ನೂಜ್ ಡೆಸ್ಕ್:ಮೇಘಸ್ಪೋಟದ ಮಳೆಯಿಂದಾಗಿ ಗುಜರಾತ್ ರಾಜ್ಯ ತತ್ತರಿಸಿದೆ ಜನಜೀವನ ಅಸ್ತವ್ಯಸ್ತವಾಗಿದ್ದು ಸುಮಾರು ಮೂವತ್ತು ಮಂದಿ ಕಣ್ಮರೆಯಾಗಿದ್ದು ಹಲವರು ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಗುಜರಾತ್ನ ಅನೇಕ ಭಾಗದಲ್ಲಿ ಭಾರೀ ಮಳೆ ಆಗುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಅಲ್ಲದೆ, ಮುಂದಿನ ಎರಡು ದಿನ ಕೂಡ ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಪ್ರಮಾಣದ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಗುಜಾರತ್ನ ನವಸಾರಿ ಮತ್ತು ವಲ್ಸದ್ ಜಿಲ್ಲೆಗಳಲ್ಲಿ ತಗ್ಗು ಪ್ರದೇಶದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗುತ್ತದೆ 18 ಸಾವಿರಕ್ಕೂ ಅಧಿಕ ಮಂದಿಯನ್ನು ಪ್ರವಾಹ ಪೀಡಿತ ಸ್ಥಳದಿಂದ ಸುರಕ್ಷಿತ ತಾಣಕ್ಕೆ ರವಾನಿಸಲಾಗಿದ್ದು, ಸುಮಾರು 11 ಜಿಲ್ಲೆಗಳಲ್ಲಿ ವರುಣನ ಅಬ್ಬರ ಮುಂದುವರಿಯುವ ಲಕ್ಷಣ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.ಊರುಗಳಲ್ಲಿ ನೀರು ನುಗ್ಗಿದ್ದು ರಸ್ತೆಗಳು ನದಿ ನಾಲೆಗಳಂತಾಗಿದೆ
ಮೋರ್ಬಿ, ವಡೋದರಾ, ಭರೂಚ್, ಜಾಮ್ ನಗರ, ಅರಾವಳಿ, ಪಂಚಮಹಲ್, ದ್ವಾರಕಾ ಮತ್ತು ದಂಗ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.ಆನಂದ್ ಜಿಲ್ಲೆಯಲ್ಲಿ ಆರು, ಅಹಮದಾಬಾದ್ನಲ್ಲಿ ನಾಲ್ಕು, ಗಾಂಧಿನಗರ, ಖೇಡಾ, ಮಹಿಸಾಗರ್, ದಾಹೋದ್ ಮತ್ತು ಸುರೇಂದ್ರನಗರ ಜಿಲ್ಲೆಗಳಲ್ಲಿ ತಲಾ ಇಬ್ಬರು ಮೃತಪಟ್ಟಿದ್ದಾರೆ ಎಂದು ಗುಜರಾತ್ ಸರ್ಕಾರ ಮಾಹಿತಿ ನೀಡಿದೆ.
ಮೃತರ ಪೈಕಿ ಏಳು ಜನರು ಮೋರ್ಬಿ ಜಿಲ್ಲೆಯ ಧವಾನಾ ಗ್ರಾಮದ ಬಳಿ ಉಕ್ಕಿ ಹರಿಯುತ್ತಿದ್ದ ಕ್ರಾಸ್ವೇ ದಾಟುತ್ತಿದ್ದಾಗ ಅವರು ಪ್ರಯಾಣಿಸುತ್ತಿದ್ದ ಟ್ರ್ಯಾಕ್ಟರ್ ಟ್ರಾಲಿ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.ಗುರುವಾರ ಗುಜರಾತ್ನಾದ್ಯಂತ 11 ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಮತ್ತು 22 ಜಿಲ್ಲೆಗಳಿಗೆ ಹಳದಿ ಅಲರ್ಟ್ ಅನ್ನು ಭಾರತೀಯ ಹವಾಮಾನ ಇಲಾಖೆ ಘೋಷಿಸಿದೆ.