ದಾವಣಗೆರೆಯ ಜಿಲ್ಲೆಯ ಚನ್ನಗಿರಿ ತಾಲೂಕಿನ ಪ್ರಧಾನಿ ಮೋದಿ ಅಭಿಮಾನಿಯೊಬ್ಬ ತನ್ನ ಹೊಸ ಮನೆಗೆ ಶ್ರೀ ನರೇಂದ್ರ ಮೋದಿ ನಿಲಯ ಅಂತ ಹೆಸರಿಟ್ಟು ಅಭಿಮಾನ ಮೆರೆದಿದ್ದಾನೆ.
ನ್ಯೂಜ್ ಡೆಸ್ಕ್:ಭಾರತದ ಪ್ರಧಾನಿ ನರೇಂದ್ರ ಮೋದಿ ಭಾರತದಲ್ಲಷ್ಟೇ ಅಲ್ಲ,ವಿಶ್ವಾದ್ಯಂತ ಜನಪ್ರಿಯ ನಾಯಕ ಎಂದು ಗುರುತಿಸಲಾಗಿದೆ ವಿಶ್ವದಾದ್ಯಂತ ಅಪಾರ ಅಭಿಮಾನಿಗಳನ್ನು ಪಡೆದಿರುವ ಮೋದಿಯನ್ನು ಭಾರತದ ಜನತೆ ಸ್ಥಳೀಯ ರಾಜಕಾರಣದಲ್ಲಿ ಬಿಜೆಪಿ ಅಭ್ಯರ್ಥಿಗಳು ಇಷ್ಟವಾಗದಿದ್ದರೂ ಮೋದಿಯೇ ಭಾರತದ ರಾಜಕೀಯ ಚಿಕ್ಕಾಣಿ ಹಿವಿದು ದೇಶದ ಆಡಳಿತ ನಡೆಸಬೇಕು ಎಂದು ವೋಟ್ ಮಾಡಿ ಗೆಲ್ಲಿಸುವ ಮನೋಭಾವ ಹೊಂದಿದ್ದಾರೆ.ರಾಜಕೀಯದ ಆಗಲ ಆಳ ಗೊತ್ತಿಲ್ಲದ ಜನಸಾಮಾನ್ಯರು. ಸೋಶಿಯಲ್ ಮೀಡಿಯಾಗಳಲ್ಲಿ ನರೇಂದ್ರ ಮೋದಿ ಪರವಾಗಿ ಮಾತನಾಡುತ್ತಾರೆ ಅಲ್ಲೂ ಮೋದಿಯದೆ ಹವಾ! ಕೋಟ್ಯಾಂತರ ಅಭಿಮಾನಿಗಳು, ಫಾಲೋವರ್ಸ್ಗಳು ಮೋದಿಯವರಿಗಿದ್ದಾರೆ. ಇದೀಗ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ
ಮೋದಿ ಅಭಿಮಾನಿ ಗೌಡರ ಹಾಲೇಶ್ ಎಂಬುವರು ತಮ್ಮ ಹೊಸ ಮನೆಗೆ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿಟ್ಟಿದ್ದಾರೆ. ಚನ್ನಗಿರಿಯ ಕಗತೂರು ರಸ್ತೆಯಲ್ಲಿ ಹೊಸ ಮನೆ ನಿರ್ಮಾಣ ಮಾಡಿ, ಅದಕ್ಕೆ ‘ಶ್ರೀ ನರೇಂದ್ರ ಮೋದಿ ನಿಲಯ ಅಂತ ಹೆಸರು ಇಟ್ಟಿದ್ದಾರೆ.
ಹೊಸ ಮನೆ ಮುಂದೆ ಮೋದಿಯವರ ಬೃಹತ್ ಭಾವಚಿತ್ರ
ಮನೆ ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿಸಿ ಅಭಿಮಾನ ಮೆರೆದಿದ್ದಾರೆ. ಹೊಸ ಮನೆ ಸಾರ್ವಜನಿಕರ ಆಕರ್ಷಣೆಯ ತಾಣವಾಗಿದೆ. ‘ನೂತನ ಮನೆಗೆ ಸಹ್ಯಾದ್ರಿ ಅಥವಾ ಶಿವಾಜಿ ಎಂದು ಹೆಸರಿಡಲು ಇಚ್ಛಿಸಿದ್ದೆವು. ನಾನು ನರೇಂದ್ರ ಮೋದಿಯವರ ಪಕ್ಕಾ ಅಭಿಮಾನಿ. ಹಾಗಾಗಿ ಅವರ ಹೆಸರನ್ನೇ ಮನೆಗೆ ಇಟ್ಟಿದ್ದೇನೆ’ ಎಂದು ಹಾಲೇಶ್ ಹೆಮ್ಮೆಯಿಂದ ಹೇಳಿದ್ದಾರೆ.
ಮೇ 3ರಂದು ಶ್ರೀ ನರೇಂದ್ರ ಮೋದಿ ನಿಲಯ ಉದ್ಘಾಟನೆ
ಮೇ 3ರಂದು ಅಂದರೆ ಬಸವೇಶ್ವರ ಜಯಂತಿಯಂದು ಶ್ರೀ ನರೇಂದ್ರ ಮೋದಿ ನಿಲಯ ಉದ್ಘಾಟನೆಯಾಗುತ್ತಿದೆ. ಮನೆ ಉದ್ಘಾಟನೆ ವೇಳೆ ಸ್ಥಳೀಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತಿತರರು ಆಗಮಿಸುತ್ತಾರೆ ಎಂದು ಹೇಳಲಾಗಿದೆ.
ಮೋದಿಯವರ ಕಟ್ಟಾ ಅಭಿಮಾನಿ ಹಾಲೇಶ್
ಹಾಲೇಶ್ ಅವರು ಪ್ರಧಾನಿ ಮೋದಿಯವರ ಕಟ್ಟಾ ಅಭಿಮಾನಿಯಂತೆ. ಅವರ ಪುತ್ರಿ ಭುವನೇಶ್ವರಿ ಕೂಡ ಮೋದಿಯವರ ಫ್ಯಾನ್. “ನರೇಂದ್ರ ಮೋದಿ ಅವರು ಗುಜರಾತ್ನ ಮುಖ್ಯಮಂತ್ರಿಯಾದಾಗಿನಿಂದ ಮತ್ತು ಈಗ ಪ್ರಧಾನಿಯಾದಾಗಿನಿಂದ ನಾವು ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದೇವೆ. ಕನಿಷ್ಠ ಪಕ್ಷ ನನ್ನ ಮಗಳ ಮನೆಗಾದರೂ ಅವರ ಹೆಸರು ಇಟ್ಟಿರುವ ತೃಪ್ತಿ ನನಗಿದೆ ಅಂತ ಹಾಲೇಶ್ ಹೇಳಿಕೊಂಡಿದ್ದಾರೆ.
ಈ ಹಿಂದೆ `ಗ್ಯಾಸ್ ಸಬ್ಸಿಡಿಯನ್ನು ತ್ಯಜಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದಾಗ, ನಾನು ತಕ್ಷಣವೇ ಸಬ್ಸಿಡಿಯನ್ನು ನಿರಾಕರಿಸಿದೆ ಮತ್ತು ಕೋವಿಡ್ -19 ಸಮಯದಲ್ಲಿ ಪಿಎಂ ಕೇರ್ಸ್ ನಿಧಿಗೆ ನನ್ನ ಕೈಲಾದ ಕೊಡುಗೆ ನೀಡಿದ್ದೇನೆ. ಜನರು ಪ್ರಧಾನಿ ತೋರಿದ ಮಾರ್ಗವನ್ನು ಅನುಸರಿಸಬೇಕು ಮತ್ತು ವಿಶ್ವ ವೇದಿಕೆಯಲ್ಲಿ ಭಾರತವನ್ನು ಶ್ರೇಷ್ಠಗೊಳಿಸಬೇಕು ಎಂದು ಹಾಲೇಶ್ ಅಭಿಪ್ರಾಯ.
ರಾಮನಗರದಲ್ಲೊಂದು ಮೋದಿ ನಿಲಯ
ನಾಲ್ಕೈದು ವರ್ಷಗಳ ಹಿಂದೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಯಲಿಯೂರು ಗ್ರಾಮದ ಮಾದಯ್ಯ ಶೆಟ್ಟಿ ಹೊಸದಾಗಿ ಮನೆ ನಿರ್ಮಿಸಿಕೊಂಡು ಮನೆಗೆ “ಶ್ರೀ ಮೋದಿ ನಿಲಯ” ಎಂದು ಹೆಸರಿಟ್ಟು ಅಭಿಮಾನ ಮೆರೆದಿದ್ದರು ಅಷ್ಟೆ ಅಲ್ಲದೇ ಕನಸಿನ ಮನೆಯ ಗೃಹ ಪ್ರವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿದ್ಷಾ ಅವರಿಗೆ ಆಹ್ವಾನವನ್ನು ಪ್ರಧಾನ ಮಂತ್ರಿ ಕಚೇರಿಗೆ ಅಂಚೆ ಮೂಲಕ ಆಹ್ವಾನ ಪತ್ರಿಕೆಯನ್ನು ಕಳುಹಿಸಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನಿಸಿದ್ದರು.