ಶ್ರೀನಿವಾಸಪುರ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ಕೊಟ್ಟಿರುವ ದೇಶಾದ್ಯಂತ ದೇವಾಲಯ ಸಂಕೀರ್ಣಗಳಲ್ಲಿ ಸ್ವಚ್ಛತಾ ಶ್ರಮಧಾನ ಕಾರ್ಯಕ್ರಮದ ಅನ್ವಯದಂತೆ ಶ್ರೀನಿವಾಸಪುರ ತಾಲೂಕು ಬಿಜೆಪಿ ವತಿಯಿಂದ ಶನಿವಾರ ಶ್ರೀನಿವಾಸಪುರ ಪಟ್ಟಣದ ಶ್ರೀ ನಗರೇಶ್ವರ ದೇವಸ್ಥಾನ ಆವರಣದಲ್ಲಿ ಸ್ಥಳೀಯ ಬಿಜೆಪಿ ಕಾರ್ಯಕರ್ತರು ಹಾಗು ಪುರಸಭೆ ಸಿಬ್ಬಂದಿಯೊಂದಿಗೆ ಕೋಲಾರ ಸಂಸದ ಮುನಿಸ್ವಾಮಿ ಸ್ವಚ್ಚತಾ ಕಾರ್ಯಕ್ರಮಮದಲ್ಲಿ ಭಾಗವಹಿಸಿದ್ದರು, ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ ಪುರಸಭೆ ಕಾರ್ಮಿಕರನ್ನು ಗೌರವದಿಂದ ಕಾಣುವುದರೊಂದಿಗೆ ಅವರು ಸ್ವಚ್ಚವಾಗಿರಲು ಸಹಕಾರ ನೀಡಬೇಕಾದುದು ನಮ್ಮ ಕರ್ತವ್ಯ ಎಂದು ಪೌರಕಾರ್ಮಿಕರ ಪಾದ ತೊಳೆದು,ಸನ್ಮಾನಿಸಿದರು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ರೋಣೂರುಚಂದ್ರು, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಇಂದಿರಾಭನ್ ರಾಜಣ್ಣ,ಶಿವಮೂರ್ತಿ,ಲಕ್ಷ್ಮಣಗೌಡ,ಪುರಸಭೆ ಮುಖ್ಯಾಧಿಕಾರಿ ಸತ್ಯನಾರಯಣ ವ್ಯವಸ್ಥಾಪಕ ನವೀನ್ ಚಂದ್ರ,ಬಾಲಕೃಷ್ಣ,ಮಾಜಿ ಸದಸ್ಯ ರಾಮಾಂಜಿ,ಷಫಿಉಲ್ಲಾ,ದೇವಾಲಯ ಆಡಳಿತ ಮಂಡಳಿಯ ಕಪಾಲಿಶಿವು,ಕಪಾಲಿ ಮೋಹನ್,ಗೀರಿಶ್ ಮುಂತಾದವರು ಇದ್ದರು.


