ಶ್ರೀನಿವಾಸಪುರ: ಎಸ್.ಟಿ ಸಮುದಾಯಕ್ಕೆ ಯಾವುದೇ ಪಕ್ಷಗಳವರು ನ್ಯಾಯ ಒದಗಿಸಿಲ್ಲ ಕೇವಲ ಬಿಜೆಪಿಯಿಂದ ಮಾತ್ರ ಎಸ್.ಟಿ ಸಮುದಾಯಕ್ಕೆ ನ್ಯಾಯ ಸಿಕ್ಕಿದೆ ಎಸ್.ಟಿ ಸಮುದಾಯದಕ್ಕೆ ದ್ರೌಪದಿ ಮುರ್ಮ ಅವರು ರಾಷ್ಟ್ರಪತಿ ಸ್ಥಾನ ಅಲಂಕರಿಸಲು ಬಿಜೆಪಿ ನ್ಯಾಯೋಜಿತ ನಿರ್ಣಯ ಕಾರಣವಾಗಿದೆ ಈ ಮೂಲಕ ನಿಜವಾದ ಸಾಮಾಜಿಕ ಅನುಷ್ಟಾನ ಗೊಳಿಸುತ್ತಿರುವುದು ಭಾರತೀಯ ಜನತಾ ಪಕ್ಷದ ಸರ್ಕಾರ ಎಂದು ಸಂಸದ ಮುನಿಸ್ವಾಮಿ ಹೇಳಿದರು ಈ ತಿಂಗಳ 20 ರಂದು ಬಳ್ಳಾರಿಯಲ್ಲಿ ನಡೆಯುವ ಎಸ್.ಟಿ ಸಮಾವೇಶದ ಸಂಭಂದ ಪಟ್ಟಣದ ಮಾರುತಿ ಸಭಾಭವನದಲ್ಲಿ ಬಿಜೆಪಿ ವತಿಯಿಂದ ಆಯೋಜಿಸಿದ್ದ ಪೂರ್ವಭಾವಿ ಸಭೆ ಉದ್ದೇಶಿಸಿ ಮಾತನಾಡಿದರು. ಕಾಂಗ್ರೆಸ ಪಕ್ಷ ಅಂಬೇಡ್ಕರ್ ಅವರಿಗೆ ಮೋಸ ಮಾಡಿದೆ ಅಂತಹ ಪಕ್ಷದಿಂದ ಎಸ್ಸಿ ಎಸ್ಟಿ ಸಮುದಾಯಗಳಿಗೆ ಯಾವ ನ್ಯಾಯ ನೀರಿಕ್ಷೀಸಬಹುದು ಎಂದರು.
ಭಾರತೀಯ ಜನತಾ ಪಕ್ಷ ಎಲ್ಲಾ ಸಮುದಾಗಳ ಅಭಿವೃದ್ದಿಗೆ ಶ್ರಮಿಸುತ್ತಿದೆ ಕಾಂಗ್ರೆಸ್ ನೈಪತ್ಯಕ್ಕೆ ಸರಿಯುತ್ತಿದೆ ಜೋಡೋ ಯಾತ್ರೆ ಮೂಲಕ ಹೊಸ ಅವತಾರದಲ್ಲಿ ಜನತೆ ಮುಂದೆ ಬಂದಿರುವ ಕಾಂಗ್ರೆಸ್ ಸ್ವಾತಂತ್ರ್ಯ ಪೂರ್ವದಲ್ಲಿ ದೇಶವನ್ನು ಒಡೆದು ಪಾಕಿಸ್ಥಾನ ಬಾಂಗ್ಲಾ ಸೇರಿದಂತೆ ಚಿನಾಗೂ ಭೂ ಬಾಗ ಬಿಟ್ಟುಕೊಟ್ಟ ಕಾಂಗ್ರೆಸ್ ಈಗ ಝೋಡೋ ಯಾತ್ರೆ ಮಾಡುತ್ತಿದೆ ಎಂದರು.
ಸಂಸದ ಮುನಿಸ್ವಾಮಿ ಮಾತನಾಡಿ ಶ್ರೀನಿವಾಸಪುರ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಾಲಿ ಮತ್ತು ಮಾಜಿ ಶಾಸಕರಿಗೆ ಇಬ್ಬರಿಗೂ 70 ವರ್ಷಕ್ಕೂ ಹೆಚ್ಚು ವಯಸ್ಸಾಗಿದೆ ಇಬ್ಬರನ್ನು ಒಟ್ಟಿಗೆ ಶಾಶ್ವತವಾಗಿ ಮನೆಗೆ ಕಳಿಸಿ ಯುವಕರಿಗೆ ಅವಕಾಶ ನೀಡಲು ಇಲ್ಲಿನ ಮುಂದಾಗುವಂತೆ ಮತ್ತು ಕ್ಷೇತ್ರದಲ್ಲಿ ಸುಮಾರು 35 ಸಾವಿರ ಎಸ್.ಟಿ ಸಮುದಾಯದವರು ಇದ್ದಾರೆ ಇನ್ನೂ ಎಸ್ಸಿ ಸಮುದಾಯದವರು ಸೇರಿ ತಾಲೂಕಿನಲ್ಲಿ ಹೊಸ ಇತಿಹಾಸ ಬರೆಯುವಂತೆ ಕರೆ ಇತ್ತರು.
ಬಿಜೆಪಿ ಮೆಲ್ವರ್ಗದ ಪಕ್ಷ ಅಲ್ಲ
ಸಭೆಯಲ್ಲಿ ಭಾಗವಹಿಸಿದ್ದ ಸುರುಪುರದ ಶಾಸಕ ರಾಜುಗೌಡ ಮಾತನಾಡಿ 50-60 ವರ್ಷಗಳಿಂದ ಆಡಳಿತ ನಡೆಸಿದ ಕಾಂಗ್ರೆಸ್ ಮತ್ತು ಇತರೆ ಪಕ್ಷಗಳಿಗೆ ಎಸ್.ಟಿ ಸಮುದಾಯಗಳಿಗೆ ಮೀಸಲಾತಿ ಒದಗಿಸಲು ಸಾಧ್ಯವಾಗಿಲ್ಲ ಅದನ್ನು ಮಾಡಲು ಬಿಜೆಪಿ ಸರ್ಕಾರವೆ ಬರಬೇಕಾಯಿತು ಎಂದರು. ಭಾರತೀಯ ಜನತಾ ಪಕ್ಷ ಅಂದರೆ ಮೇಲ್ವವರ್ಗದ ಜಾತಿಗಳ ಪಕ್ಷ ಎನ್ನಲಾಗುತ್ತಿತ್ತು ಆದರೆ ನೀಜವಾಗಲೂ ಹಿಂದುಳಿದ ವರ್ಗಗಳ ಸಮುದಾಯಗಳ ಅಭಿವೃದ್ದಿಗೆ ಪ್ರಾಮಾಣಿಕವಾಗಿ ನ್ಯಾಯ ಒದಗಿಸಿರುವುದು ಬಿಜೆಪಿ ಸರ್ಕಾರ, ವಾಲ್ಮೀಕಿ ಜಯಂತಿ ಘೋಷಣೆ ಮಾಡಿದ್ದು ಯಡಿಯೂರಪ್ಪ ಅಧಿಕಾರದಲ್ಲಿದ್ದಾಗ ನಂತರ ವಾಲ್ಮೀಕಿ ಜಯಂತಿಗೆ ಸರ್ಕಾರಿ ರಜೆ ಘೋಷಣೆ ಮಾಡಿದ್ದು ಬಿಜೆಪಿ ಸರ್ಕಾರ.
ಹಿಂದಿನ ಕಾಂಗ್ರೆಸ್ ಹಾಗು ಇತರೆ ಪಕ್ಷಗಳ ಅಧಿಕಾರದಲ್ಲಿದ್ದಾಗ ಎಸ್.ಟಿ ಸಮುದಾಯಗಳ ಶಾಸಕರಿಗೆ ಕೆಲಸಕ್ಕೆ ಬಾರದ ಮಂತ್ರಿ ಪದವಿಯನ್ನು ಕಾಟಾಚಾರಕ್ಕೆ ನೀಡಲಾಗುತಿತ್ತು ಆದರೆ ಬಿಜೆಪಿ ಸರ್ಕಾರದಲ್ಲಿ ಎಸ್.ಟಿ ಸಮುದಾಯಗಳ ಶಾಸಕರಿಗೆ ಉನ್ನತ ಹುದ್ದೆ ನೀಡಿದೆ ಬಾಲಚಂದ್ರಜಾರಕಿ ಹೊಳಿ ಅವರಿಗೆ ಕೆ.ಎಂ.ಎಫ್ ಅಧ್ಯಕ್ಷ ಪದವಿ,ನಾನು ಹಿಂದೆ ಕೈಗಾರಿಕ ಸಚಿವನಾಗಿದ್ದೆ ರಮೇಶ್ ಜಾರಿಕಿ ಹೊಳಿ ಅವರಿಗೆ ಬಾರಿ ನೀರಾವರಿ ಸಚಿವ ಸ್ಥಾನ ನೀಡಿದ್ದರು ಮತ್ತೆ ಸರ್ಕಾರದಲ್ಲಿ ಅವರಿಗೆ ಅವಕಾಶ ಕಲ್ಪಿಸಲಾಗುವುದು ಎಂದಂರು.
ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ವೇಣುಗೋಪಾಲ್ ಮಾತನಾಡಿ ಬಿಜೆಪಿ ಸರ್ಕಾರಗಳು ಹಲವಾರು ದಲಿತ ಸಮುದಾಯಗಳ ಅಭಿವೃದ್ದಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ದಲಿತ ಸಮುದಾಯಗಳ ಪರ ಕಾಳಜಿ ವಹಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿಮಾವು ಮಂಡಳಿ ಅಧ್ಯಕ್ಷ ವಾಸು,ತಾಲೂಕು ಬಿಜೆಪಿ ಅಧ್ಯಕ್ಷ ಆಶೋಕ್ ರೆಡ್ಡಿ, ಎಂ.ಎಲ್ಸಿ ಕೇಶವಪ್ರಸಾದ್,ಮಾಜಿ ಶಾಸಕ ವೆಂಕಟಮುನಿಯಪ್ಪ, ನಾರಯಣಸ್ವಾಮಿ, ಮುಖಂಡರಾದ ಎಸ್.ಎಲ್.ಎನ್.ಮಂಜು,ರೋಣೂರುಚಂದ್ರು,ಸಿದ್ದರಾಜು,ಕೋಳಿನಾಗರಾಜ್,ನಾಗದೇನಹಳ್ಳಿಚಂದ್ರು,ರಮೇಶ್ ರೆಡ್ಡಿ, ಪುರಸಭೆ ಸದಸ್ಯ ರಾಮಾಂಜಿ ಮುಂತಾದವರು ಇದ್ದರು.