ಶ್ರೀನಿವಾಸಪುರ:ಶ್ರೀನಿವಾಸಪುರ ಬಿಜೆಪಿ ಕಾರ್ಯಕರ್ತರೊಂದಿಗೆ ಪ್ರಧಾನಿ ಮೋದಿ ಮಾತುಕತೆ ನಡೆಸಿರುತ್ತಾರೆ ಕೋಲಾರಕ್ಕೆ ಚುನಾವಣೆ ಪ್ರಚಾರಕ್ಕೆಂದು ಪ್ರಧಾನಿ ಮೋದಿ ಆಗಮಿಸಿದ್ದು ಈ ಸಂದರ್ಭದಲ್ಲಿ ಮೋದಿ ಬಿಜೆಪಿ ಪಕ್ಷದ ಕಾರ್ಯಕರ್ತರನ್ನು ಮಾತನಾಡಿ ಹುರುದುಂಬಿಸಿದ್ದಾರೆ.
ನಲ್ಲಪಲ್ಲಿರೆಡ್ಡಪ್ಪ,ರೋಣೂರು ಚಂದ್ರು,ನಾಗದೇನಹಳ್ಳಿ ಚಂದ್ರು,ಪುರಸಭೆ ಸದಸ್ಯ ರಾಮಂಜಿ,ರಾಜು,ವೆಂಕಟೇಗೌಡ, ಜೆಸಿಬಿ ಆಶೋಕ್,ಸೇರಿದಂತೆ ಸುಮಾರು ಹನ್ನೊಂದು ಮಂದಿಗೆ ಪ್ರಧಾನಿಯವರೊಂದಿಗೆ ಭೇಟಿಗೆ ಅವಕಾಶ ಕಲ್ಪಿಸಲಾಗಿದ್ದು ಇದರಲ್ಲಿ ಒಂದಿಬ್ಬರು ಕೋವಿಡ್ ಲಸಿಕೆ ಪಡೆದಂತ ದಾಖಲೆ ಇಲ್ಲದ ಕಾರಣ ಭೇಟಿಗೆ ನಿರಾಕರಿಸಲಾಗಿದೆ ಎಂದು ಹೇಳಲಾಗಿದೆ.
ಇನ್ನೂ ಸಂಭ್ರದಲ್ಲಿರುವ ಕಾರ್ಯಕರ್ತರು
ಮೋದಿ ಭೇಟಿಯಾಗಿ ಮೂರನಾಲ್ಕು ದಿನಗಳು ಕಳೆದರು ಕಾರ್ಯಕರ್ತರಲ್ಲಿನ ಸಂಭ್ರಮ ಇನ್ನೂ ಮರೆಮಾಚಿಲ್ಲ ಈ ಬಗ್ಗೆ ರಾಮಾಂಜಿ ಹೇಳೀದ್ದೇನು ಎಂದರೆ ನಾವು ಇಲ್ಲಿ ಏನೇ ಆಗಿದ್ದರು ಪಕ್ಷದಲ್ಲಿ ಸಾಮನ್ಯ ಕಾರ್ಯಕರ್ತ ಪ್ರಧಾನಿ ಮೋದಿ ವಿಶ್ವನಾಯಕ ಅವರು ನಮ್ಮೊಂದಿಗೆ ಸಂವಾದ ನಡೆಸುವುದು ಎಂದರೆ ನಮ್ಮ ಕೈ ಮುಗಿಲು ಮುಟ್ಟಿದಂತೆ ಎಂದು ಬಣ್ಣಿಸುತ್ತಾರೆ.