ನ್ಯೂಜ್ ಡೆಸ್ಕ್:- ಹೊನ್ನಾಳಿಯ ವಿಧಾನ ಸಭಾ ಕ್ಷೇತ್ರದಲ್ಲಿ ಕೊರೋನಾ ಓಡಿಸಲು ಶಾಸಕ ಹಾಗು ಮುಖ್ಯ ಮಂತ್ರಿಗಳ ಕಾರ್ಯದರ್ಶಿ ಎಂಪಿ ರೇಣುಕಾಚಾರ್ಯ ಇನ್ನಿಲ್ಲದ ಸಾಹಸ ಮಾಡುತ್ತ ಮಾನವೀಯ ಕಾರ್ಯಗಳ ಮೂಲಕ ಸುದ್ದಿಯ ಮೂಂಚುಣಿಯಲ್ಲಿದ್ದಾರೆ ಅದು ಒಂದು ಎರಡಲ್ಲ ದಿನನಿತ್ಯ ಸುದ್ದಿಯಾಗುತ್ತಿದ್ದಾರೆ.
ಕೊರೋನಾ ಅರೈಕೆ ಕೇಂದ್ರದಲ್ಲಿ ಮನೋರಂಜನೆ ಕಾರ್ಯಕ್ರಮ ಆಯೋಜನೆ ಮಾಡುವುದು ಯೋಗಾಭ್ಯಾಸದ ಶಿಕ್ಷಣ ನೀಡುವುದು ಆರಕೇಸ್ಟ್ರ ಆಯೋಜಿಸಿ ಸ್ವತಃ ಡ್ಯಾನ್ಸ್ ಮಾಡಿ ಸೋಂಕಿತರನ್ನು ರಂಜಿಸಿದ್ದಾರೆ,ಮನೆಯಿಂದಲೆ ಒಬ್ಬಟ್ಟಿನ ಊಟ ಮಾಡಿಸಿ ಸೋಂಕಿತರಿಗೆ ಊಣ ಬಡಿಸಿದ್ದಾರೆ ಪೋಲಿಸರಿಗೆ ಒಳಿಗೆ ಊಟಹಾಕಿಸುತ್ತಾರೆ.
ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಕೊರೋನಾ ಸೋಂಕಿತರ ವಾರ್ಡಿನಲ್ಲಿ ಹೋಗಿ ಅಲ್ಲಿನ ಸ್ಥಿತಿಗತಿಗಳ ಪರಶೀಲನೆ ಮಾಡಿದ್ದಾರೆ, ಡ್ರೈವರ್ ಇಲ್ಲ ಎಂದು ೧೦೮ ಆಂಬುಲೆನ್ಸ್ ಚಲಾಯಿಸಿದ್ದಾರೆ,ಕೋವಿಡ್ ನಿಯಮಾವಳಿ ಪಾಲಿಸುತ್ತಿಲ್ಲ ಎಂದು ಹಳ್ಳಿಗಳಿಗೆ ಹೋಗಿ ಸಾರ್ವಜನಿಕರಿಗೆ ಕೊರೋನಾ ಸೋಂಕಿನಿಂದಾಗುವ ಅಪಾಯದ ಅರಿವು ಮೂಡಿಸುತ್ತಾರೆ ಹೀಗೆ ಹೇಳುತ್ತ ಹೋದರೆ ಒಂದಾ ಎರಡ ಹತ್ತು ಹಲವು ಕಾರ್ಯಕ್ರಮಗಳ ಮೂಲಕ ಸುದ್ದಿಯಾಗುತ್ತಿದ್ದಾರೆ ಬಹುಶಃ ಕರ್ನಾಟಕದ ಇನ್ಯಾವುದೇ ಶಾಸಕರಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಇಷ್ಟೊಂದು ಪ್ರಚಾರ ಸಿಕ್ಕಿಲ್ಲವೇನೊ ಅನ್ನಬಹುದಾಗಿದೆ. ಇದರ ನಡುವೆ ಪಕ್ಷದ ಹಾಗು ತಮ್ಮ ನಾಯಕ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ದ ಯಾರಾದರೂ ವಿರೋದಿ ಹೇಳಿಕೆ ನೀಡಿದರೆ ಅದಕ್ಕೆ ಪ್ರತಿಕ್ರಿಯೆ ನೀಡುವುದಲ್ಲದೆ ಫಿಲ್ಟರ್ ಇಲ್ಲದೆ ನೇರವಾಗಿ ತಮ್ಮದೆ ಶೈಲಿಯಲ್ಲಿ ಉತ್ತರ ನೀಡುತ್ತಾರೆ.
ಹೊನ್ನಾಳಿ-ನ್ಯಾಮತಿ ತಾಲೂಕುಗಳ ಜನರನ್ನು ಕೊರೋನಾ ಸೋಂಕಿನಿಂದ ಕಾಪಾಡಲು ಕಾಲಿಗೆ ಚಕ್ರ ಕಟ್ಟಿಕೊಂಡು ತಿರುಗಾಡುತ್ತ ಹರಸಾಹಸ ಪಡುತ್ತಿದ್ದಾರೆ.
ಸೋಮವಾರ ಸಹ ಹೊನ್ನಾಳಿಯಲ್ಲಿ ಕೊರೋನಾ ಸೋಂಕಿನಿಂದ ಮೃತ ಪಟ್ಟ ಯುವಕನ ಅಂತ್ಯಕ್ರಿಯೆ ನೇರವೇರಿಸಿ ಜನ ಮೆಚ್ಚುಗೆ ಗಳಿಸಿದ್ದಾರೆ.
ಆಂಧ್ರದ ಯುವಕನೊಬ್ಬನಿಗೆ ಕೊರೊನಾ ಸೋಂಕು ತಗುಲಿ ಹೊನ್ನಾಳಿಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿದ್ದಾನೆ.ಮೃತದೇಹವನ್ನು ಊರಿಗೆ ತೆಗೆದುಕೊಂಡು ಹೋಗಲು ಗ್ರಾಮಸ್ಥರು ಅಡ್ಡಿಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃತ ಸೋಂಕಿತನ ಅಂತ್ಯಕ್ರಿಯೆಯನ್ನು ತಾವೇ ಮುಂದೆ ನಿಂತು ಮಾಡಿಸಿ ಮಾನವೀಯತೆ ಮೆರೆದಿದ್ದಾರೆ.
ಹುಟ್ಟಿದ ಮೇಲೆ ಎಲ್ಲರೂ ಒಂದು ದಿನ ಸಾಯಲೇ ಬೇಕು. ಆದರೆ ಈ ರೀತಿಯ ಸಾವು-ನೋವುಗಳನ್ನು ತಡೆದುಕೊಳ್ಳುವುದು ಕಷ್ಟ. ರಾಜಕೀಯ ವಿರೋಧಿಗಳು ನನ್ನ ಬಗ್ಗೆ ಏನೇ ಟೀಕೆ ಮಾಡಲಿ, ನಾನು ಮಾತ್ರ ನನ್ನ ಅವಳಿ ತಾಲೂಕಿನ ಬಂಧುಗಳ ಕಷ್ಟದಲ್ಲಿ ಅವರ ಮನೆಮಗನಾಗಿ ಭಾಗಿಯಾಗುತ್ತೇನೆ. ಸರ್ವರಿಗೂ ಆಯುರಾರೋಗ್ಯ ನೀಡಿ ಈ ಸಂಕಷ್ಟದ ಸಮಯದಿಂದ ಜನರನ್ನು ಪಾರುಮಾಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಶಾಸಕರು ಬರೆದುಕೊಂಡಿರುವುದ್ದೇನು..?
ನನ್ನ ಜೀವನದಲ್ಲಿ ಸೋಮವಾರ ಸಂಜೆ ನನಗಾದಷ್ಟು ದುಃಖ ಬಹುಶಃ ಎಂದೂ ಆಗಿರಲಿಕ್ಕಿಲ್ಲ.ವಯಸ್ಸಿಗೆ ಬಂದ ಮಗನನ್ನು ಕಳೆದುಕೊಂಡ ತಂದೆ-ತಾಯಿಗಳ ದುಃಖ ಮನಕಲಕುವಂತಿತ್ತು. ಶವಸಂಸ್ಕಾರ ಮುಗಿಸಿಬಂದ ಕೆಲವು ಗಂಟೆಗಳು ಆ ತಾಯಿ ಕರುಳ ಆಕ್ರಂದನ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು. ಇದರಿಂದ ನನಗೆ ರಾತ್ರಿ ಪೂರ್ತಿ ಸರಿಯಾಗಿ ನಿದ್ದೆಯೂ ಬರಲಿಲ್ಲ. ರಾಜಕೀಯ, ಅಧಿಕಾರ, ಹಣ, ಅಂತಸ್ತು ಏನೇ ಇರಲಿ ವಿಧಿಯ ಮುಂದೆ ಎಲ್ಲವೂ ಶೂನ್ಯ ಎಂದು ನೋವಿನಿಂದ ಬರೆದುಕೊಂಡಿದ್ದಾರೆ.