ನ್ಯೂಜ್ ಡೆಸ್ಕ್:ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಫಲಿತಾಂಶ ಪ್ರಕಟವಾಗಿ ಒಂದು ವಾರವಾಗುತ್ತಿದೆ ಮಹಾಯುತಿ ಕೂಟ ಭರ್ಜರಿ ಗೆಲುವು ಸಾಧಿಸಿದರು ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿಯೇ ಉಳಿದಿದೆ.
ಮಹಾರಾಷ್ಟ್ರ ನಿಯೋಜಿತ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಬಿಜೆಪಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಡಲು ಮುಂದಾಗಿದ್ದರು ಮುಖ್ಯಮಂತ್ರಿ ಸ್ಥಾನ ಕಗ್ಗಾಂಟಾಗಿದೆ 288 ಸದಸ್ಯ ಬಲದ ರಾಜ್ಯ ವಿಧಾನಸಭೆಯಲ್ಲಿ ಮಹಾಯುತಿ ಕೂಟ 230 ಸ್ಥಾನಗಳನ್ನು ಗೆದ್ದ ನಂತರ ಅಧಿಕಾರ ಹಂಚಿಕೆ ಕುರಿತು ಚರ್ಚಿಸಲು ಶಿಂಧೆ, ದೇವೇಂದ್ರ ಫಡ್ನವಿಸ್ ಮತ್ತು ಅಜಿತ್ ಪವಾರ್ ಅವರು ದೆಹಲಿಯಲ್ಲಿ ಅಮಿ ಶಾ ಅವರನ್ನು ಭೇಟಿ ಮಾಡಿದ್ದರು ಶಾ ಅವರ ಸೂತ್ರಗಳು ಕೆಲಸ ಮಾಡಿತ್ತಿಲ್ಲ ಎನ್ನಲಾಗುತ್ತಿದೆ.
ತಮ್ಮ ನಾಯಕತ್ವದಲ್ಲಿ ವಿಧಾನಸಭಾ ಚುನಾವಣೆ ನಡೆದಿದ್ದರಿಂದ ಮಹಿಳಾ ಮತದಾರರು, ಮರಾಠರು ಮತ್ತು ಒಬಿಸಿಗಳು,ಲಾಡ್ಲಿ ಬಹೆನಾ ಯೋಜನೆ, ಮೀಸಲಾತಿ ನಿರ್ಧಾರ ಮತ್ತು ವಿವಿಧ ಸಮುದಾಯಗಳಿಗೆ ಸ್ಥಾಪಿಸಲಾದ ಸಹಕಾರ ಮಂಡಳಿಗಳಿಂದಾಗಿ ಮಹಾಯುತಿಗೆ ಮತ ಹಾಕಿದ್ದಾರೆ ಎಂದು ಶಿಂಧೆ ಅಮಿತ್ ಶಾ ಅವರಿಗೆ ವಿವರಣೆ ಕೊಟ್ಟಿದ್ದಾರೆ ಎಂದು ಮೂಲಗಳು ಹೇಳಿವೆ.
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ನಾನೆ ಎಂಬ ನಿರೀಕ್ಷೆಯೊಂದಿಗೆ ಜನ ಮತ ಹಾಕಿದ್ದಾರೆ ಎಂದು ಶಿಂಧೆ ಹೇಳಿದ್ದಾರೆ. ಅಲ್ಲದೆ ಒಂದು ವೇಳೆ ತಮ್ಮನ್ನು ಮುಖ್ಯಮಂತ್ರಿಯನ್ನಾಗಿ ಮಾಡದಿದ್ದರೆ, ಸಮಾಜದ ಈ ವರ್ಗಗಳಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ದೇವೇಂದ್ರ ಫಡ್ನವಿಸ್ ಆಯ್ಕೆ ಕುರಿತಾಗಿ ಏಕನಾಥ್ ಶಿಂದೆ ಮಾರ್ಮಿಕವಾಗಿ ತಿಳಿಸಿದ್ದಾರಂತೆ.
ಇದೆ ವೇಳೆ ಮುಖ್ಯಮಂತ್ರಿ ಸ್ಥಾನಕ್ಕೆ ಹೊಸ ಹೆಸರು ತೆರೆಯ ಮೇಲೆ ತೇಲಿ ಬರುತ್ತಿದೆ ಸಮಾಜಿಕ ಜಾಲ ತಾಣಗಳಲ್ಲಿ ಕೇಳಿ ಬರುತ್ತಿರುವ ಹೊಸ ಹೆಸರು ಪುಣೆ ನಗರದ ಮಾಜಿ ಮೇಯರ್ ಹಾಗು ಹಾಲಿ ಕೇಂದ್ರ ಸರ್ಕಾರದ ಕೇಂದ್ರ ನಾಗರಿಕ ವಿಮಾನಯಾನ ಮತ್ತು ಸಹಕಾರ ರಾಜ್ಯ ಸಚಿವ ಮುರಳೀಧರ್ ಮೊಹೋಲ್ ಅವರನ್ನು ನೇಮಕ ಮಾಡಲಿದೆ ಎಂಬ ಊಹಾಪೋಹಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ,ಮುರಳಿಧರ್ ಮೊಹೋಲ್ ನಲವತ್ತರ ಹರೆಯದ ಅಪ್ಪಟ ಸಂಘಪರಿವಾರದ ಕಟ್ಟಾಳು, ಮೂಲತಃ ಕುಸ್ತಿ ಪಟುವಾಗಿದ್ದ ಅವರು ಮರಾಠ ಸಮಾಜದವರಾಗಿದ್ದು2002 ರಲ್ಲಿ ಪುಣೆ ನಗರದ ಕಾರ್ಪೋರೇಷನ್ ಸದಸ್ಯರಾಗಿ ರಾಜಕೀಯ ಜೀವನಕ್ಕೆ ಬರುತ್ತಾರೆ 2009 ಅಸೆಂಬ್ಲಿ ಚುನಾವಣೆಗೆ ನಿಂತು ಸೋಲುತ್ತಾರೆ ನಂತರ 2017 ರಲ್ಲಿ ಪುಣೆ ನಗರದ ಕಾರ್ಪೋರೇಟರ್ ಅಗಿ ಅಯ್ಕೆಯಾಗುತ್ತಾರೆ,2019 ಪುಣೆ ಮಹಾನಗರದ ಮೇಯರ್ ಆಗಿ ಅಯ್ಕೆಯಾಗುತ್ತಾರೆ, 2024 ರಲ್ಲಿ ಲೋಕಸಭೆ ಚುನಾವಣೆಯಲ್ಲಿ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ವಿರುದುಉ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದು ಗೆಲ್ಲುತ್ತಾರೆ ಅವರ ರಾಜಕೀಯ ಚಾಕಚಕ್ಯತೆ ನೋಡಿದ ಬಿಜೆಪಿ ಹೈಕಮಾಂಡ ಮೊದಲ ಗೆಲುವಿನಲ್ಲೆ ಎರಡೇರಡು ಮಂತ್ರಿ ಸ್ಥಾನ ನೀಡುತ್ತಾರೆ ಹಾಗಾಗಿ ದೇವೇಂದ್ರ ಫಡ್ನವಿಸ್ ಬದಲಿಗೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಉನ್ನತ ನಾಯಕತ್ವವು ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿಯಾಗಿ ಮುರಳಿಧರ್ ಮೊಹೋಲ್ ಅವರನ್ನು ಆರಿಸಬಹುದು ಎನ್ನುವ ಮಾತು ಕೇಳಿಬರುತ್ತಿದೆ .