ನ್ಯೂಜ್ ಡೆಸ್ಕ್:ರಾಜಕೀಯ ಮುಖಂಡನಾಗಿ ಹೊರಹೊಮ್ಮಿರುವ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್, ಚುನಾವಣೆಗೆ ಸಲಹೆಗಾರನಾಗಿ ಫೀಜು ನೂರು ಕೋಟಿ ತೆಗೆದುಕೊಳ್ಳುತ್ತೆನೆ ಎಂದು ಹೇಳಿದ್ದಾರೆ.ಪ್ರಶಾಂತ್ ಕಿಶೋರ್ ಅವರ ಶುಲ್ಕದ ಬಗ್ಗೆ ಇದುವರೆಗೆ ಯಾರಿಗೂ ಸ್ಪಷ್ಟತೆ ಇಲ್ಲ. ಅವರ ಸೇವೆಯನ್ನು ತೆಗೆದುಕೊಂಡ ರಾಜಕೀಯ ಪಕ್ಷಗಳು ಈ ಬಗ್ಗೆ ಸ್ಪಷ್ಟವಾಗಿ ಘೋಷಿಸಿಲ್ಲ ಅವರು ಸ್ಥಾಪಿಸಿದ ಐ-ಪ್ಯಾಕ್ ಸಂಸ್ಥೆ ಕೂಡ ಹೇಳಲಿಲ್ಲ. ಆದರೆ ಅವರು ತುಂಬಾ ದುಬಾರಿ ತಂತ್ರಜ್ಞ ಎಂಬುದು ಎಲ್ಲರಿಗೂ ಗೊತ್ತು, ಈಗ ಅವರೆ ಹೇಳಿರುವಂತೆ ಅವರ ಸಲಹೆ ಮೌಲ್ಯ 100 ಕೋಟಿ ಎಂದು ಘೋಷಿಸಿದ್ದಾರೆ.
ಒಂದು ಪಕ್ಷಕ್ಕೆ ದುಡಿದರೆ ಎರಡು ವರ್ಷಗಳ ಕಾಲ ಪ್ರಚಾರದ ತಂತ್ರಗಾರಿಕೆಗೆ ಹಣ ಸರಿಹೋಗುತ್ತದೆ ಎನ್ನುತ್ತಾರೆ.ವಿವಿಧ ರಾಜ್ಯಗಳಲ್ಲಿ ಹತ್ತು ಸರ್ಕಾರಗಳು ನನ್ನ ಕಾರ್ಯತಂತ್ರಗಳ ಮೇಲೆ ಅಧಿಕಾರ ನದೆಸುತ್ತಿದೆ ಎನ್ನುತ್ತಾರೆ.
ಪ್ರಶಾಂತ್ ಕಿಶೋರ್ ದೇಶದ ನಂಬರ್ ಒನ್ ರಾಜಕೀಯ ರಣ ತಂತ್ರಗಾರ ಎನ್ನುವ ಬಗ್ಗೆ ಸಂದೇಹವಿಲ್ಲ. ಬಂಗಾಳ ಮತ್ತು ತಮಿಳುನಾಡಿನಲ್ಲಿ ಟಿಎಂಸಿ ಮತ್ತು ಡಿಎಂಕೆಗಾಗಿ ಕೆಲಸ ಮಾಡಿದ ನಂತರ ಅವರು ರಾಜಕೀಯಕ್ಕೆ ಹೋದರು. ಅವರೆ ಸ್ಥಾಪಿಸಿದ್ದ ಐ ಪ್ಯಾಕ್ ಸಂಸ್ಥೆಯಿಂದ ಸಹ ಹೊರಬಂದು ಬಿಹಾರದಲ್ಲಿ ಜನ ಸೂರಜ್ ಎಂಬ ಪಕ್ಷವನ್ನು ಸ್ಥಾಪಿಸಿದ್ದಾರೆ ಅಲ್ಲಿ ಪಾದಯಾತ್ರೆ ಮಾಡುತ್ತಿರುವ ಅವರು ಅಲ್ಲಿನ ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಮುಂದಿನ ವರ್ಷ ಬಿಹಾರದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರಂತೆ.
ಇತ್ತೀಚೆಗೆ ನಡೆದಂತ ಲೋಕಸಭಾ ಚುನಾವಣೆಯ ವೇಳೆ ಯಾವ ರಾಜಕೀಯ ಪಕ್ಷಕ್ಕೂ ತಂತ್ರ ರೂಪಿಸುವ ಕಾರ್ಯ ಮಾಡದೆ ದೂರ ಇದ್ದ ಅವರು ತಾವು ಹೊರಬಂದ ಐ-ಪ್ಯಾಕ್ ಸಂಸ್ಥೆ ಆಂಧ್ರಪ್ರದೇಶದ YCP ಪಕ್ಷಕ್ಕಾಗಿ ಕೆಲಸ ಮಾಡಿತು.ಆದರೆ ಪ್ರಶಾಂತ್ ಕಿಶೋರ್ ಟಿಡಿಪಿಗೆ ಸಲಹೆ ನೀಡಿದ್ದಾರೆ ಎಂಬ ಮಾತು ಕೇಳಿಬಂದಿತ್ತು ಅಆರ್ಆ ಸಲಹೆ ಕೊಟ್ಟರೂ ಕೊಡದಿದ್ದರೂ ಚುನಾವಣೆಗೂ ಮುನ್ನ ತಮ್ಮ ನಿರೀಕ್ಷೆಗಳನ್ನು ಪದೇ ಪದೇ ಹೇಳುತ್ತಿದ್ದ ಅವರು. ಜಗನ್ಮೋಹನ್ ರೆಡ್ಡಿ ಭಾರೀ ಸೋಲು ಕಾಣಲಿದ್ದಾರೆ ಎಂದು ಭವಿಷ್ಯ ನುಡಿದಿದ್ದು ಪ್ರಶಾಂತ್ ಕಿಶೋರ್ ಮಾತಿಗೆ ಕನಿಷ್ಠ ರೂ. ನೂರು ಕೋಟಿ ಎಂದು ಅರ್ಥ ಆಗಿರುತ್ತದೆ.
Breaking News
- ಶ್ರೀನಿವಾಸಪುರ:ಸಾಂಸ್ಕೃತಿಕ ಮೆರಗು ನೀಡಿದ ಊರ ದೇವರ ಪಲ್ಲಕ್ಕಿ ಹಾಗೂ ಕರಗ ಉತ್ಸವ!
- ಕಾಣಿಪಾಕಂ ಅರ್ಚಕ ಗಣೇಶ್ ಅವರಿಗೆ AP ಸರ್ಕಾರದಿಂದ ಯುಗಾದಿ ಪ್ರಶಸ್ತಿ ಪ್ರದಾನ
- ಶ್ರೀನಿವಾಸಪುರ ಪಟ್ಟಣ ಯುಗಾದಿ ಮುನ್ನ ನಡೆದ ವಿಜೃಂಭಣೆಯ ಹಸಿ ಕರಗ!
- ಶ್ರೀನಿವಾಸಪುರ ಪುರಸಭೆಯಲ್ಲಿ 87 ಲಕ್ಷ ಉಳಿತಾಯ ಬಜೆಟ್!
- “ಬ್ರೋ” ಎಂದ ಡಿಲವರಿ ಬಾಯ್ ಮೇಲೆ ಅಮಾನವೀಯವಾಗಿ ಹಲ್ಲೆ ಮಾಡೋದಾ?
- ಯಲ್ದೂರು ಬಾಬು ಬೆಂಗಳೂರು ಗ್ರೈನ್ ಮರ್ಚೆಂಟ್ಸ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ!
- ಕಾಟಮರಾಯ ಕದರಿ ನರಸಿಂಹ ಸ್ವಾಮಿ ರಥಕ್ಕೆ ನೂರಾರು ವರ್ಷಗಳ ಇತಿಹಾಸ!
- ಮೀಸಗಾನಹಳ್ಳಿ ವೆಂಕಟರೆಡ್ಡಿ ಮೇಷ್ಟ್ರೀಗೆ ಆಂಧ್ರ ವಿದ್ಯಾರ್ಥಿಗಳಿಂದ ಸನ್ಮಾನ!
- ಶ್ರೀನಿವಾಸಪುರದಲ್ಲಿ ಹೊಸ ಸಂವತ್ಸರಕ್ಕೆ ಮುನ್ನ ಬಂದ ಮಳೆ!
- ಕೆಟ್ಟು ನಿಂತ ಬೆಂಗಳೂರು-ಕೋಲಾರ ಮೆಮೊ ರೈಲು ,ರಾತ್ರಿವೇಳೆ ಪರದಾಡಿದ ಪ್ರಯಾಣಿಕರು!
Friday, April 4