ಶ್ರೀನಿವಾಸಪುರ:ಯಾರು ಆತಂಕ ಪಡಬೇಡಿ, ನಿಮ್ಮನ್ನು ಯಾರು ಏನು ಮಾಡುವುದಿಲ್ಲ ನೀವು ಧೈರ್ಯದಿಂದ ಇರಿ ನಿಮ್ಮೊಂದಿಗೆ ನಾನು ಇರುತ್ತೇನೆ ಎಂದು ಶಾಸಕ ವೆಂಕಟಶಿವಾರೆಡ್ಡಿ ತಾಲೂಕಿನ ನಂಬಿಹಳ್ಳಿ ಗ್ರಾಮಸ್ಥರಿಗೆ ಧೈರ್ಯ ತುಂಬಿದರು ಅವರು ಶನಿವಾರ ನಂಬಿಹಳ್ಳಿ ಗ್ರಾಮಕ್ಕೆ ತೆರಳಿ ಗ್ರಾಮಸ್ಥರೊಂದಿಗೆ ಮಾತನಾಡಿ ಯಾರು ಆತಂಕ ಪಡುವುದು ಬೇಡ ಗ್ರಾಮದಲ್ಲಿ ದುರದೃಷ್ಟಕರ ಘಟನೆ ನಡೆಯಬಾರದು ನಡೆದುಹೋಗಿದೆ ಇದು ಅತ್ಯಂತ ನೋವಿನ ವಿಚಾರ,ಘಟನೆ ನಡೆದಾಗ ಜನತೆ ಭಾವೋದ್ವೇಗಕ್ಕೆ ಒಳಗಾದ ವಿಚಾರದಲ್ಲಿ ಗ್ರಾಮಸ್ಥರ ಮೇಲೆ ಪೋಲಿಸ್ ಪ್ರಕರಣ ದಾಖಲಾಗಿರುವ ಕುರಿತಾಗಿ ಮಾತನಾಡಿದ ಅವರು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ನಾನು ಮಾತನಾಡುತ್ತೇನೆ ಯಾರು ಭಯಪಡಬೇಡಿ ಗ್ರಾಮದಲ್ಲಿ ಶಾಂತಿ ಸೌಹಾರ್ದತೆಯಿಂದ ಗಣೇಶ ಹಬ್ಬ ಆಚರಿಸಿಕೊಳ್ಳುವಂತೆ ಹೇಳಿದರು.
ಮೃತ ಮಹಿಳೆ ಕುಟುಂಬಸ್ಥರನ್ನು ಭೇಟಿ ಮಾಡಿದ ಶಾಸಕ ಅವರ ಕುಟುಂಬ ಸದಸ್ಯರನ್ನು ಮಾತನಾಡಿ ಘಟನೆ ನಡೆದಿರುವುದು ವಿಷಾಧಕರ ನನಗೆ ವೈಯುಕ್ತಿಕವಾಗಿ ನೋವಾಗಿದೆ ತಾವು ಧೈರ್ಯದಿಂದ ಇರುವಂತೆ ತಿಳಿಸಿದರು. ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಕೊಡಿಸುವ ಭರವಸೆ ನೀಡಿದರು.
ಪೋಲಿಸ್ ಕೇಸಿಗೆ ಹೆದರಿ ಊರು ಬಿಟ್ಟ ಜನರು
ನಂಬಿಹಳ್ಳಿ ಗ್ರಾಮದಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆಯಾದ ನಂತರದಲ್ಲಿ ಗ್ರಾಮಸ್ಥರು ಭಾವೋದ್ವೇಗಕ್ಕೆ ಒಳಗಾಗಿ ಮಹಿಳೆಯನ್ನು ಕೊಂದ ಆರೋಪಿ ನಾಗೇಶ್ ನಿಗೆ ನಾವೆ ಶಿಕ್ಷೆ ಕೊಡುತ್ತೇವೆ ಅವನನ್ನು ನಮಗೆ ಹಸ್ತಾಂತರಿಸುವಂತೆ ಒತ್ತಾಯಿಸಿ ನಂಬಿಹಳ್ಳಿ ಹಾಗು ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಜನರು ಪೋಲಿಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಲ್ಲದೆ ಆರೋಪಿ ನಾಗೇಶ್ ಅವಿತು ಕುಳತಿದ್ದ ಕಟ್ಟಡದ ಮೇಲೆ ಪೋಲಿಸರು ಇರುವುದನ್ನು ಲೆಕ್ಕಿಸದೆ ಕಲ್ಲೇಸೆದು ದಾಳಿ ಮಾಡಿದರು,ಸ್ಥಳದಲ್ಲಿ ಕೋಲಾರ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಇದ್ದರು ಸಹ ಅವರನ್ನು ನೂಕನುಗ್ಗಲಿನಲ್ಲಿ ಎಳೆದಾಡಿದಲ್ಲದೆ ಅವರ ಮನವಿಗೂ ಸ್ಪಂದಿಸದ ಕೆಲವರು ಆವೇಶದಿಂದ ವರ್ತಿಸಿದ ಪರಿಣಾಮ ಪೋಲಿಸರು ಅನಿವಾರ್ಯವಾಗಿ ಗಾಳಿಯಲ್ಲು ಗುಂಡು ಹಾರಿಸಿ ಜನರನ್ನು ಚದರಿಸಿದರು ಈ ಹಿನ್ನಲೆಯಲ್ಲಿ ಜನರ ವರ್ತನೆ ಪೋಲಿಸರ ಕರ್ತವ್ಯಕ್ಕೆ ಅಡ್ದಿ ಪಡಿಸಿದ ಆರೋಪಕ್ಕೆ ಒಳಗಾಗಿದ್ದು ಈ ಬಗ್ಗೆ ಪೋಲಿಸ್ ಅಧಿಕಾರಿ ಈಶ್ವರಪ್ಪ ನೀಡಿರುವ ದೂರಿನನ್ವಯ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರ ವಿರುದ್ದ ಪೋಲಿಸ್ ಇಲಾಖೆಯಲ್ಲಿ ದೂರು ದಾಖಲಾಗಿದೆ,ಸೆಕ್ಷನ್ 143, 147, 148, 307, 353, 149 ಅಡಿ ದೂರು ದಾಖಲುಮಾಡಿಕೊಂಡಿರುವ ಪೋಲಿಸರು ದೂರಿನಲ್ಲಿ ಹೆಸರು ಇರುವಂತವರನ್ನು ಭಂಧನಕ್ಕೆ ಮುಂದಾಗಿರುವ ಹಿನ್ನಲೆಯಲ್ಲಿ ನಂಬಿಹಳ್ಳಿಯ ಗ್ರಾಮದ ಬಹುತೇಕ ಪುರುಷರು ಊರು ಕಾಲಿಮಾಡಿರುತ್ತಾರೆ.
Breaking News
- ಶ್ರೀನಿವಾಸಪುರ ಕಸಬಾ ಸೊಸೈಟಿ ಅಧ್ಯಕ್ಷ ಗಾದಿ ಕಾಂಗ್ರೆಸ್ ಅಭ್ಯರ್ಥಿಗಳ ನಡುವೆ ಚುನಾವಣೆ!
- ಶ್ರೀನಿವಾಸಪುರ ಜೆ.ತಿಮ್ಮಸಂದ್ರ ಪಂಚಾಯಿತಿ ಅಧ್ಯಕ್ಷರಾಗಿ ಕಲ್ಲೂರು ಶಂಕರರೆಡ್ಡಿ
- ಚಿಂತಾಮಣಿ ವ್ಯಕ್ತಿ ಆಂಧ್ರದ ರಸ್ತೆ ಅಪಘಾತದಲ್ಲಿ ಸಾವು
- ಶ್ರೀನಿವಾಸಪುರ ಕನಕದಾಸರ ಜಯಂತಿಗೆ ಗೈರಾದ ಅಧಿಕಾರಿಗಳ ವಿರುದ್ದ ಶಾಸಕ ಗರಂ!
- ಶ್ರೀನಿವಾಸಪುರ ಸರ್ಕಾರಿ ನೌಕರರ ಸಂಘದ ಹೊಸ BOSS ಭೈರೇಗೌಡ
- ಶ್ರೀನಿವಾಸಪುರದಲ್ಲಿ ಕಾರ್ತಿಕ ಹುಣ್ಣಿಮೆ ವಿಶೇಷ ಗಿರಿಜಾ ಕಲ್ಯಾಣ
- RCS ಮಂಡಿ ವತಿಯಿಂದ ಬೆಂಗಳೂರು ಕೃಷಿ ಮೇಳಕ್ಕೆ ಬಸ್ಸುಗಳ ವ್ಯವಸ್ಥೆ.
- ಅಮೇರಿಕಾದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ಹಿಂದು ತುಳಸಿ ಗಬ್ಬಾರ್ಡ್!
- ವೈಷ್ಣೋದೇವಿ ಯಾತ್ರೆಗೂ ಸಹಾಯಧನ ಮಂತ್ರಿ ರಾಮಲಿಂಗಾರೆಡ್ಡಿ ಘೋಷಣೆ
- ಶ್ರೀನಿವಾಸಪುರ-ಮುಳಬಾಗಿಲು ಹೆದ್ದಾರಿಯಲ್ಲಿ ಎರಡು ಪ್ರತ್ಯೇಕ ಅಪಘಾತ ಒರ್ವ ಸಾವು!
Friday, November 22