ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಬ್ಬರಿಸಿದ ಸಚಿವ ಮಾಧುಸ್ವಾಮಿ
ಕೊರೊನಾ,ನೀತೆ ಸಂಹಿತೆ ಎಂಬ ಕಾರಣಗಳನ್ನು ನೀಡಿ ವ್ಯವಸ್ಥೆ ಜಡಗಟ್ಟಿಸಿದ್ದಾರೆ
ಕೆಲಸ ಮಾಡೋದನ್ನೇ ಮರೆತಿದ್ದಾರೆ ಎಂದು ಕೂಗಾಡಿದ ಸಚಿವ ಮಾಧುಸ್ವಾಮಿ
ಸಂಜೆ ವೇಳೆಗೆ ಕ್ಷಮೆಯಾಚನೆ ಮಾಡಿದ್ದಾರೆ.
ತುಮಕೂರು:-ತುಮಕೂರು ವಿಭಾಗದ ಪಂಚಾಯಿತ್ ರಾಜ್ ಇಂಜನಿರಿಂಗ್ ವಿಭಾಗದ ಎಇಇ ವಿರುದ್ಧ ಗರಂ ಆದ ಮಾಧುಸ್ವಾಮಿಯವರು, ನೀನು ಕೆಲಸ ಮಾಡದಿದ್ದರೂ ನಿನ್ನ ರಕ್ಷಣೆಗೆ ನಿಲ್ಲುವ ಸೀರೆ ಸುತ್ತುವ ಆ ಕೃಷ್ಣ ಯಾರು? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಅಲ್ಲದೆ, ಜಾಡಿಸಿ ಒದ್ದರೆ ಎಲ್ಲಿಗೆ ಹೋಗಿ ಬೀಳುತ್ತೀಯಾ ಗೊತ್ತಾ ನೀನೀಗಾ…? ರಾಸ್ಕಲ್ ಕತ್ತೆ ಕಾಯೋಕೆ ಇಲ್ಲಿಗೆ ಬಂದಿದ್ದೀಯಾ? ಏನ್ ತಿಳ್ಕೊಂಡಿದ್ದೀರಾ ನಾವು…? ರೆಸಲ್ಯೂಷನ್ ಮಾಡ್ಸಿ ಸಸ್ಪೆಂಡ್ ಮಾಡ್ಸಿ ಈ ನನ್ಮಕ್ಕಳನ್ನ ಎಂದು ಕೂಗಾಡಿದ್ದಾರೆಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಕೊರೊನಾ, ನೀತಿ ಸಂಹಿತೆ ಹೆಸರಲ್ಲಿ ಅಧಿಕಾರಿಗಳು ಜಡಗಟ್ಟಿದ್ದಾರೆ. ಜಿಲ್ಲೆಯ ಪಿಆರ್ಐಡಿ ವಿಭಾಗದ ಅಧಿಕಾರಿಗಳು ಕೆಲಸ ಮಾಡುವುದನ್ನೇ ಮರೆತಿದ್ದಾರೆ. ಸಭೆ ನಡೆಯುವುದಿಲ್ಲ ಎಂಬ ಉದಾಸೀನತೆ ತಾಳಿರುವ ಅಧಿಕಾರಿಗಳು ಜಿಲ್ಲೆಯಲ್ಲಿ ಒಂದೇ ಒಂದು ಕಾಮಗಾರಿಯನ್ನೂ ಸಮರ್ಪಕವಾಗಿ ಮಾಡಿಲ್ಲ. ಯಾರು ಕೆಲಸ ಮಾಡುವುದಿಲ್ಲವೋ ಅಂತಹ ಅಧಿಕಾರಿಗಳ ಸಂಬಳ ನಿಲ್ಲಿಸಿ, ನಾನು ಹೇಳೋವರೆಗೂ ಸಂಬಳ ಕೊಡಬೇಡಿ. ಇಡೀ ಜೀವಮಾನ ಪ್ರಮೋಷನ್ ಸಿಗದಂತೆ ಮಾಡಿ ಎಂದು ಕೂಗಾಡಿದ್ದರು.
ನಂತರದ ಬೆಳವಣಿಗೆಯಲ್ಲಿ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿ ವಿವಾದಾತ್ಮಕ ಮಾತಿಗೆ ಮಾಧುಸ್ವಾಮಿ ಕ್ಷಮೆಯಾಚಿಸಿರುತ್ತಾರೆ.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ರೀತಿಗೆ ಸಚಿವ ಜೆ.ಸಿ.ಮಾಧುಸ್ವಾಮಿ ವಿಷಾದ ವ್ಯಕ್ತಪಡಿಸಿದ್ದಾರೆ.
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಮಗಾರಿಗಳು ವಿಳಂಬವಾಗಿವೆ. ಕೆಲವು ಕೆಲಸಗಳನ್ನು ಇನ್ನೂ ಶುರುಮಾಡಿಲ್ಲ. ಹೀಗಾಗಿ ಸ್ವಲ್ಪ ಹೆಚ್ಚು ಬೈದಿದ್ದೇನೆ. ಎಷ್ಟು ಸಹಿಸಿಕೊಳ್ಳೋದು, ಕ್ರಮ ಕೈಗೊಳ್ಳದೇ ಇದ್ದರೆ ದೌರ್ಬಲ್ಯ ಎಂದು ತಿಳಿಯುತ್ತಾರೆ ಎಂದಿರುವ ಅವರು ಜನಸಾಮನ್ಯರ ಪರ ಕೆಲಸ ಮಾಡದಿದ್ದರೆ ಏನು ಮಾಡಬೇಕು. ಕೆಲಸ ಆಗದಿದ್ದರೆ ಅನುದಾನ ವಾಪಸ್ಸು ಹೋಗುತ್ತದೆ ಎಂದು ಸಚಿವ ಮಾಧುಸ್ವಾಮಿ ತಮ್ಮ ಸಿಟ್ಟಿನ ಮಾತಿಗೆ ಸ್ಪಷ್ಟನೆ ನೀಡಿದರು.
ಕೋಪದಿಂದ ಅಧಿಕಾರಿಗಳಿಗೆ ತೀರಾ ಅವಾಚ್ಯವಾಗಿ ಬೈದಿರುವುದನ್ನು ಹಾಗೂ ಈ ಸಂದರ್ಭದಲ್ಲಿ ಬಳಸಿಕೆ ಪದ ಬಳಕೆಗೆ ಸಚಿವ ಮಾಧುಸ್ವಾಮಿ ಕ್ಷಮೆ ಕೋರಿದರು.
ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗಗಳಲ್ಲಿ ಕೆಲಸಗಳು ಆಗಿಲ್ಲ. ನಾನು ಸೂಚನೆ ನೀಡಿ ಎಷ್ಟೋ ದಿನಗಳಾದವು… ಕೆಲಸ ಮಾಡದ ಎಇಇಯನ್ನು ಅಮಾನತು ಮಾಡುವಂತೆ ಸಿಇಒಗೆ ಮಾಧುಸ್ವಾಮಿಯವರು ಸೂಚನೆ ನೀಡಿದ್ದರು ತಿಳಿದುಬಂದಿದೆ.