ ಸಭಾಂಗಣದಲ್ಲಿ ತಳ್ಳಾಟ ನೂಕಾಟದ ನಡುವೆ ಸಭೆಗೆ ಪೆರಿಸಿದ್ದ ಟೆಬಲ್ ಕುರ್ಚಿಗಳು ದೊಡ್ಡ ಶಬ್ದದೊಂದಿಗೆ ನೆಲಕ್ಕೆ ಉರುಳುತಿತ್ತು ಏರು ಧ್ವನಿ ಜೋರುಮಾತಿನ ಗದ್ದಲ ಕೂಗಾಟದಿಂದ ಸಭಾಂಗಣ ಅಕ್ಷರಶಃ ರಣರಂಗವಾಯಿತು.ಪುರಸಭೆ ಸದಸ್ಯರ ನಡುವಿನ ಕಿತ್ತಾಟ ಗದ್ದಲ ಗಲಭೆ ಪುರಸಭೆ ಕಚೇರಿ ಮುಂಬಾಗದ ಎಂ.ಜಿ.ರಸ್ತೆ ವರಿಗೂ ಕೆಳೆಸುವಷ್ಟು ಏರು ಧನಿಯಲ್ಲಿ ನಡೆಯುತಿತ್ತು.
ಕೋರಂ ಇಲ್ಲದೆ ಸಭೆ ನಡೆಸಿರುವ ಅಧ್ಯಕ್ಷರಾದ ಲಲಿತಾಶ್ರೀನಿವಾಸ ಸರ್ವ ಸದಸ್ಯರ ಒಪ್ಪಿಗೆ ಪಡೆಯದೆ ಎಲ್ಲದಕ್ಕೂ ಒಮ್ಮತ ಸೂಚಿಸಿ ಸಂವಿಧಾನ ಬದ್ದರಾಗಿ ಅಯ್ಕೆಯಾದ ನಮ್ಮ ಸ್ಥಾನಕ್ಕೆ ಆಗೌರವ ತಂದಿದ್ದಾರೆ ಎಂದು ಜೆಡಿಎಸ್ ಸದಸ್ಯ ಆನಂದಗೌಡ ಹೇಳುತ್ತಾರೆ.
ಪೋಲಿಸರ ಆಗಮನದಿಂದ ಸದ್ದಡಗಿದ ಸಭೆ!
ಯಾವಾಗ ಸದಸ್ಯರ ನಡುವಿನ ಕಿತ್ತಾಟ ಮಾತಿನ ಚಕಮಕಿ ಹೆಚ್ಚಾದ ಹಿನ್ನಲೆಯಲ್ಲಿ ಪುರಸಭೆ ಅಧಿಕಾರಿಗಳು ಪೋಲಿಸರ ಮೋರೆ ಹೋದ ಹಿನ್ನಲೆಯಲ್ಲಿ ಪೋಲಿಸರು ಆಗಮಿಸಿ ಸದಸ್ಯರನ್ನು ಸಮಾಧಾನ ಪಡಿಸಿದರು ಕೂಗಾಡುತ್ತಿದ್ದ ಕೆಲ ಸದಸ್ಯರನ್ನು ಸಭಾಂಗಣದಿಂದ ಹೊರ ಕರೆದುಕೊಂಡು ಬಂದು ಸಮಾಧಾನ ಪಡಿಸಿ ಸಭೆಯ ಗದ್ದಲ ತಗ್ಗಿಸಿದರು.
ಏನಾಯಿತು ಸಭೆಯ ಗದ್ದಲ
ಶ್ರೀನಿವಾಸಪುರ ಪುರಸಭೆಗೆ ವಿಶೇಷ ಅನುಧಾನ ಎಂದು 15 ಕೊಟಿಯಷ್ಟು ಹಣ ಬಿಡುಗಡೆಯಾಗಿದ್ದು ವಿಶೇಷ ಅನುದಾನವನ್ನು ಪಟ್ಟಣಕ್ಕೆ ನೂತನವಾಗಿ ಸೇರ್ಪಡೆಯಾಗಿರುವ ಪುರಸಭೆ ನೂತನ ವಾರ್ಡಗಳ ಅಭಿವೃದ್ದಿಗೆ ಅನುಧಾನ ಮೀಸಲಿಟ್ಟು ಬಿಡುಗಡೆ ಮಾಡಬೇಕು ಎಂದು ಸದಸ್ಯರು ಜಿಲ್ಲಾ ಯೋಜನಾ ನಿರ್ದೇಶಕರ ವರಿಗೂ ದೂರು ತಗೆದುಕೊಂಡು ಹೋಗಿದ್ದರು ಈ ಬಗ್ಗೆ ಜಿಲ್ಲಾ ಯೋಜನಾ ನಿರ್ದೇಶಕರ ಸಭೆ ನಡೆಸಿ ಅನುಧಾನ ಹಂಚಿಕೆ ಮಾಡಿಕೊಳ್ಳುವಂತೆ ಸೂಚಿಸಿದ್ದರು ಎಂದು ಪುರಸಭೆ ಜೆಡಿಎಸ್ ಸದಸ್ಯ ರಾಜು ವಿವರಿಸಿದರು.
ಜೆಡಿಎಸ್ ಹಿರಿಯ ಸದಸ್ಯ ಬಿ.ವಿ.ರೆಡ್ಡಿ ಮತ್ತು ಉಪಾಧ್ಯಕ್ಷೆ ಅಯೀಶಾ ನಯಾಜ್ ನೇತೃತ್ವದಲ್ಲಿ ಸಭೆ ನಡೆಸಿದ ಜೆಡಿಎಸ್ ಸದಸ್ಯರು ಆಡಳಿತ ಪಕ್ಷದವರು ಸಭೆ ನಡೆಸಿ ಕಾಮಗಾರಿಗಳ ಅನುಮೋದನೆ ಪಡೆದುಕೊಂಡಿರುವುದು ಸರಿಯಾದ ಕ್ರಮ ಅಲ್ಲ ಇಂದಿನ ಸಭೆಯನ್ನು ಬರ್ತಫ್ ಮಾಡಬೇಕು ಎಂದು ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿರುತ್ತಾರೆ.