ಶ್ರೀನಿವಾಸಪುರ:ಮಹಿಳೆಯರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯಲ್ಲಿ “ಶಕ್ತಿ” ಯೋಜನೆ ಅಡಿಯಲ್ಲಿ ಉಚಿತ ಪ್ರಯಾಣ ಜಾರಿಗೆ , ತಂದಿರುವುದು ಉತ್ತಮ ಕಾರ್ಯಕ್ರಮವಾಗಿದೆ ಇದನ್ನು ನಾನು ವೈಯುಕ್ತಿಕವಾಗಿ ಸ್ವಾಗತಿಸುತ್ತೇನೆ ಎಂದು ಶಾಸಕ ವೆಂಕಟಶಿವಾರೆಡ್ಡಿ
ಹೇಳಿದರು ಅವರು ಶ್ರೀನಿವಾಸಪುರ ಪಟ್ಟಣದ ಹಳೆ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಗ್ಯಾರಂಟಿಯ “ಶಕ್ತಿ” ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.
ಇದೊಂದು ಅದ್ಭುತವಾದ ಕಾರ್ಯಕ್ರಮವಾಗಿದ್ದು ದಿನನಿತ್ಯ ಒಡಾಡುವಂತ ದಿನಕೂಲಿ ಕಾರ್ಮಿಕರು ಇತರೆ ಕಾರ್ಮಿಕರು ಹಾಗು ಸಾಮನ್ಯ ಕುಟುಂಬದ ಮಹಿಳೆಯರಿಗೆ ಅನಕೂಲವಾಗುತ್ತದೆ ಎಂದ ಅವರು ಕರೋನಾ ಸಮಯದಲ್ಲಿ ಆರ್ಥಿಕ ನಿಶ್ಯಕ್ತಿಯಿಂದ ನಿಲ್ಲಿಸಿರುವಂತ ಮಾರ್ಗಗಳಲ್ಲಿ ಮತ್ತೆ ಬಸ್ಸುಗಳನ್ನು ಒಡಿಸುವಂತೆ ರಾಜ್ಯ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡಲು ವಿನಂತಿ
ಹಲವಾರು ಯೋಜನೆಗಳನ್ನು ಜಾರಿಗೆ ತಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಸಾಮಾನ್ಯರ ಸಮಸ್ಯೆಗಳನ್ನು ಅರಿತವರು ಅವರು ದೊಡ್ಡ ಮನಸ್ಸು ಮಾಡಿ ಮಹಿಳಾ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಯೋಜನೆ ಜಾರಿಗೆ ತರುವ ಮೂಲಕ ಸಾಮಾನ್ಯ ಕುಟುಂಬದ ಮಹಿಳೆಯರು ಸಹಕಾರ ಸಂಘಗಳಲ್ಲಿ ಮಾಡಿರುವಂತ ಸಾಲ ಮನ್ನ ಮಾಡುವ ಮೂಲಕ ಸಾಮನ್ಯ ಕುಟುಂಬದ ವಿಶೇಷವಾಗಿ ಗ್ರಾಮೀಣ ಮಹಿಳೆಯರ ಆರ್ಥಿಕತೆಗೆ ಜೀವ ತುಂಬುವಂತ ಕೆಲಸಮಾಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರೆಗೆ ವೇದಿಕೆ ಮೂಲಕ ಮನವಿ ಮಾಡಿದರು ಸಿದ್ದರಾಮಯ್ಯನವರು ಚುನಾವಣೆಗೂ ಮುನ್ನಾ ಕೋಲಾರದ ವೇಮಗಲ್ ಸಾರ್ವಜನಿಕ ಸಮಾರಂಭದಲ್ಲಿ ಮಹಿಳೆಯರಿಗೆ ಮಾತು ಕೊಟ್ಟಿದ್ದರು ಅದರಂತೆ ಸ್ತ್ರೀ ಶಕ್ತಿ ಸಂಘಗಳ ಸಾಲಮನ್ನಾ ಮಾಡುವಂತೆ ಕೋರಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಶೀರಿನ್ ತಾಜ್,ಸಾರಿಗೆ ಸಂಸ್ಥೆ ಶ್ರೀನಿವಾಸಪುರ ಘಟಕದ ವ್ಯವಸ್ಥಾಪಕ ವೆಂಕಟೇಶ್, ಸೂಪರ್ ವೈಸರ್ ಲಕ್ಷ್ಮೀ,ಸಹಾಯಕ ಸಂಚಾರಕ ರಾಮಚಂದ್ರಪ್ಪ,ರೋಣೂರು ಮಂಜುನಾಥ್,ನಾರಯಣಸ್ವಾಮಿ,ಪುರಸಭೆ ಸದಸ್ಯ ಅನಂದಗೌಡ,ಶೇಷಾಪುರ ಡಾ.ಗೋಪಾಲ್,ಅಂಬೇಡ್ಕರ್ ಪಾಳ್ಯ ರವಿ,ಕಿಸಾನ್ ಏಜಾಜ್,ಟೀಚರ್ ಪದ್ಮ ಮುಂತಾದವರು ಇದ್ದರು.