ನ್ಯೂಜ್ ಡೆಸ್ಕ್:ಭಾರತೀಯ ಚಿತ್ರರಂಗದ ಅಭಿವೃದ್ಧಿಯಲ್ಲಿ ಎನ್.ಟಿ.ರಾಮರಾವ್ ಪಾತ್ರ ಅತ್ಯಂತ ಮಹತ್ವದ್ದು ಅವರು ಕೃಷ್ಣ ಮತ್ತು ರಾಮನಂತಹ ಪಾತ್ರಗಳಲ್ಲಿ ನಟಿಸುವ ಮೂಲಕ ಜನರು ಅವರಲ್ಲಿ ದೇವರ ರೂಪಗಳನ್ನು ಆ ಪಾತ್ರಗಳ ಪ್ರಭಾವ ಇಂದಿಗೂ ಜನಮಾನದಲ್ಲಿ ಅಳಿಸಲಾಗದ ಛಾಪು ಮೂಡಿಸಿದೆ ಎಂದು ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು ಅವರು ತೆಲಗು ಸಿನಿಮಾ ರಂಗದ ಮೇರು ನಟ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ದಿವಂಗತ ನಂದಮೂರಿ ತಾರಕ ರಾಮಾರಾವ್(NTR) ಅವರ ನೂರನೆ ವರ್ಷದ ಸವಿನೆನಪಿಗಾಗಿ ಕೇಂದ್ರ ಸರ್ಕಾರ ಹೊರತಂದಿರುವ ನೂರು ರೂಪಾಯಿ ಮೌಲ್ಯದ ನಾಣ್ಯವನ್ನು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ನಾಣ್ಯವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಎನ್ಟಿಆರ್ ಅವರ ನಟಸಿರುವ ‘ಮನುಷ್ಯುಲಂತ ಒಕ್ಕಟೆ’ ಚಿತ್ರದ ಮೂಲಕ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಕುರುತಂತೆ ಸಂದೇಶವನ್ನು ಸಮಾಜದಲ್ಲಿ ಹರಡಿದರು,ರಾಜಕೀಯ ರಂಗದಲ್ಲೂ ಎನ್.ಟಿ.ಆರ್ ತಮ್ಮ ವೈಶಿಷ್ಟತೆಯನ್ನು ಮೆರೆದು ಬಡವರು,ಶೋಷಿತರ ಪರವಾಗಿ ಸಾಮಾಜಿಕ ನ್ಯಾಯದಡಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ, ಎನ್ಟಿಆರ್ ಅವರ ಶತಮಾನೋತ್ಸವ ವರ್ಷದಲ್ಲಿ ನಾಣ್ಯವನ್ನು ತಂದಿದ್ದಕ್ಕಾಗಿ ಹಣಕಾಸು ಸಚಿವಾಲಯದ ಕಾರ್ಯವನ್ನು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಲು ಎನ್.ಟಿ.ಆರ್ ಕುಟುಂಬದ ಎಲ್ಲರಿಗೂ ವಿಶೇಷ ಆಹ್ವಾನ ನೀಡಲಾಗಿತ್ತು ಅದರಂತೆ ಕಾರ್ಯಕ್ರಮದಲ್ಲಿ NTR ಮಕ್ಕಳಾದ ನಟ ನಂದಮೂರಿ ಬಾಲಕೃಷ್ಣ, ಆಳಿಯ ಮಾಜಿ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು, ದಗ್ಗುಬಾಟಿ ವೆಂಕಟೇಶ್ವರಲು, ಹೆಣ್ಣುಮಕ್ಕಳಾದ ಪುರಂದೇಶ್ವರಿ, ಭುವನೇಶ್ವರಿ, ಗೋರಪಾಟಿ ಲೋಕೇಶ್ವರಿ, ಮೊಮ್ಮಗಳು ನಾರಾ ಬ್ರಾಹ್ಮಿಣಿ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ದ ಸೇರಿದಂತೆ ರಾಜಕೀಯ ರಂಗದ ಹಲವರು ಭಾಗವಹಿಸಿದ್ದರಾದರೂ ವೇದಿಕೆಯಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ವೇದಿಕೆ ಹಂಚಿಕೊಳ್ಳಲು NTR ಮಕ್ಕಳಾದ ನಟ ನಂದಮೂರಿ ಬಾಲಕೃಷ್ಣ,ಮೊಹನ್ ಕೃಷ್ಣ, ರಾಮಕೃಷ್ಣ, ಪುರಂದರೇಶ್ವರಿ,ಭುವನೇಶ್ವರಿ,ಗೋರಪಾಟಿ ಲೋಕೇಶ್ವರಿ ಮಾತ್ರ ಅವಕಾಶ ಕಲ್ಪಿಸಲಾಗಿತ್ತು.
ಕಾರ್ಯಕ್ರದಿಂದ ದೂರ ಉಳಿದ ಜೂ.ಎನ್.ಟಿ.ಆರ್
NTR ಮೊಮ್ಮಗ ಖ್ಯಾತ ನಟ ಜೂನಿಯರ್ ಎನ್.ಟಿ.ಆರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸದೆ ದೂರ ಉಳಿಯುವ ಮೂಲಕ ಹೈರು ಹಾಜರಿ ಚರ್ಚೆಗೆ ಕಾರಣವಾಗಿತ್ತು ಎನ್ನಲಾಗಿದೆ.ಕುಟುಂಬದ ಆಪ್ತರು ಹೇಳುವಂತೆ ಜೂನಿಯರ್ ಎನ್.ಟಿ.ಆರ್ ದೇವರ ಸಿನೆಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು ಎನ್.ಟಿ.ಆರ್ ರವರ ಸ್ಮರಣಾರ್ಥ ನಾಣ್ಯ ಬಿಡುಗಡೆ ಕಾರ್ಯಕ್ರಮಕ್ಕೆ ಹಾಜರಾಗಿಲ್ಲ ಎನ್ನಲಾಗುತ್ತಿದೆ.