ಶ್ರೀನಿವಾಸಪುರ:ಪೌರಕಾರ್ಮಿಕರ ಸೇವೆ ಅನನ್ಯ ಅವರನ್ನು ನಾವು ಅತ್ಯಂತ ಗೌವರದಿಂದ ಕಾಣಬೇಕು ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು.ಅವರು ಶ್ರೀನಿವಾಸಪುರ ಪಟ್ಟಣದ ಪುರಸಭಾ ಸಭಾಂಗಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆಯನ್ನು ಉದ್ಘಾಟಾಸಿ ಮಾತನಾಡಿದರು,ನಾವು ವಾಸಿಸುವ ಪ್ರದೇಶ ಸ್ವಚ್ಚವಾಗಿರಲು ಪೌರಕಾರ್ಮಿಕರ ಸಲ್ಲಿಸುವ ಸೇವೆ ಶ್ಲಾಘನೀಯ ಇದನ್ನು ಸಮಾಜ ತೀವ್ರವಾಗಿ ಪರಿಗಣಿಸಿಬೇಕಿದೆ ಅವರ ಅಗತ್ಯಗಳ ಕುರಿತಾಗಿ ಜವಾಬ್ದಾರಿಯಾಗಿ ನಾವು ಚಿಂತನೆ ಮಾಡಬೇಕಿದ್ದು ಪೌರಕಾರ್ಮಿಕರಿಗೆ ನಿವೇಶನ,ವಸತಿ ಸೌಕರ್ಯ ಕಸ್ಟ-ಸುಖಗಳಿಗೆ ಸ್ಪಂದಿಸಲು ಸದಾ ಸಹಕಾರ ನೀಡಲು ಬದ್ದರಾಗಿರುವುದಾಗಿ ಹೇಳಿದರು.
ಪಟ್ಟಣದ ಅಭಿವೃದ್ಧಿಗೆ ಒತ್ತು
ಪಟ್ಟಣದ ಸರ್ವತೋಮುಖ ಅಭಿವೃದ್ದಿಗೆ ಸುಮಾರು 25 ಕೋಟಿ ರೂಗಳ ಯೋಜನೆ ಸಿದ್ದವಾಗಿದ್ದು ಉತ್ತಮರಸ್ತೆ. ಚರಂಡಿ, ಕ್ರೀಡಾಂಗಣ, ನಿವೇಶನಗಳ ಹಂಚಿಕೆ, ಕೆರೆಗೆ ನೀರುತುಂಬುವ ಕೆಲಸಗಳು ಸಧ್ಯದಲ್ಲಿ ಚಾಲನೆ ನೀಡಲಾಗುವುದು ಎಂದರು.
ಮುಖ್ಯಾಧಿಕಾರಿ ಸತ್ಯನಾರಾಯಣ ಮಾತನಾಡಿ ಪೌರಕಾರ್ಮಿಕರು ಸೂರ್ಯ ಹುಟ್ಟುವ ಮುಂಚೆ ಬೆಳಗಿನ ಜಾವ ಗಾಳಿ,ಮಳೆ,ಚಳಿ, ಲೆಕ್ಕಿಸದೆ ಜನರ ಆರೋಗ್ಯ ದೃಷ್ಠಿಯಿಂದ ಪಟ್ಟಣದ ಸ್ವಚ್ಚತೆಯಲ್ಲಿ ನಿಷ್ಕಲಂಕ ಮನಸ್ಸಿನಿಂದ ಕಾರ್ಯ ನಿರ್ವಹಿಸುತ್ತಿರುವುದರಿಂದ ನಾವು ಇವತ್ತು ನೆಮ್ಮದಿಯ ಜೀವನ ಮಾಡುತ್ತಿದ್ದೆವೆ,ಪೌರಕಾರ್ಮಿಕರ ಆರೋಗ್ಯದ ಬಗ್ಗೆ ಸಮಾಜಕ್ಕೂ ಕಾಳಜಿ ಇರಬೇಕು ಎಂದರು ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ಗಮನ ಹರಿಸಬೇಕಿದ್ದು ಸ್ವಚ್ಚತೆ ಕೆಲಸ ಮಾಡುವಾಗ ಕೈ ಕವಚ, ಮುಖಗೌಸು, ಅಗತ್ಯ ಪರಿಕರಗಳನ್ನು ಬಳಸಿ ಆರೋಗ್ಯವಾಗಿರುವಂತೆ ಸೂಚಿಸಿದ ಅವರು ಕೆಲಸದ ಜೊತೆಗೆ ನಿಮ್ಮ ಮಕ್ಕಳ ಭವಿಷ್ಯತು ರೂಪಿಸಲು ಮುಂದಾಗಿ ವಿದ್ಯಾವಂತರನ್ನಾಗಿ ಮಾಡಲು ಒತ್ತು ನೀಡುವಂತೆ ಹೇಳಿದರು.
ಡಬೇಕು, ಚುನಾಯಿತ ಪ್ರತಿನಿಧಿಗಳು ಸಹಕರಿಸಿ ಪೌರಕಾರ್ಮಿಕರನ್ನು ಗುರ್ತಿಸಿ ನಿವೇಶನ, ವಸತಿ ಸೌಕರ್ಯ ಕಲ್ಪಿಸಿಕೊಡಲು ಮನಸ್ಸು ಮಾಡಬೇಕುಎಂದರು.
ಪ್ಲಾಸ್ಟಿಕ್ ನಿಷೇಧಕ್ಕೆ ಸಹಕಾರ ನೀಡಿ
ನಿರ್ಭಂದಿತ ಪ್ಲಾಸ್ಟಿಕ್ ನಿಷೇಧಿಸಲು ಸಾರ್ವಜನಿಕರು ವ್ಯಾಪಾರಿಗಳೂ ದೃಢಮನಸ್ಸು ಮಾಡಬೇಕು, ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ಅನಾಹುತವನ್ನು ತಪ್ಪಿಸಲು ಎಚ್ಚತ್ತುಕೊಳ್ಳೊಣ ಎಂದು ತಿಳಿಸಿದರು.
ಪೌರಕಾರ್ಮಿಕರ ಕ್ರೀಡಾಕೂಟ
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ನಡೆಸಿದಂತ ವಿವಿಧ ಕ್ರೀಡಾಕೂಟಗಳ ಸ್ಪರ್ದೆಗಳಲ್ಲಿ ಭಾಗವಹಿಸಿ ವಿಜೇತರಾದ ಪೌರಕಾರ್ಮಿಕರನ್ನು ಗೌರವಿಸಿ ನೆನಪಿನ ಕಾಣಿಕೆಯನ್ನು ನೀಡಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತೂಪಲ್ಲಿ ನಾರಾಯಣಸ್ವಾಮಿ, ಪುರಸಭೆ ಉಪಾಧ್ಯಕ್ಷೆ ಅಯಿಷಾ ಸದಸ್ಯರಾದ ಉನಿಕಿಲಿ ನಾಗರಾಜ್, ಜಯಲಕ್ಷಿಸತ್ಯನಾರಯಣ್, ಆನಂದ್ ಗೌಡ, ಸಿಂಗ್, ಸುನಿತಾ, ಅನೀಸ್ ಸರ್ದಾರ್,ಡಿ.ಜೆ. ಪುರಸಭಾ ಸಿಬ್ಬಂದಿ ಆರೋಗ್ಯ ನೀರಿಕ್ಷಕ ರಮೇಶ್, ವ್ಯವಸ್ಥಾಪಕ ನವೀನ್ ಚಂದ್ರ, ಶ್ರೀನಿವಾಸ್, ಕಂದಾಯಾಧಿಕಾರಿ ಶಂಕರ್,ನಾರಯಣಸ್ವಾಮಿ,ಪ್ರತಾಪ್,ಸುರೇಶ್,ಸಂತೋಷ್,ಶಿವು ಮುಂತಾದವರು ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುಂಚಿತವಾಗಿ ಪೌರಕಾರ್ಮಿಕರು ಪಟ್ಟಣದಲ್ಲಿ ಮೆರವಣಿಗೆ ನಡೆಸಿ ಸ್ವಚ್ಚತೆಯಲ್ಲಿ ಸಹಕಾರ ನೀಡಿ ಎಂದು ಸಾರ್ವಜನಿಕರಿಗೆ ಅರಿವು ಮೂಡಿಸಿದರು ಈ ಕಾರ್ಯಕ್ರಮದಲ್ಲಿ ಕಾರ್ಮಿಕರೊಂದಿಗೆ ಪುರಸಭೆ ಸದಸ್ಯರೂ ಜೊತೆಗೂಡಿದ್ದರು.