- ಪ್ರಶ್ನಿಸುವ ಜನ ಇದ್ದ
- ಚಳುವಳಿಗಳ ತವರೂರು
- ಕೋಲಾರ ಜಿಲ್ಲೆಗೆನಾಗಿದೆ
ಕೋಲಾರ:ಇದೇನು ಹೀಗಾಗ್ತಾ ಇದೆ ಕೋಲಾರದ ಆಡಳಿತ ವ್ಯವಸ್ಥೆ.ಎತ್ತ ಸಾಗುತಿದೆ ಕೋಲಾರದ ಸಂಸ್ಕಾರ, ಹಾಡು ಹಗಲೇ ಕಚೇರಿಯಲ್ಲಿ ಬಾಡೂಟದ ಪಾರಾಯಣ,ಕೆಲಸದ ಹೊತ್ತಿನಲ್ಲೇ ಬರ್ತಡೇ ಸೆಲಬರೇಷನ್,ಏನಾಗಿದೆ ಜಿಲ್ಲಾಡಳಿತಕ್ಕೆ ಎಂಬ ಸಾಲು ಸಾಲು ಪ್ರಶ್ನೆಗಳು ಜನರಿಂದ ಕೇಳಿಬರುತ್ತಿದೆ.
ಪ್ರಶ್ನೆ ಮಾಡುತ್ತಿದ್ದ ಚಳುವಳಿಗಳ ತವರೂರು ಕೋಲಾರದಲ್ಲಿ ಆಡಳಿತ ಕುಸಿದು ಬಿದ್ದಿದಿಯಾ ವ್ಯವಸ್ಥೆ ಬಗ್ಗೆ ಯಾಕಿಷ್ಟು ಹಳಿ ತಪ್ಪುತ್ತಿದೆ ಯಾರಿಗೂ ಬೇಡವಾಯಿತ ಕೋಲಾರ ಜಿಲ್ಲೆ!
ಸರ್ಕಾರಿ ಕಚೇರಿಗಳಲ್ಲಿ ಹುಟ್ಟುಹಬ್ಬ ಆಚರಣೆ ಮಾಡಬಾರದು ಎಂದು ಸರ್ಕಾರದ ಆದೇಶ ಇದ್ದರೂ ಕೋಲಾರ ಜಿಲ್ಲೆಯಲ್ಲಿ ನಿಯಮ ಉಲ್ಲಂಘನೆಯಾಗುತ್ತಿದಿಯಾ? ಇದರ ಜೊತೆಗೆ ಸರ್ಕಾರಿ ಕಚೇರಿ ಎಂಬುದನ್ನು ಮರೆತು ಗ್ರಾಮ ಪಂಚಾಯಿತಿ ಕಚೇರಿಯಲ್ಲೆ ಬಾಡೂಟದ ಪಾರಾಯಣ ಹೊರಗೆ ಸಂವಿಧಾನ ಬದ್ದ ರಾಷ್ಟ್ರ ಲಾಂಚನದ ತ್ರಿವವರ್ಣ ಧ್ವಜ ಹಾರಾಟ ಪಂಚಾಯಿತಿ ಕಚೇರಿಯ ಒಳಗೆ ಭರ್ಜರಿ ಬಾಡೂಟ ಸವಿಧ ಅಧಿಕಾರಿಗಳು ನೌಕರರು.
ಸರ್ಕಾರಿ ಕಚೇರಿಯಲ್ಲಿ ಕೆಕ್ ಕತ್ತರಿಸಿ ಸಂಭ್ರಮ
ಕೋಲಾರ ನಗರದ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೌಕರ ಹರೀಶ್ ಅವರ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ ಕೆಲಸದ ಅವಧಿಯಲ್ಲಿ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಮಾಡುವುದನ್ನು ಪಕ್ಕಕ್ಕಿಟ್ಟು ಕೇಕ್ ಕತ್ತರಿಸಿಕೊಂಡು ಜನುಮದಿನವನ್ನು ಸಂಭ್ರಮಿಸುತ್ತಿದ್ದಾರೆಂದು ಸಾರ್ವಜನಿಕವಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ಹಿರಿಯ ಉಪನೋಂದಣಾಧಿಕಾರಿ ಪ್ರಸಾದ್ಕುಮಾರ್, ಸಾರ್ವಜನಿಕರಿಗೆ ತೊಂದರೆ ಆಗದಂತೆ ಕಚೇರಿಯ ಕೆಲಸ ಮುಗಿದ ಬಳಿಕವೇ ಆಚರಣೆ ಮಾಡಿಕೊಳ್ಳಲಾಗಿದೆ ಎಂದು ಹೇಳಿ ತಿಪ್ಪೆ ಸಾರಿಸಿದ್ದಾರೆ.
ಗ್ರಾಮ ಪಂಚಾಯಿತಿ ಕಚೇರಿಲ್ಲಿ ಬಾಡೂಟ
ಇದರ ಬೆನ್ನಲ್ಲೆ ಕೋಲಾರ ತಾಲೂಕಿನ ತೊಟ್ಲಿ ಗ್ರಾಪಂ ಕಚೇರಿಯಲ್ಲೂ ಬಾಡೂಟದ ವ್ಯವಸ್ಥೆ ಮಾಡಿರುವ ಫೋಟೋಗಳು ವೈರಲ್ ಆಗಿವೆ. ಬುಧವಾರ ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆ ಆಯೋಜಿಸಲಾಗಿತ್ತು. ಮಧ್ಯಾಹ್ನ ಭರ್ಜರಿ ಬಾಡೂಟದ ವ್ಯವಸ್ಥೆ ಮಾಡಲಾಗಿದೆ. ಗ್ರಾಪಂ ಆಡಳಿತ ಮಂಡಳಿ, ಅಧಿಕಾರಿ, ಸಿಬ್ಬಂದಿ ವರ್ಗವು ಊಟ ಸವಿದು ನಾವು ತಿಂದಿರುವುದಕ್ಕೆ ಸಾಕ್ಷಿ ಇರಲಿ ಎಂದು ಕಚೇರಿ ಎದುರು ಎಂಜಿಲ ಪ್ಲೇಟ್ ಗಳನ್ನು ಬಿಸಾಡಿದ್ದಾರೆ.
ಜಿಲ್ಲೆಯ ಕೆಲ ಸರ್ಕಾರಿ ಕಚೇರಿಗಳಲ್ಲಿನ ಅಧಿಕಾರಿ ವರ್ಗ ಮತ್ತು ಸಿಬ್ಬಂದಿವರ್ಗ ತಾವು ನಡೆದದ್ದೆ ದಾರಿ ಎನ್ನುವ ರಿತಿಯಲ್ಲಿ ವರ್ತಿಸುವ ಮಟ್ಟಕ್ಕೆ ತಲುಪಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಹಲವಾರು ಗ್ರಾಮಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕನಿಷ್ಟ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮುತುವರ್ಜಿ ವಹಿಸದ ಅಧಿಕಾರಿಗಳು ಜನಪ್ರತಿನಿಧಿಗಳು ಕಚೇರಿಗೆ ಬಂದದಕ್ಕೆ ಹೋಗಿದಕ್ಕೆ ಸಭೆ ಮಾಡಿದಕ್ಕೆ ದಾಖಲೆ ಇರಲಿ ಎಂಬಂತೆ ಗ್ರಾಪಂ ಕಚೇರಿಯಲ್ಲಿ ಬಾಡೂಟ ಸವಿಯೂವುದು ತಿಂದ ತಟ್ಟೆಗಳನ್ನು ಕಚೇರಿ ಮುಂದೆ ಎಸೆಯುವುದು ಹೇಗೆಲ್ಲಾ ಮೆರೆಯುತ್ತಾರೆ ಅಲ್ವಾ?
ಏನ್ರಿ ಇದು ದರ್ಬಾರ್ ಬಹುತೇಕ ಗ್ರಾಮಗಳಲ್ಲಿ ಬೀದಿದೀಪ ಅಳವಡಿಸಿಲ್ಲ ಈ ಬಗ್ಗೆ ಗ್ರಾಮಸ್ಥರ ಮನವಿ ಆಲಿಸುವರೆ ಇಲ್ಲ ಆದರೆನಂತೆ ಇತ್ತ ಸಭೆ ಮಾಡಿ ಕೋಲಾರದಿಂದ ಭರ್ಜರಿ ಬಾಡೂಟ ತರಿಸಿ ತಿಂದು ತೇಗಲು ಹಣ ಇರುತ್ತದೆ. ಜನಸಾಮಾನ್ಯನು ಓಡಾಡುವ ರಸ್ತೆಯಲ್ಲಿ ದೀಪ ಹಾಕಲು ಕಾಂಛಣ ಇರುವುದಿಲ್ಲ ಇದು ನಮ್ಮ ಆಡಳಿತ ಎಲ್ಲಿಗೆ ಬಂದು ತಲುಪಿದೆ ನೋಡಿ ಗ್ರಾಮ ಸ್ವರಾಜ್ಯ.
ಸ್ವಾತಂತ್ರ ಬಂದು ಎಪ್ಪತ್ತೈದು ವರ್ಷ ಕಳೆದರು ಇನ್ನೂ ಹಳ್ಳಿಗಳು ಉದ್ಧಾರವಾಗಿಲ್ಲ. ಸರಕಾರದ ಯೋಜನೆಗಳು ಹಳ್ಳಿಗಳಿಗೆ ತಲಪುತ್ತಿಲ್ಲ.ಗಾಂಧೀಜಿ ಕಂಡ ಕನಸನ್ನು ನನಸಾಗಲು ಹೇಗೆ ಸಾಧ್ಯ? ಗ್ರಾಮ ಪಂಚಾಯಿತಿಗಳ ಆಡಳಿತವನ್ನು ಸರಿದಾರಿಗೆ ತರಬೇಕಿದೆ.ಇದು ಸಾಧ್ಯವಾದರೆ ಮಾತ್ರ ಜನಸಾಮಾನ್ಯನ ಬದುಕು ಹಸನಾಗುತ್ತದೆ. ಇನ್ನಾದರೂ ಜಿಲ್ಲಾಡಳಿತ ಗಮನಹರಿಸಿ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕೆನ್ನುವುದು ಸಾರ್ವಜನಿಕರು ಹೇಳುವ ಮಾತು.