ಶ್ರೀನಿವಾಸಪುರ:-ಕೊರೋನಾ ಸೋಂಕಿನಿಂದ ನಿಧನರಾದ ಇಬ್ಬರು ಪತ್ರಕರ್ತರಿಗೆ ಕೋಲಾರದ ಸಂಸದ ಮುನಿಸ್ವಾಮಿ ವೈಯುಕ್ತಿಕ ಧನ ಸಹಾಯ ಮಾಡಿರುತ್ತಾರೆ.
ಕೊರೋನಾ ಎರಡನೆ ಅಲೆಯ ಸೋಂಕಿನಿಂದ ನಿಂದ ಮೃತ ಪಟ್ಟ ಪತ್ರಕರ್ತರಾದ ಎನ್.ಎಸ್.ಮೂರ್ತಿ ಹಾಗು ಕೊಳ್ಳೂರುನಾಗೇಂದ್ರ ಅವರ ಕುಟುಂಬಗಳಿಗೆ ಕೋಲಾರದ ಸಂಸದ ಮುನಿಸ್ವಾಮಿ ತಲಾ ಐವತ್ತು ಸಾವಿರ ರೂಪಾಯಿಗಳ ಧನ ಸಹಾಯ ಮಾಡಿರುತ್ತಾರೆ.
ಕೋಲಾರದಲ್ಲಿ ನಡೆದ ಪತ್ರಕಾ ದಿನಾಚರಣೆಯಂದು ಪತ್ರಕರ್ತರ ಭವನದಲ್ಲಿ ಎನ್.ಎಸ್.ಮೂರ್ತಿ ಅವರ ಪತ್ನಿ ಅಂಬಿಕಾ ಅವರಿಗೆ ಸಂಸದ ಹಾಗು ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದತಗಡೂರು ಕೊಲಾರ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಮುನಿರಾಜು,ನಿಕಟ ಪೂರ್ವ ಅಧ್ಯಕ್ಷ ಗಣೇಶ್, ರಾಜ್ಯಕಾರ್ಯಕಾರಿಣಿ ಸದಸ್ಯ ಗೋಪಿನಾಥ್ ಪ್ರಧಾನಕಾರ್ಯದರ್ಶಿ ಚಂದ್ರಶೇಖರ್,ಖಜಾಂಜಿ ಸುರೇಶಕುಮಾರ್ ಹಸ್ತಾಂತರಿಸಿದರು.
ಕೊಳ್ಳೂರುನಾಗೇಂದ್ರ ಅವರಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ವೇಣುಗೋಪಾಲ್.ತಾಲೂಕು ಅಧ್ಯಕ್ಷ ಅಶೋಕರೆಡ್ಡಿ, ಹಿರಿಯ ಮುಖಂಡ ಅವಲಕುಪ್ಪಜಯರಾಮರೆಡ್ಡಿ,ರೋಟರಿ ಶಿವಮೂರ್ತಿ ಅವರು ಸ್ವಗೃಹಕ್ಕೆ ತೆರಳಿ ವಿತರಿಸಿದರು.