ನ್ಯೂಜ್ ಡೆಸ್ಕ್:-ಕೊರೋನಾ ತಡೆಗಟ್ಟಲು ಕೋಲಾರ ಜಿಲ್ಲೆಗೆ ಸರ್ಕಾರದಿಂದ ಹೆಚ್ಚಿನ ಆದ್ಯತೆ ಬೇಕಾಗಿದೆ ಎಂದು ಸಂಸದ ಮುನಿಸ್ವಾಮಿ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು ಅವರು ಇಂದು ಬೆಂಗಳೂರಿನಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಜೊತೆಗೂಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರನ್ನು ಭೇಟಿಯಾಗಿದ್ದರು ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ ಜಿಲ್ಲೆಯಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು ಇದನ್ನು ತಡೆಯುವ ಸಲುವಾಗಿ ಜಿಲ್ಲೆಗೆ ಹೆಚ್ಚಿನ ವೈದ್ಯಕೀಯ ನೆರವು ಬೇಕಾಗಿದೆ ಎಂದು ವಿವರಿಸಿರುತ್ತಾರೆ.
ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ಆರುಸಾವಿರ ಸಾಮಾರ್ಥ್ಯದ ದ್ರವಿಕೃತ ಆಮ್ಲಜನಕದ ಟ್ಯಾಂಕ್, ತಾಲೂಕು ವಾರು ಆಸ್ಪತ್ರೆಗಳಿಗೆ ಜಂಬು ಸೈಜ್ ಸಿಲಿಂಡರ್,ಕೆ.ಜಿ.ಎಫ್ ನಲ್ಲಿ ಪುನಾರಂಭ ಮಾಡಲಾಗುತ್ತಿರುವ ಬಿ.ಜಿ.ಎಂ.ಎಲ್ ಆಸ್ಪತ್ರೆಗೆ ಆರ್ಥಿಕ ಸಹಾಯ,ಅಗತ್ಯತೆಗೆ ತಕ್ಕಷ್ಟು ರೆಮಿಡ್ ಸಿವಿರ್ ಇಂಜೆಕ್ಷನಗಳು ಸರಬರಾಜು ಮಾಡುವಂತೆ ಮನವಿ ನೀಡಿರುವುದಾಗಿ ಮತ್ತು ಸೋಂಕಿತರಿಗೆ ತಕ್ಷಣಕ್ಕೆ ನೇರವಾಗಿ ಆಕ್ಸಿಜನ್ ಮತ್ತು ವೆಂಟಿಲೇಟರ್ ಹಾಸಿಗೆಯ ಆಸ್ಪತ್ರೆ ನೆರವು ಸಿಗಲು ಕೋಲಾರ ಜಿಲ್ಲೆಗೆ ಪ್ರತ್ಯಕವಾಗಿ ಅಂತರ್ಜಾಲ ಪೊರ್ಟಲ್ ವಾರ್ ರೂಂ ಅಗತ್ಯ ಇದ್ದು ಇದಕ್ಕಾಗಿ ಸರ್ಕಾರ ಶೀಘ್ರವಾಗಿ ಗಮನ ಹರಿಸಲು ಮನವಿ ಮಾಡಿರುವುದಾಗಿ ಡಾ.ವೇಣುಗೋಪಾಲ್ ತಿಳಿಸಿದರು.