ಶ್ರೀನಿವಾಸಪುರ:– ಪ್ರೇಮಿಗಳಿಬ್ಬರು ನೇಣಿಗೆ ಶಾರಣಾಗಿರುವ ಘಟನೆ ಇಂದು ನಡೆದಿರುತ್ತದೆ ಕೋಲಾರ-ಶ್ರೀನಿವಾಸಪುರ ರಸ್ತೆಯಲ್ಲಿ ಯಲವಹಳ್ಳಿ ಗ್ರಾಮದ ವ್ಯಾಪ್ತಿಯ ಮಾವಿನ ತೋಟದಲ್ಲಿ ಯುವ ಪ್ರೇಮಿಗಳಿಬ್ಬರು ಒಂದೇ ಮಾವಿನ ಮರದಲ್ಲಿ ಪ್ರತ್ಯಕವಾಗಿ ನೇಣು ಹಾಕಿಕೊಂಡು ಮೃತ ಪಟ್ಟಿರುವ ಘಟನೆ ಸೋಮವಾರ ಸಂಜೆ ಪತ್ತೆಯಾಗಿದೆ.
ಯಲವಳ್ಳಿ ರೆಡ್ಡ್ಡೆಪ್ಪ ಎಂಬುವವರ ಮಾವಿನ ತೋಪಿನಲ್ಲಿ ನೇಣಿಗೆ ಶಾರಣಾಗಿರುವ ಪ್ರೇಮಿಗಳಲ್ಲಿ ಯುವತಿ ಶಾಲಾ ಸಮವಸ್ತ್ರದಲ್ಲಿಯೇ ನೇಣಿಗೆ ಕೊರಳೋಡಿದ್ದಾಳೆ. ಯುವಕ ಅದೇ ಮರದ ಮತ್ತೊಂದು ಟೊಂಗೆಯಲ್ಲಿ ನೇಣು ಬಿಗಿದುಕೊಂಡಿದ್ದಾನೆ ಯುವತಿಯನ್ನು ಶ್ರೀನಿವಾಸಪುರದ ನಿವಾಸಿಯಾಗಿ ಕೋಲಾರ ತಾಲೂಕಿನ ಮದ್ದೇರಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಲಿಖಿತ ಎಂದು ಮತ್ತು ಯುವಕನನ್ನು ಹಳೇಪೇಟೆ ನಿವಾಸಿ ಗಂಗಾಧರ ಎಂದು ಗುರುತಿಸಲಾಗಿದ್ದು ಇವನು ವೃತ್ತಿಯಲ್ಲಿ ಮರ ಕಾರ್ಪೇಂಟರ್ ಕೆಲಸ ಮಾಡುತ್ತಿದ್ದು ಇಬ್ಬರು ಶ್ರೀನಿವಾಸಪುರ ಪಟ್ಟಣದ ಹಳೇಪೇಟೆ ನಿವಾಸಿಗಳು ಎಂದಿರುತ್ತಾರೆ.
ಮದುವೆಯಾಗುವುದಾಗಿ ನಂಬಿಸಿ ಕರೆತಂದಿದ್ದ!
ಯುವಕ ಸುಮಾರು 25 ವರ್ಷದ ಗಂಗಾಧರ ಅಪ್ರಾಪ್ತ ಯುವತಿ ಲಿಖಿತಳ ಕುಟುಂಬಕ್ಕೆ ಪರಿಚಿತನಾಗಿದ್ದು ಹಲವಾರು ದಿನಗಳಿಂದ ಲಿಖಿತಳನ್ನು ಪ್ರಿತಿಸುತ್ತಿದ್ದನಂತೆ ಇದಕ್ಕೆ ಯುವತಿಯ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿ ಮಗಳನ್ನು ರಕ್ಷಿಸಿಕೊಳ್ಳಲು ಕೋಲಾರ ತಾಲೂಕು ಮದ್ದೇರಿ ಗ್ರಾಮದಲ್ಲಿ ಸಂಬಂಧಿಕರ ಮನೆಯಲ್ಲಿ ಬಿಟ್ಟು ಒದಿಸುತ್ತಿದ್ದರಂತೆ.
ಇಂದು ಸೋಮವಾರ ಗಂಗಾಧರ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಕರೆದುಕೊಂಡು ಬಂದಿರುತ್ತಾನೆ ಬರುವಾಗ ಯುವತಿಯನ್ನು ಕರೆ ತಂದಿರುವುದಾಗಿ ಯುವತಿ ಕುಟುಂಬಕ್ಕೆ ತಿಳಿಸಿದ್ದಾನೆ ಇದಕ್ಕೆ ಆಕೆಯ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ದಾರಿ ಮದ್ಯೆ ಮಾವಿನ ತೋಪಿಗೆ ಹೋಗಿ ನೇಣಿಗೆ ಶರಣಾಗಿರಬಹುದು ಎನ್ನಲಾಗಿದೆ.
ಈ ಬಗ್ಗೆ ಶ್ರೀನಿವಾಸಪುರ ಇನ್ಸಪೇಕ್ಟರ್ ರವಿಕುಮಾರ್ ಸ್ಥಳಕ್ಕೆ ಭೇಟಿ ಪರಶೀಲನೆ ನಡೆಸಿದ್ದು ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.