ಬಂಗಾರಪೇಟೆ:ಭಾರತದ ಖ್ಯಾತ ನೃತ್ಯ ನಿರ್ದೇಶಕ ನಟ ನಿರ್ಮಾಪಕ ಇಂಡಿಯನ್ ಮೈಕಲ್ ಜಾಕ್ಸನ್ ಎಂದು ಹೆಸರು ಪಡೆದಿರುವ ಕರ್ನಾಟಕದವರೆ ಆದ ಪ್ರಭುದೇವ ಕೋಲಾರ ಜಿಲ್ಲೆಯ ಬಂಗಾರಪೇಟೆ ಹತ್ತಿರ ಜೀಯೋನಿ ಗಾಲ್ಫ್ ಕ್ಲಭ್ ಬಳಿ ವಿಲ್ಲಾ ಖರಿದಿಸಿದ್ದು ಈ ಸಂಬಂಧ ಬಂಗಾರಪೇಟೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಿ ಜಮೀನು ನೊಂದಣಿ ಪ್ರಕ್ರಿಯೆ ಮುಗಿಸಿ ಹೋಗಿದ್ದಾರೆ.
ತಲೆಗೆ ಕ್ಯಾಪ್ ಧರಿಸಿ ಮುಖಕ್ಕೆ ಸ್ಕಾರ್ಪ್ ಹಾಕಿಕೊಂಡು ಬಂದ ಪ್ರಭುದೇವ
ಕನ್ನಡದ ನಟ ಪ್ರಭುದೇವ ಬಂಗಾರಪೇಟೆ ಸಬ್ ರಿಜಿಸ್ಟ್ರಾರ್ ಕಚೇರಿಗೆ ಆಗಮಿಸಲು ತಮ್ಮನ್ನು ಜನತೆ ಗುರುತು ಹಿಡಿಯಬಾರದು ಎಂದು ತಲೆಗೆ ಕ್ಯಾಪ್ ಧರಿಸಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಂದರಾದರೂ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೊಂದಣಿ ಪ್ರಕ್ರಿಯೆಲ್ಲಿ ತೊಡಗಿದ್ದಾಗ ಜನರು ಗುರುತು ಹಿಡಿದು ಪ್ರಚಾರವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನ ಜಮಾವಣೆ ಗೊಂಡ ಪರಿಣಾಮ ಒಂದಷ್ಟು ಜನರಿಗೆ ಸೆಲ್ಫಿ ನೀಡಿ ಜನ ಜಂಗುಳಿ ಮಧ್ಯದಿಂದ ಕಾರಿನತ್ತ ತೆರಳಿ ಕಾರು ಏರಿ ಹೋಗಿದ್ದಾರೆ. ವಿಶೇಷ ಏನು ಅಂದ್ರೆ, ಸಬ್ ರಿಜಿಸ್ಟ್ರಾರ್ ಕಚೇರಿಗೆ ಬಂದ ಪ್ರಭುದೇವ ಜೊತೆಗೆ ಸಬ್ ರಿಜಿಸ್ಟ್ರಾರ್ ಸುಮಲತಾ ಅವರೂ ಸಹ ನಟ ಪ್ರಭುದೇವ ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ.
ಬಹು ಭಾಷಾ ನಟ ಪ್ರಭುದೇವ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಮುಗೂರಿನವರು ಈ ಕಾರಣಕ್ಕಾಗಿ ಮೈಸೂರಿನಲ್ಲಿ ತಮ್ಮ ತಂದೆ ಖ್ಯಾತ ನೃತ್ಯ ನಿರ್ದೇಶಕ ಮೂಗುರುಸುಂದರ್@ಸುಂದರಮ್ ಮಾಸ್ಟರ್ ಹಾಗು ಅವರ ತಾಯಿಗಾಗಿ ಸುಂದರ ಮನೆ ನಿರ್ಮಿಸಿ ಕೊಟ್ಟಿದ್ದಾರೆ.ಮೆಗಾಸ್ಟಾರ್ ಚಿರಂಜೀವಿ ನಟನೆಯ ಜಗದೇಕ ವೀರಡು ಸಿನಿಮಾ ಸೇರಿದಂತೆ ಹೆಸರಾಂತ ಸಿನಿಮಾಗಳಿಗೆ ಸುಂದರಮ್ ಮಾಸ್ಟರ್ ನೃತ್ಯ ನಿರ್ದೇಶನ ಮಾಡಿದ್ದಾರೆ.
ಏನಿದು ಜೀಯಾನ್ ಗಾಲ್ಫ್ ಕ್ಲಭ್?
ಕೋಲಾರ ಜಿಲ್ಲೆ ಬಂಗಾರಪೇಟೆ ಹತ್ತಿರ ಜೀಯಾನ್ ಗಾಲ್ಫ್ ಕೌಂಟಿ ನಲ್ಲಿ ರೊನಾಲ್ಡ್ ಫ್ರೀಮ್ ಎಂಬುವರು ವಿನ್ಯಾಸಗೊಳಿಸಿರುವ ಅಂತರಾಷ್ಟ್ರೀಯ ಮಟ್ಟದ ಗಾಲ್ಫ್ ಮೈದಾನವನ್ನು ನಿರ್ಮಿಸಿದ್ದು ಕೋಲಾರ ಭಾಗದ ಹವಾಮಾನಕ್ಕೆ ಅನುಗುಣವಾಗಿ ಅದ್ಭುತವಾಗಿ ಸುಂದರವಾದ ಹಸಿರು ತಾಣ ನಿರ್ಮಾಣ ಮಾಡಲಾಗಿದೆ, ಪ್ರಕೃತಿ ಮೈತೊರೆದು ಹರಡಿಕೊಂಡಿದೆ ಇಲ್ಲಿ ವೈಭೋಪೇತ ಐಷಾರಾಮಿ ವಿಲ್ಲಾಗಳನ್ನು ನಿರ್ಮಿಸಲಾಗಿದೆ ಇಲ್ಲಿ ಶ್ರೀಮಂತ ಉದ್ಯಮಿಗಳು ಹೆಸರಾಂತ ನಟರು ಕ್ರೀಡಾಪಟುಗಳು ವಿದೇಶಿದಲ್ಲಿ ನೆಲಸಿರುವಂತ ಅನಿವಾಸಿ ಭಾರತೀಯರು ಇಲ್ಲಿ ಬಂಡವಾಳ ಹೂಡಿ ವಿಲ್ಲಾ ಗಳನ್ನು ಖರೀದಿಸುತ್ತಾರೆ ಎನ್ನುತ್ತಾರೆ.